More

    ಜೈನ ಧರ್ಮದಲ್ಲಿ ಮಹಿಳೆಯರಿಗಿದೆ ಉನ್ನತ ಸ್ಥಾನ

    ಬೋರಗಾಂವ: ಪ್ರಾಚೀನ ಕಾಲದಿಂದ ಜೈನ ಧರ್ಮದಲ್ಲಿ ಪದ್ಮಾವತಿ ಹಾಗೂ ಜ್ವಾಲಾಮಾಲಿನಿ ದೇವಿಯನ್ನು ತಾಯಿ ಸಮಾನವಾಗಿ ಕಂಡಿದ್ದೇವೆ. ಸಮಾಜದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನವಿದ್ದರೆ ಅಭಿವೃದ್ಧಿ ಸಾಧ್ಯ ಎಂದು ನರಸಿಂಹರಾಜಪುರ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.

    ಪಟ್ಟಣದ ಶ್ರೀ 1008 ಭಗವಾನ ಪಾಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜ್ವಾಲಾಮಾಲಿನಿ ಹಾಗೂ ಪದ್ಮಾವತಿ ಮಾತಾ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಜಿನಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜೈನ ಧರ್ಮದಲ್ಲಿ ಮಹಿಳೆಯರಿಗೆ ಶ್ರೇಷ್ಠ ಸ್ಥಾನವಿದೆ. ತಾಯಿಯನ್ನು ಪೂಜಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಆರ್ಷ ಸಂಪ್ರದಾಯ ಉಳಿಸುವ ಕಾರ್ಯ ಶ್ರಾವಕ ರತ್ನ ರಾವಸಾಹೇಬ ಪಾಟೀಲ ಮಾಡುತ್ತಿದ್ದಾರೆ ಎಂದರು.

    ಅಮ್ಮಿನಬಾವಿ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ನಾಂದಣಿ ಜಿನಸೇನ ಭಟ್ಟಾರಕ ಸ್ವಾಮೀಜಿ, ಲಕ್ಕವಳ್ಳಿ ಋಷಭಸೇನ ಭಟ್ಟಾರಕ ಸ್ವಾಮೀಜಿ , ಕೊಲ್ಲಾಪುರ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೈನಸಭಾ ಅಧ್ಯಕ್ಷ ರಾವಸಾಹೇಬ ಪಾಟೀಲ, ಯುವ ಮುಖಂಡ ಉತ್ತಮ ಪಾಟೀಲ, ಮೀನಾಕ್ಷಿ ಪಾಟೀಲ, ಅಭಿನಂದನ ಪಾಟೀಲ ಹಾಗೂ ವಿನಯಶ್ರೀ ಪಾಟೀಲ, ದೀಪಾಲಿ ಪಾಟೀಲ, ಅಭಯಕುಮಾರ ಕರೋಲೆ, ಅಭಯಕುಮಾರ ಮಗದುಮ್ಮ, ರಾಜು ಮಗದುಮ್ಮ, ಸಾಗರ ಮಿರ್ಜೆ, ಡಾ.ರಾಜಗೊಂಡ ಪಾಟೀಲ, ಬಾಳಾಸಾಹೇಬ ಪಾಟೀಲ, ಕುಮಗೊಂಡ ಪಾಟೀಲ, ಬಾವುಸಾಹೇಬ ಪಾಟೀಲ, ಅನಿಲ ಕಾಲಾಜೆ, ಸುಜಾತಾ ಲಗಾರೆ ಬಿ.ಜೆ.ಪಾಟೀಲ, ಮನೋಜಕುಮಾರ ಪಾಟೀಲ, ರಾಕೇಶ ಫಿರಗನ್ನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts