More

    ಭಾರಿ ಕುತೂಹಲ ಹುಟ್ಟಿಸಿದ ಸೋಲು-ಗೆಲುವಿನ ಬಗ್ಗೆ ದೆಹಲಿ ಬಿಜೆಪಿ ಕಚೇರಿಯಲ್ಲಿನ ಪೋಸ್ಟರ್​ ಸಂದೇಶ!

    ನವದೆಹಲಿ: ರಾಜಧಾನಿ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಆಮ್​ ಆದ್ಮಿ ಪಕ್ಷ ಒಟ್ಟು 70 ಸ್ಥಾನಗಳಲ್ಲಿ 63ರಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ಅಧಿಕೃತ ಬಾಕಿಯೊಂದೆ ಬಾಕಿ ಇದೆ. 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಈ ಬಾರಿಯು ಬಿಜೆಪಿ ಅಧಿಕಾರದ ಗದ್ದುಗೆಯಿಂದ ಜಾರಿಕೊಳ್ಳುತ್ತಿದೆ. ಇದರ ನಡುವೆಯೇ ದೆಹಲಿ ಬಿಜೆಪಿ ಕಚೇರಿಯಲ್ಲಿ ಅವಳವಡಿಸಲಾಗಿರುವ ನಾಮಫಲಕವೊಂದು ಭಾರಿ ಸುದ್ದಿಯಾಗಿದೆ.

    ಗೃಹ ಸಚಿವ ಅಮಿತ್​ ಷಾ ಫೋಟೋವನ್ನೊಳಗೊಂಡಂತೆ ದ್ವಂದ್ವಾರ್ಥ ಹೊಂದಿರುವ ಪೋಸ್ಟರ್ ಸಂದೇಶ ಭಾರಿ ಕುತೂಹಲ ಮೂಡಿಸಿದೆ.​ ಪೋಸ್ಟರ್​ನಲ್ಲಿರುವಂತೆ “ವಿಜಯೋತ್ಸವ ನಮ್ಮನ್ನು ಅಹಂಕಾರಿಗಳನ್ನಾಗಿ ಮಾಡುವುದಿಲ್ಲ ಮತ್ತು ಸೋಲು ನಮ್ಮನ್ನು ಹತಾಶೆಗೊಳಿಸುವುದಿಲ್ಲ” ಎಂದು ಬರೆಯಲಾಗಿದೆ. ಅಂದಹಾಗೆ ಅಮಿತ್​ ಷಾ ಅವರು ದೆಹಲಿ ಚುನಾವಣಾ ಪ್ರಚಾರದ ನೇತೃತ್ವವನ್ನು ವಹಿಸಿದ್ದರು.

    ದೆಹಲಿಯಲ್ಲಿ ಆಪ್​ ಗದ್ದುಗೆ ಏರಲಿದೆ ಎಂದು ಎಕ್ಸಿಟ್​ ಪೋಲ್​ ಕೂಡ ಭವಿಷ್ಯ ನುಡಿದಿತ್ತು. ಅದರಂತೆ ಆಪ್​ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಮೀಪದತ್ತ ಬಂದಿದೆ. ಒಟ್ಟು 70 ಸ್ಥಾನಗಳಲ್ಲಿ 63ರಲ್ಲಿ ಆಪ್​ ಹಾಗೂ 7 ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್​ ಶೂನ್ಯ ಸಂಪಾದಿಸಿದ್ದು, ಅಧಿಕೃತ ಬಾಕಿಯೊಂದೆ ಉಳಿದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts