More

    ಜನವರಿಯಲ್ಲಿ ಪಂಚವಟಿ ಕಲ್ಯಾಣ ಕೇಂದ್ರ ಉದ್ಘಾಟನೆ

    ಮುರಗೋಡ: ಸಮಾಜದ ಮಡಿಲಲ್ಲಿ ಬದುಕುವ ಸ್ವಾಮೀಜಿಗಳು ಸಮಾಜೋದ್ಧಾರಕ ಕಾರ್ಯಗಳನ್ನು ಅನುಷ್ಠಾನಕ್ಕೆ ತರಬೇಕು ಎಂಬ ದೃಢ ಸಂಕಲ್ಪದಿಂದ ಮುರಗೋಡ ಶಿವಯೋಗಿಗಳ ಪಂಚವಟಿಯನ್ನು 16 ವರ್ಷಗಳ ಹಿಂದೆ ಸ್ಥಾಪಿಸಿದ್ದು, ಈಗ ಉದ್ಘಾಟನೆಗೆ ಸಜ್ಜಾಗಿದೆ ಎಂದು ದುರದುಂಡೀಶ್ವರ ಮಠದ ಪೀಠಾಧಿಪತಿ ನೀಲಕಂಠ ಸ್ವಾಮೀಜಿ ಹೇಳಿದರು.

    ಸಮೀಪದ ಕಾರಿಮನಿ-ಸೊಗಲ ಮಧ್ಯದಲ್ಲಿರುವ ಪಂಚವಟಿಯಲ್ಲಿ ಶಿವ ಧ್ಯಾನ ಹಾಗೂ ವಿವಿಧ ಧಾರ್ಮಿಕ ಸಭೆಯ ಉದ್ಘಾಟನೆ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸತತ 16ವರ್ಷಗಳ ನಿರಂತರ ಕಾರ್ಯದಿಂದ ಶ್ರೀಕ್ಷೇತ್ರ ಸೊಗಲ ಸೋಮೇಶ್ವರ ಬೆಟ್ಟಕ್ಕೆ ಹೊಂದಿಕೊಂಡ 18 ಎಕರೆ ಜಮೀನಿನಲ್ಲಿ ಗೋ ಶಾಲೆ, ಧ್ಯಾನ ಮಂದಿರ, ಆರ್ಯರ್ವೇದಿಕ್ ವಟಿಕಾ, ವಿಘ್ನವಿನಾಶಕನ ದೇವಸ್ಥಾನ, ಶಿವನ ಉದ್ಯಾನ ನಿರ್ಮಾಣ ಪೂರ್ಣಗೊಂಡಿದ್ದು, 2024ರ ಜನವರಿ ತಿಂಗಳ ಮೊದಲ ವಾರದಲ್ಲಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

    ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎ್.ಎಸ್.ಸಿದ್ದನಗೌಡರ ಮಾತನಾಡಿ, ನಾಡಿಗೆ ಪಂಚವಟಿ ನೀಡುವ ಮೂಲಕ ಹಣ್ಣಿನ ಉದ್ಯಾನ ಬೆಳೆಸಿದ ನೀಲಕಂಠ ಸ್ವಾಮೀಜಿ ಕಾರ್ಯ ಶ್ಲಾಘನೀಯ ಎಂದರು.

    ಬೈಲಹೊಂಗಲ ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭು ನೀಲಕಂಠ ಸ್ವಾಮೀಜಿ, ಮಹಾಂತೇಶ ಮತ್ತಿಕೊಪ್ಪ, ವಿ.ಬಿ.ದೇಸಾಯಿ, ಅಶೋಕ ಶೆಟ್ಟರ, ಮಲ್ಲಿಕಾರ್ಜುನಗೌಡ ಸಿದ್ದನಗೌಡರ, ಸುರೇಶ ಮ್ಯಾಕಲ್, ಮಹಾಂತೇಶ ಹಿರೇಮಠ, ಮಹಾಂತೇಶ ಅಳಾಜ, ಶಂಕರಗೌಡ ಪಾಟೀಲ, ರುದ್ರಪ್ಪ ಹಕಾರಿ, ಉಮೇಶ ಹಿರೆಮಠ, ನಾಗರಾಜ ಬಸರಗಿ, ಶಿವಪ್ರಸಾದ ಹಿರೇಮಠ, ಮಹಾಂತ ಸ್ತುತಿ, ಸಂತೋಷ ಹಿರೇಮಠ, ಕುಮಾರ ಪೂಜಾರ, ಚಂದ್ರು ಕಾಳನ್ನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts