More

    ನದಿಯಲ್ಲಿ ಸಿಲುಕಿದ್ದ ವ್ಯಕ್ತಿ ಪಾರು

    ಕೊಕಟನೂರ: ಹಿಪ್ಪರಗಿ ಅಣೆಕಟ್ಟೆಯ ಹಿನ್ನೀರನ್ನು ಏಕಾಏಕಿ ಹರಿಬಿಟ್ಟ ಪರಿಣಾಮ ನದಿಯ ಮಧ್ಯೆ ಸಿಲುಕಿಕೊಂಡ ವ್ಯಕ್ತಿಯೋರ್ವನನ್ನು ಸವದಿ ದರ್ಗಾ ಗ್ರಾಮದ ಯುವಕರು ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.

    ಬಳ್ಳಿಗೇರಿ ಗ್ರಾಮದ ಸಿಕಂದರ್ ದೇವನಾಳ, ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. ಜನವಾಡ ಗ್ರಾಮದ ಸಂಬಂಧಿಕರ ಮನೆಯಲ್ಲಿ ಸಿಕಂದರ ವಾಸವಿದ್ದ. ಲಾಕ್‌ಡೌನ್ ನಿಮಿತ್ತ ಹಿಪ್ಪರಗಿ ಅಣೆಕಟ್ಟೆಯ ಮೇಲಿರುವ ರಸ್ತೆಯನ್ನು ಬಂದ್ ಮಾಡಿದ್ದರಿಂದ ದೈನಂದಿನ ಕೆಲಸಕ್ಕೆಂದು ಹಿಪ್ಪರಗಿ ಗ್ರಾಮಕ್ಕೆ ತೆರಳಿದಾಗ ನದಿಯಲ್ಲಿ ನೀರು ಇರಲಿಲ್ಲ. ಆದರೆ, ಭಾನುವಾರ 2ನೇ ಹಂತದ ಹಿಪ್ಪರಗಿ ಅಣೆಕಟ್ಟೆಯಿಂದ 0.3 ಟಿಎಂಸಿ ನೀರು ಹರಿಬಿಟ್ಟಿದ್ದರಿಂದ ಸಿಕಂದರ್ ಮರಳಿ ಜನವಾಡ ಗ್ರಾಮಕ್ಕೆ ಬರುವಾಗ ನದಿಯ ಮಧ್ಯೆ ಸಿಲುಕಿಕೊಂಡಿದ್ದಾನೆ. ಸುದ್ದಿ ತಿಳಿದ ತಕ್ಷಣ ಸವದಿ ದರ್ಗಾ ಗ್ರಾಮದ ರಫೀಕ್ ಮುಲ್ಲಾ, ಅಬುಬಕರ್ ಮುಲ್ಲಾ, ಶಂಸುದ್ದೀನ್ ಮುಲ್ಲಾ, ಆಸೀಫ್ ಮೋಳೆ ಎಂಬ ಯುವಕರು ನದಿಯಲ್ಲಿ ಹಗ್ಗ ಬಿಟ್ಟು ರಕ್ಷಣೆ ಮಾಡಿದ್ದಾರೆ. ಯುವಕರ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅಧಿಕಾರಿಗಳ ವಿರುದ್ಧ ಆಕ್ರೋಶ

    ಹಿಪ್ಪರಗಿ ಅಣೆಕಟ್ಟೆಯ ಮೇಲಿನ ರಸ್ತೆ ಬಂದ್ ಮಾಡಿದ್ದರಿಂದ ವಿವಿಧ ಗ್ರಾಮಸ್ಥರು ನದಿಯ ಮಾರ್ಗದಲ್ಲೇ ಸಂಚರಿಸುತ್ತಿದ್ದರು. ಆದರೆ, ಹಿಪ್ಪರಗಿ ಅಣೆಕಟ್ಟೆಯ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ನೀಡದೆ ನೀರು ಬಿಟ್ಟಿದ್ದಾರೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts