More

    ಸಮಾಜದ ಹಿತದೃಷ್ಟಿಯಿಂದ ಎರಡೂ ಸಂಘ ಒಂದಾಗಲಿ, ವಿಜಯನಗರ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಲ್.ಸಿದ್ದನಗೌಡ ಅನಿಸಿಕೆ

    ಕೊಟ್ಟೂರು: ಸಮಾಜದ ಹಿತದೃಷ್ಟಿಯಿಂದ ವಿಜಯನಗರ ಜಿಲ್ಲೆಯಲ್ಲಿನ ಎರಡೂ ಕುರುಬ ಸಂಘಗಳನ್ನು ಒಂದುಗೂಡಿಸಲು ಕಾಗಿನೆಲೆ ಪೀಠದ ಜಗದ್ಗುರು ನಿರಂಜನಾನಂದ ಪುರಿ ಸ್ವಾಮೀಜಿ ಮುಂದಾಗಬೇಕು ಎಂದು ವಿಜಯನಗರ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಲ್.ಸಿದ್ದನಗೌಡ ಹೇಳಿದರು.

    ತಾಲೂಕಿನ ಗಾಣಗಟ್ಟೆ ಗ್ರಾಮದ ಮಾಯಮ್ಮ ದೇವಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಒಂದು ಜಿಲ್ಲೆಯಲ್ಲಿ ಎರಡು ಕುರುಬ ಸಂಘಗಳಿರುವುದು ಒಳ್ಳೆಯದಲ್ಲ. ಆದ್ದರಿಂದ, ಸ್ವಾಮೀಜಿ ಒಂದುಗೂಡಿಸಬೇಕು ಎಂದು ಮನವಿ ಮಾಡಿದರು. ಕರ್ನಾಟಕ ರಾಜ್ಯ ಕುರುಬ ಸಂಘದ ನಿರ್ದೇಶಕ ಕಾವಲಿ ಹನುಮಂತಪ್ಪ ಮಾತನಾಡಿ, ನಮ್ಮಲ್ಲಿನ ಒಗ್ಗಟ್ಟು ಚದುರಿಹೋಗಿ ಎರಡು ಸಂಘ ಆಗಿವೆ. ಇದರಿಂದ ಸಮಾಜಕ್ಕೆ ನಷ್ಟವಾಗುತ್ತದೆ. ಆದ್ದರಿಂದ ಕಾಗಿನೆಲೆ ಶ್ರೀಗಳು ನೀಡುವ ಮಾರ್ಗದರ್ಶನಕ್ಕೆ ಎರಡೂ ಸಂಘಗಳು ಬದ್ಧ್ದವಾಗಿ ನಡೆದುಕೊಳ್ಳಬೇಕು ಎಂದರು.

    ಕರ್ನಾಟಕ ರಾಜ್ಯ ಕುರುಬರ ಸಂಘದ ನಿರ್ದೇಶಕ ಮರಿರಾಮಪ್ಪ ಮಾತನಾಡಿ, ಎರಡು ಸಂಘಗಳಿಂದಾಗಿ ಮುಖಂಡರು, ಬಂಧುಗಳಲ್ಲಿ ಮನಸ್ತಾಪ ಉಂಟಾಗುವ ಮೊದಲೇ ಸಂಘಗಳ ಪದಾಧಿಕಾರಿಗಳು ಸ್ವ-ಪ್ರತಿಷ್ಠೆ ಬದಿಗಿಟ್ಟು ಒಂದಾಗಬೇಕು ಎಂದರು. ಸಂಘದ ಕಾರ್ಯಾಧ್ಯಕ್ಷ ಪರಮೇಶ್ವರಪ್ಪ, ಕಾಗಿನೆಲೆ ಕನಕ ಪೀಠದ ಧರ್ಮದರ್ಶಿ ಗಾದಿಗನೂರು ಹಾಲಪ್ಪ, ಮಜ್ಜಿಗೆ ಬಸವರಾಜ್, ಮೂಗಪ್ಪ ಮುಂತಾದವರು ಮಾತನಾಡಿದರು. ಹಗಡಲಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಬೀರಪ್ಪ, ಕೊಟ್ಟೂರು ತಾಲೂಕು ಕುರುಬ ಸಂಘದ ಅಧ್ಯಕ್ಷ ಮೂಗಪ್ಪ ಇತರ ಮುಖಂಡರು ಇದ್ದರು.

    ವಿಜಯನಗರ ಜಿಲ್ಲೆಯ ಪ್ರತಿ ತಾಲೂಕಿಗೆ ಹೋಗಿ, ಜನರನ್ನು ಸಂಪರ್ಕಿಸಿ ಸಂಘ ಸ್ಥಾಪಿಸಿದ್ದೇವೆ. ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಪದಾಧಿಕಾರಿಗಳನ್ನು, ಎಲ್ಲ ಗ್ರಾಮಗಳಲ್ಲಿ ಸದಸ್ಯರನ್ನು ನೇಮಕಮಾಡಲಾಗಿದೆ. 2 ವರ್ಷದ ನಂತರ ಜಿಲ್ಲಾಧ್ಯಕ್ಷರ ಚುನಾವಣೆ ನಡೆಸಲಾಗಿದೆ. 2 ಸಂಘ ನಮಗೂ ಇಷ್ಟವಿಲ್ಲ. ಕಾಗಿನೆಲೆಶ್ರೀಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿ. ಒಮ್ಮತದ ಪದಾಧಿಕಾರಿಗಳು, ಅಧ್ಯಕ್ಷರ ಆಯ್ಕೆ ನಡೆಯಲಿ. ವಿಜಯನಗರ ಜಿಲ್ಲೆಗೆ ಕಾಗಿನೆಲೆ ಪೀಠದ ಧರ್ಮದರ್ಶಿಯಾಗಿ ಕುರಿ ಶಿವಮೂರ್ತಿ ಅವರನ್ನು ಶ್ರೀಗಳು ನೇಮಕ ಮಾಡಲಿ ಎಂಬುದು ನಮ್ಮೆಲ್ಲರ ಅನಿಸಿಕೆ. ಸಮಾಜದ ಪ್ರಮುಖರನ್ನು ಸಂಪರ್ಕಿಸದೆ ಏಕಪಕ್ಷೀಯವಾಗಿ ಕೇವಲ ಬೆರಳೆಣಿಯಷ್ಟು ಜನ ಬೆಂಗಳೂರಿನಲ್ಲಿ ಕುರುಬ ಸಂಘ ಸ್ಥಾಪಿಸಿ ಅಧ್ಯಕ್ಷರು ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದರಿಂದ ಗೊಂದಲವಾಗಿದೆ.
    ಅಯ್ಯಳಿ ತಿಮ್ಮಪ್ಪ
    ವಿಜಯನಗರ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts