More

    ವಿಕಾಸ್‌ ಕಂಡೋಲಾ ಸೂಪರ್‌ 10, ಪಿಕೆಎಲ್‌ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ಗೆ ಮೊದಲ ಗೆಲುವು

    ಬೆಂಗಳೂರು: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ (ಡಿಸೆಂಬರ್‌ 11) ಯು.ಪಿ. ಯೋಧಾಸ್‌ ತಂಡವನ್ನು 38-36 ಅಂಕಗಳಿಂದ ಸೋಲಿಸಿದ ಬೆಂಗಳೂರು ಬುಲ್ಸ್‌ ತಂಡ ತವರು ಪ್ರೇಕ್ಷ ಕರ ಸಮ್ಮುಖದಲ್ಲಿ ಮೊದಲ ಬಾರಿಗೆ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯಲ್ಲಿ ಜಯ ದಾಖಲಿಸಿದೆ. ವಿಕಾಸ್‌ ಕಂಡೋಲಾ ಮತ್ತು ಭರತ್‌ ಇಬ್ಬರೂ ತಲಾ 11 ಅಂಕಗಳನ್ನು ದಾಖಲಿಸಿದರು, ಆದರೆ ಮೊದಲಾರ್ಧದಲ್ಲಿ ಬುಲ್ಸ್‌ ತಂಡವು ಈ ಋುತುವಿನಲ್ಲಿ ತಮ್ಮ ಫಾರ್ಮ್‌ ಅನ್ನು ಬದಲಾಯಿಸಲು ಕಾರಣವಾಯಿತು.

    ಆರಂಭಿಕ ನಾಲ್ಕು ನಿಮಿಷಗಳಲ್ಲಿ ಪರ್ದೀಪ್‌ ನರ್ವಾಲ್‌ ಅವರ ಸೂಪರ್‌ ರೈಡ್‌ ಮಾಡಿ ಯೋಧಾಸ್‌ ತಂಡಕ್ಕೆ 4-1ರ ಮುನ್ನಡೆ ತಂದುಕೊಟ್ಟಿತು. ಕೆಲವೇ ನಿಮಿಷಗಳಲ್ಲಿ ಬುಲ್ಸ್‌ ಆಲೌಟ್‌ ಆಗುವ ಭೀತಿ ಎದುರಿಸಿತು. ಆದರೆ ವಿಕಾಸ್‌ ಕಂಡೋಲಾ ಕೊನೆಯ ವ್ಯಕ್ತಿ ಅಂಗಳದಲ್ಲಿದ್ದರು. ಆಲ್‌ಔಟ್‌ ಆಗುವ ನಿರೀಕ್ಷೆಯನ್ನು ಎದುರಿಸಿದ ಕಂಡೋಲಾ ಸೂಪರ್‌ ರೈಡ್‌ ಮೂಲಕ 2 ಅಂಕ ತಂದರಲ್ಲದೆ ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಹಸ ಮಾಡಿದರು.

    ಸ್ವಲ್ಪ ಸಮಯದ ನಂತರ ಆಟದ ದಿಕ್ಕು ಬದಲಾಯಿತು. ಮೋನು ಅವರು ನರ್ವಾಲ್‌ ಅವರನ್ನು ಔಟ್‌ ಮಾಡಿದರು ಮತ್ತು ಅದರೊಂದಿಗೆ ಯೋಧಾಸ್‌ ಪ್ರಾಬಲ್ಯಕ್ಕೂ ತಡೆಯೊಡ್ಡಿದರು. ಕೆಲವೇ ನಿಮಿಷಗಳಲ್ಲಿ ಯೋಧಾಸ್‌ ಮನೆಯನ್ನು ಖಾಲಿ ಮಾಡಿಸಿದ ಬುಲ್ಸ್‌ ಮೊದಲ ಆಲ್‌ ಔಟ್‌ ಅಂಕದೊಂದಿಗೆ ಮುನ್ನಡೆ ಸಾಧಿಸಿತು ಮತ್ತು ಅವರು ವಿರಾಮದ ವೇಳೆಗೆ ಐದು ಅಂಕಗಳಿಂದ ಮುನ್ನಡೆ ಕಂಡುಕೊಂಡಿತು.

    ದ್ವಿತೀಯಾರ್ಧದಲ್ಲಿಯೋಧಾಸ್‌ ನಿಧಾನವಾಗಿ ತಮ್ಮ ಲಯವನ್ನು ಮರಳಿ ಪಡೆಯಿತು, ಆದರೆ ಬುಲ್ಸ್‌ ದೊಡ್ಡ ಜನಸಮೂಹದ ಬೆಂಬಲದೊಂದಿಗೆ ಅವರು ಜಾರಿ ಬೀಳದಂತೆ ನೋಡಿಕೊಂಡರು. ದ್ವಿತೀಯಾರ್ಧದ ಅರ್ಧಾರ್ಧದಲ್ಲಿಎರಡನೇ ಬಾರಿ ಎದುರಾಳಿಯನ್ನು ಕಟ್ಟಿಹಾಕಿದ ಬುಲ್ಸ್‌ 29-21ರಲ್ಲಿ ಮುನ್ನಡೆ ಸಾಧಿಸಿತು. ಹೂಡಾ ಅವರ ಸೂಪರ್‌ ರೈಡ್‌ ಅವರನ್ನು ಮತ್ತಷ್ಟು ಮುಂದೆ ಕರೆದೊಯ್ದಿತು ಮತ್ತು ಯೋಧಾಸ್‌ ಶೀಘ್ರದಲ್ಲೇ ಮರು ಹೋರಾಟ ನಡೆಸಲು ಯತ್ನಿಸಿತು.
    ಆಟದ ಕೊನೆಯ ಎರಡು ನಿಮಿಷಗಳಲ್ಲಿಯೋಧಾಸ್‌ 40 ಸೆಕೆಂಡ್‌ಗಳು ಬಾಕಿ ಇರುವಾಗ ಬುಲ್ಸ್‌ ತಂಡವನ್ನು ಆಲೌಟ್‌ ಮಾಡುವ ಮೂಲಕ ಹೋರಾಟವನ್ನು ಜೀವಂತವಾಗಿರಿಸಿತು. ಆದಾಗ್ಯೂ, ಭರತ್‌ ಚಾಣಾಕ್ಷ ತನದಿಂದ ಬುಲ್ಸ್‌ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಮೊದಲ ಗೆಲುವನ್ನು ದೃಢಪಡಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts