More

    ಯಲ್ಲಮ್ಮಗುಡ್ಡದಲ್ಲೇ ಉಳಿದ ಇಬ್ಬರು ಮಹಿಳೆಯರು!

    ಬೆಳಗಾವಿ: ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಬಂದಿದ್ದ ಇಬ್ಬರು ಮಹಿಳೆಯರು ಲಾಕ್‌ಡೌನ್‌ನಿಂದ ಅತಂತ್ರರಾಗಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ತಮ್ಮೂರಿಗೆ ವಾಪಸ್ ಹೋಗಲಾಗದೆ ದಿನ ದೂಡುತ್ತಿದ್ದಾರೆ.

    ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಲಾಂಜಾದ ಸಂಗೀತಾ ನಾಮದೇವ ವಾಘಮೋರೆ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಸುಶೀಲಾ ರಜಪೂತ ಸಂಕಷ್ಟಕ್ಕೆ ಸಿಲುಕಿದವರು. ಯಲ್ಲಮ್ಮ ದೇವಸ್ಥಾನ ಸಿಬ್ಬಂದಿ ನಿತ್ಯ ಮಧ್ಯಾಹ್ನ ಊಟ ನೀಡುತ್ತಾರೆ. ಊಟದ ಸಮಸ್ಯೆ ಇಲ್ಲ. ಆದರೆ, ತಾಲೂಕಾಡಳಿತ ನಮ್ಮೂರಿಗೆ ಕರೆದೊಯ್ಯಲು ವ್ಯವಸ್ಥೆ ಮಾಡಬೇಕು ಎಂದು ಅವರು ಕೋರಿದರು.

    ಇದನ್ನೂ ಓದಿ: 8 ಎಕರೆ ಜಮೀನಿನಲ್ಲಿ ಕೊಳೆಯುತ್ತಿದೆ ಕುಂಬಳಕಾಯಿ: ರೈತನಿಗೆ ಆದಾಯದ ಚಿಂತೆ!

    ಒಂದು ವಾರದೊಳಗೆ ಧಾರ್ಮಿಕ ವಿಧಿ-ವಿಧಾನ ಪೂರೈಸಿ, ವಾಪಸ್ ಹೋಗಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್ ಜಾರಿಯಾಯಿತು. ಅದು ಇಂದೋ, ನಾಳೆಯೋ ತೆರವಾಗುತ್ತದೆ ಎಂದು ಕಾದು ಸುಸ್ತಾಗಿದ್ದೇವೆ. ನನ್ನ ಮೂರು ಮಕ್ಕಳೊಂದಿಗೆ ಯಾವಾಗ ಊರು ಸೇರುತ್ತೇನೋ ಎಂದು ಮನಸ್ಸು ಚಡಪಡಿಸುತ್ತಿದೆ ಎಂದು ಸಂಗೀತಾ ಅಲವತ್ತುಕೊಂಡರು.

    ಅಲ್ಲಲ್ಲಿ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತ ಬದುಕು ಸಾಗಿಸುತ್ತಿದ್ದೆ. ಇಲ್ಲಿಗೆ ಬಂದ ನಾಲ್ಕೇ ದಿನಗಳಲ್ಲಿ ಲಾಕ್‌ಡೌನ್ ಜಾರಿಯಾಗಿ ತ್ರಿಶಂಕು ಸ್ಥಿತಿಗೆ ಸಿಲುಕಿದ್ದೇನೆ ಎಂದು ಸುಶೀಲಾ ಅಳಲು ತೋಡಿಕೊಂಡರು. ಸವದತ್ತಿ ತಾಲೂಕಿನ ಸುಕ್ಷೇತ್ರ ಯಲ್ಲಮ್ಮಗುಡ್ಡದಲ್ಲಿ ಮೂವರು ಮಕ್ಕಳೊಂದಿಗೆ ಅತಂತ್ರ ಸ್ಥಿತಿಗೆ ಸಿಲುಕಿರುವ ಸಂಗೀತಾ ವಾಘಮೋರೆ ಮತ್ತು ಇನ್ನೋರ್ವ ಮಹಿಳೆ ಸುಶೀಲಾ ರಜಪೂತ.

    5 ತಿಂಗಳಲ್ಲಿ 3 ಸಾವಿರ ಸುರಕ್ಷಿತ ಹೆರಿಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts