More

    VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ: ಮೊದಲ ಬಾರಿ ಮಳೆ ನೋಡಿ ಕುಣಿದು ಕುಪ್ಪಳಿಸಿದ ಮಗು!

    ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು ನೋಡಿ ಕುಣಿದು ಕುಪ್ಪಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಮಗುವಿನ ಹೆಸರು ಸನ್ನಿ ಮೆಕೆಂಜಿ. ನ್ಯೂ ಸೌತ್​ ವೇಲ್ಸ್​ನಲ್ಲಿನ ತಮ್ಮ ತೋಟದ ಮನೆಯಿಂದ ಹೊರಗೆ ಬಂದು ಮಳೆ ಸುರಿಯುವುದನ್ನು ಕುತೂಹಲದಿಂದ ನೋಡುತ್ತಾ ಮಣ್ಣಿನ ನೆಲದಲ್ಲಿ ಓಡಾಡಿ ಮಗು ಕುಣಿದು ಕುಪ್ಪಳಿಸಿದೆ. ವಿಡಿಯೋವನ್ನು ಮಗುವಿನ ತಾಯಿ ಟಿಫೈನ್​ ಮೆಕೆಂಜಿ ಚಿತ್ರೀಕರಿಸಿ, ನ್ಯೂಸ್​ 9ನೊಂದಿಗೆ ಶೇರ್​ ಮಾಡಿಕೊಂಡಿದ್ದಾರೆ. ಇದೇ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾಧಿಕಾರಿ ಸುಸಾಂತ್​ ನಂದಾ ಅವರು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

    ಇನ್ನು ಸನ್ನಿ ಮೆಕೆಂಜಿ ಬಗ್ಗೆ ಮಾತನಾಡಿರುವ ತಾಯಿ ಟಿಫೈನ್​ ಮೆಕೆಂಜಿ, ಮಳೆ ಬಂದಾಗ ನಾವು ಮನೆಯ ಹೊರಗಿದ್ದೆವು. ಬಳಿಕ ಒಳಗೆ ಹೋಗಲು ಓಡಿದೆವು. ಆದರೆ ನನ್ನ ಮಗ ಮಳೆಯ ನಡುವೆಯೇ ನಿಂತುಕೊಂಡ. ಇಂತಹ ಅವಕಾಶವನ್ನು ಇದಕ್ಕೂ ಮುಂಚೆ ಆತ ಪಡೆದಿದರಲಿಲ್ಲ. ಅಲ್ಲದೆ, ಕಳೆದ ಮೂರು ವರ್ಷಗಳಿಂದ ನಮ್ಮ ಭಾಗದಲ್ಲಿ ಮಳೆಯೇ ಬಿದ್ದಿಲ್ಲ. ಮುಂದಿನ ಐದು ದಿನಗಳವರೆಗೆ ಮಳೆ ಬೀಳಲಿದೆ ಎಂದು ನಂಬಿದ್ದೇವೆ ಎಂದು ತಿಳಿಸಿದ್ದಾರೆ.

    ಬಹುತೇಕ ಒಂದು ತಿಂಗಳವರೆಗೆ ಭೀಕರ ಕಾಡ್ಗಿಚ್ಚು ಆಸ್ಟ್ರೇಲಿಯಾದ ಕೆಲ ಭಾಗಗಳನ್ನು ಅಕ್ಷರಶಃ ಕಾಡಿದೆ. ಲಕ್ಷಾಂತರ ಪ್ರಾಣಿಗಳು ಕಾಡ್ಗಿಚ್ಚಿಗೆ ಸಿಲುಕಿ ಪ್ರಾಣವನ್ನು ಕಳೆದುಕೊಂಡಿವೆ. 29 ಮಂದಿ ಜೀವ ಕಳೆದುಕೊಂಡಿದ್ದಾರೆ. ಅನೇಕ ಮನೆಗಳು ಸುಟ್ಟು ಕರಕಲಾಗಿವೆ. ಕಾಡ್ಗಿಚ್ಚಿನಿಂದ ವಾಯುಮಾಲಿನ್ಯದಂತಹ ಅನೇಕ ಪರಿಣಾಮಗಳು ಎದುರಾಗಿವೆ.

    ಇದರ ನಡುವೆ ಕಾಡ್ಗಿಚ್ಚನ್ನು ನಂದಿಸಲು ಹರಸಾಹಸ ಪಟ್ಟ, ಜೀವ ಉಳಿಸಿಕೊಳ್ಳಲು ಪ್ರಾಣಿಗಳು ಪ್ರಾಯಾಸ ಪಟ್ಟ ಮತ್ತು ಪ್ರಾಣಿಗಳ ರಕ್ಷಣೆಗೆ ಜನರು ಮುಂದಾದು ಸಾಕಷ್ಟು ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ಸಾಕಷ್ಟು ಮಂದಿ ಮರುಕು ವ್ಯಕ್ತಪಡಿಸಿದ್ದರು. ಅವರಲ್ಲಿ ನಾವು ಕೂಡ ಒಬ್ಬರಾಗಿದ್ದೇವೆ.

    ಇದೀಗ ವರುಣನ ಆಗಮನದಿಂದ ಜೀವ ಸಂಕುಲ ಹಾಗೂ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ. ವಿಪರ್ಯಾಸವೆಂದರೆ ಮಳೆ ನಿಟ್ಟುಸಿರುವ ತಂದಿದ್ದರೂ ಭಾರಿ ಮಳೆಯಾದರೆ ಭೂಕುಸಿತ ಹಾಗೂ ಜಲಮಾಲಿನ್ಯದಂತಹ ಅಪಾಯವೂ ಕೂಡ ಎದುರಾಗಲಿದೆ ಎಂದು ಪರಿಣಿತರು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts