More

    ಭೂಕುಸಿತಕ್ಕೆ ಬದುಕು ಕತ್ತಲು: ಜೋಶಿಮಠಕ್ಕೆ ಸಿಎಂ ಧಾಮಿ ಭೇಟಿ, ಜನರ ಸ್ಥಳಾಂತರಕ್ಕೆ ಸೂಚನೆ

    ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಭೂಮಿ ಕುಸಿಯುತ್ತಿರುವುದರಿಂದ ಮನೆ, ಕಟ್ಟಡಗಳು ಬಿರುಕು ಬಿಡುತ್ತಿರುವ/ತಗ್ಗುತ್ತಿರುವ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ 600 ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಸಿಎಂ ಪುಷ್ಕರ್​ ಸಿಂಗ್​ ಧಾಮಿ ಆದೇಶಿಸಿದ್ದಾರೆ.

    ಜೋಶಿಮಠಕ್ಕೆ ಭೇಟಿ ನೀಡಿದ ಸಿಎಂ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಕೆಲವು ಕಡೆ ಸಂತ್ರಸ್ತ ನಿವಾಸಿಗರನ್ನು ಭೇಟಿ ಮಾಡಿ ಸರ್ಕಾರ ಜನರ ಹಿತಾಸಕ್ತಿ ಕಾಪಾಡಲಿದೆ ಎಂದು ಸಾಂತ್ವನ ಹೇಳಿದ್ದಾರೆ. ಭೂವಿಾನಿಗಳು ಭೂಮಿ ಬಿರುಕು ಬಿಡುತ್ತಿರಲು ಮೂಲ ಕಾರಣ-ವೇನು ಎಂಬ ಬಗ್ಗೆ ಅಧ್ಯಯನ ನಡೆಸಲಿದ್ದಾರೆ ಎಂದೂ ಮಾಹಿತಿ ಹಂಚಿ-ಕೊಂಡಿದ್ದಾರೆ. ಏತನ್ಮಧ್ಯೆ, ಭೂಮಿ ಕುಸಿತ/ತಗ್ಗುತ್ತಿರುವ ಕುರಿತು ಪ್ರ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ತರ ಸಮಿತಿಯನ್ನು ರಚಿಸಿದೆ. ಮಾನವ ವಾಸ್ತವ್ಯ, ಕಟ್ಟಡ, ಹೆದ್ದಾರಿ, ಮೂಲಸೌಕರ್ಯ ಮತ್ತು ನದಿ ವ್ಯವಸ್ಥೆಗಳ ಮೇಲೆ ಭೂಮಿ ಇದರ ಪರಿಣಾಮಗಳನ್ನು ಸಮಿತಿ ಅಧ್ಯಯನ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ. ಜೋಶಿಮಠದ ಅಪಾಯದಂಚಿನಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಸುರತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದ ಸಿಎಂ ಧಾಮಿ, ತಣದ ಮತ್ತು ದೀರ್ಕಾಲೀನ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಲಾಗುವುದು ಎಂದಿದ್ದಾರೆ. ಮನೆಗಳನ್ನು ಖಾಲಿ ಮಾಡಬೇಕಾದ ಸಂತ್ರಸ್ತರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮುಂದಿನ ಆರು ತಿಂಗಳು ಪ್ರತಿ ತಿಂಗಳಿಗೆ ರೂ 4,000 ಬಾಡಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.

    ಜೋಶಿಮಠದಲ್ಲಿ ವಿಪತ್ತು ನಿಯಂತ್ರಣ ಕೊಠಡಿ ಸ್ಥಾಪಿಸಲಾಗುವುದು. ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಗಳ ಸಮರ್ಪಕ ನಿಯೋಜನೆ ಇರಬೇಕು. ಸಂತ್ರಸ್ತ ಜನರಿಗೆ ಸಹಾಯ ಮಾಡಲು ಹೆಲಿಕಾಪ್ಟರ್​ ಸೇವೆಗಳನ್ನು ಲಭ್ಯಗೊಳಿಸಲಾಗಿದೆ ಎಂದೂ ಸಿಎಂ ಧಾಮಿ ತಿಳಿಸಿದ್ದಾರೆ. ಶುಕ್ರವಾರದಂದು ಸ್ಥಳಿಯ ದೇಗುಲವೊಂದು ಭೂ ಬಿರುಕಿನ ಕಾರಣದಿಂದಾಗಿ ಕುಸಿದು ಬಿದ್ದಿದೆ. ಇದು ಜನರ ಆತಂಕ ಹೆಚ್ಚಿಸಿದೆ. ಈ ಭಯ ಮುಂದುವರಿದಲ್ಲಿ ಸ್ಥಳಿಯರು ವಲಸೆ ಹೋಗುವುದು ಅನಿವಾರ್ಯವಾಗಲಿದೆ ಎಂದೂ ಜನ ಮಾತನಾಡಿಕೊಳ್ಳುತ್ತಿದ್ದಾರೆ.

    ಜೋಶಿಮಠದಿಂದ ಕೊಂಚ ದೂರದಲ್ಲಿರುವ ತಪೋವನದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಷ್ಣುಗಢ ಹೈಡಲ್​ ಪ್ರಾಜೆಕ್ಟ್​ ಹೆಸರಲ್ಲಿ ಸುರಂಗ ಕೊರೆಯುತ್ತಿರುವುದರಿಂದಲೇ ಭೂಮಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಆಗಿಂದಾಗ್ಗೆ ಇಲ್ಲಿ ಸ್ಫೋಟದ ಶಬ್ದಗಳು ಕೇಳಿಬರುತ್ತವೆ. ಆದರೆ, ಸರ್ಕಾರ ನಮಗೆ ಈ ಬಗ್ಗೆ ಮಾಹಿತಿಯೇ ನೀಡುತ್ತಿಲ್ಲ ಎಂದು ಕೆಲ ಹೊಟೇಲ್​ ಮಾಲೀಕರು, ಸ್ಥಳಿಯರು ಆರೋಪಿಸಿದ್ದಾರೆ.

    ಗುಡ್ಡಗಾಡಿನಲ್ಲಿ ಹೆಚ್ಚಿದ ಒತ್ತಡ
    ಹವಾಮಾನ ಬದಲಾವಣೆ, ನಿರಂತರ ಮೂಲ ಸೌಕರ್ಯ ಅಭಿವೃದ್ಧಿ, ನಿಸರ್ಗಕ್ಕೆ ವಿರುದ್ಧವಾದ ಮಾನವ ಚಟುವಟಿಕೆ ಸೇರಿ ಹಲವು ದೀರ್-ಕಾಲದ ಅಂಶಗಳು ಭೂ ಬಿರುಕಿಗೆ ಕಾರಣ. ಈ ಬಗ್ಗೆ ಈ ಹಿಂದೆ ನೀಡಿದ್ದ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತರು ಹೇಳಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಹಿಮಾಲಯ ಪ್ರದೇಶವನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗುತ್ತಿದೆ ಎಂದು ಜ್ಯೋತಿರ್​ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರನಂದ ಆರೋಪಿಸಿದ್ದಾರೆ.

    ಹಿಂದುಗಳ ಪವಿತ್ರ ತಾಣ
    ಜೋಶಿಮಠ ಹಿಂದು ಶ್ರದ್ಧಾಳು ಗಳ ಪವಿತ್ರ ತಾಣವಾಗಿದ್ದು, ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಒಂದು. ಅದೇ ರೀತಿ ಬದರಿನಾಥಕ್ಕೆ ಜೋಶಿಮಠ ಮೂಲಕವೇ ತೆರಳಬೇಕು. ಭಾರತ-ಚೀನಾ ಗಡಿ ಜೋಶಿಮಠದಿಂದ ಸುಮಾರು 50 ಕಿ.ಮೀ. ಅಂತರದಲ್ಲಿದೆ. ಹಾಗಾಗಿ ಭಾರತದ ಗಡಿಯ ಸಮೀಪವಿರುವ ಪ್ರಮುಖ ಸೇನಾ ನೆಲೆಗಳಲ್ಲಿ ಇದೂ ಒಂದು. ಸಿಖ್ಖರ ಧಾರ್ಮಿಕ ಕೇಂದ್ರ ಹೇಮಕುಂಡ್​ ಸಾಹಿಬ್​ಗೆ ಗೇಟ್​ವೇ ಎಂದೂ ಜೋಶಿಮಠ ಪ್ರಸಿದ್ಧಿ ಪಡೆದಿದೆ. ಏಷ್ಯಾದ ಅತಿ ದೊಡ್ಡ/ಉದ್ದದ ಔಲಿ ರೋಪ್​ವೇ ಇಲ್ಲಿದೆ. ರೋಪ್​ವೇ ಕೆಳಭಾಗ ದೊಡ್ಡ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೋಪ್​ ವೇ ಚಟುವಟಿಕೆಯನ್ನೀಗ ಸ್ಥಗಿತಗೊಳಿಸಲಾಗಿದೆ.

    ಬಿರಿಯಾನಿ ತಿಂದು ಯುವತಿ ದುರಂತ ಸಾವು: ಶಾಕಿಂಗ್​ ಸಂಗತಿ ಬಿಚ್ಚಿಟ್ಟ ಮೃತಳ ಸಹೋದರಿ…

    ಹತ್ತರ ವಯಸ್ಸಲ್ಲೇ ಅತ್ಯಾಚಾರ ಸಂತ್ರಸ್ತೆ, ಒಂದು ಕಾಲದ ಭಿಕ್ಷುಕಿ; ಈಗ ಅಂತಾರಾಷ್ಟ್ರೀಯ ಬ್ಯೂಟಿಕ್ವೀನ್!

    ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts