More

    ಪ್ರತಿ ಮನೆಯಲ್ಲೂ ಛತ್ರಪತಿ ಶಿವಾಜಿ ಸೃಷ್ಟಿಯಾಗಲಿ; ಶ್ರೀ ರಾಮಸೇನೆಯ ಪ್ರಮೋದ್ ಮುತಾಲಿಕ್ ಕರೆ  

    ಬೆಂಗಳೂರು: ಪ್ರತಿಯೊಬ್ಬರ ಮನೆಯಲ್ಲಿ ಛತ್ರಪತಿ ಶಿವಾಜಿಯಂತಹ ಧರ್ಮಪುರುಷರು ಸೃಷ್ಟಿಯಾಗಬೇಕು ಎಂದು ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.

    ಹಿಂದು ಜನಜಾಗೃತಿ ಸಮಿತಿ ಶನಿವಾರ ನಗರದಲ್ಲಿ ಆಯೋಜಿಸಿದ್ದ ದಕ್ಷಿಣ ಕರ್ನಾಟಕ ಜಿಲ್ಲೆಗಳ ಪ್ರಾಂತೀಯ ಹಿಂದು ಅಧಿವೇಶನದಲ್ಲಿ ಮಾತನಾಡಿದರು. ಇಂದು ರಾಷ್ಟ್ರ ಮತ್ತು ಧರ್ಮದ ಪರ ಸ್ವಾಭಿಮಾನವನ್ನು ಜಾಗೃತಗೊಳಿಸಿ ಜೀಜಾ ಮಾತೆಯ ಆದರ್ಶವನ್ನಿಟ್ಟುಕೊಂಡು ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಶಿವಾಜಿಯಂತೆ ತಯಾರು ಮಾಡಬೇಕು. ನಮ್ಮಲ್ಲಿರುವ ಸುಪ್ತಕ್ಷಾತ್ರತೇಜವನ್ನು ಜಾಗೃತಗೊಳಿಸಿ ಬಲಿಷ್ಠ ರಾಷ್ಟ್ರ ನಿರ್ವಣಕ್ಕಾಗಿ ಮುಂದಾಗಬೇಕು ಎಂದರು.

    ತೊರೆದು ಹೋದವರನ್ನು ಕರೆಸಿಕೊಳ್ಳಲಾಗದು: ಜಗತ್ತಿಗೆ ಗುರುವಾಗಿದ್ದ ಭಾರತ ಇಂದು ಈ ಸ್ಥಿತಿಗೆ ಬರಲು ನಮ್ಮಲ್ಲಿರುವ ಭಯ, ಸಂಘಟನೆಯ ಅಭಾವ ಹಾಗೂ ದೌರ್ಬಲ್ಯವೇ ಕಾರಣ. ವಿಭಜನೆಗೂ ಮುನ್ನ ಪಾಕಿಸ್ತಾನದ ಭಾಗದಲ್ಲಿ ಸಾವಿರಾರು ವರ್ಷಗಳಿಂದ 10 ಲಕ್ಷ ಹಿಂದುಗಳು ವಾಸವಾಗಿದ್ದರು. ಆದರೆ ವಿಭಜನೆಯ ಸಂದರ್ಭದಲ್ಲಿ ಅವರೆಲ್ಲರನ್ನೂ ಅಮಾನುಷವಾಗಿ ಕೊಲ್ಲಲಾಯಿತು. ಅಲ್ಲಿನ ದೌರ್ಜನ್ಯದಿಂದ ಬೇಸತ್ತ ಜನರು ಆಶ್ರಯ ಬೇಡಿ ಭಾರತಕ್ಕೆ ಬಂದಿದ್ದಾರೆ. ಅವರಿಗೆ ಆಶ್ರಯ ನೀಡುವುದು ನಮ್ಮ ಕರ್ತವ್ಯ.

    ಆದರೆ, ಅಹಮದೀಯರು ಮತ್ತು ಶಿಯಾಗಳ ಮೇಲೆಯೂ ಆಕ್ರಮಣಗಳಾಗುತ್ತಿವೆ. ಅವರನ್ನೂ ಹಿಂದಕ್ಕೆ ಕರೆಸಿಕೊಳ್ಳಿ ಎಂದು ಬಹುತೇಕರು ಹೇಳುತ್ತಾರೆ, ಆದರೆ, ಅವರೆಲ್ಲರೂ ಭಾರತ ಬೇಡವೆಂದು ಆಗಲೇ ಪಾಕಿಸ್ತಾನಕ್ಕೆ ಹೋಗಿದ್ದರಿಂದ ಪುನಃ ಕರೆಸಿಕೊಳ್ಳುವ ಪ್ರಮೇಯವೇ ಇಲ್ಲ ಎಂದು ಮುತಾಲಿಕ್ ಸ್ಪಷ್ಟಪಡಿಸಿದರು.

    ಸಾಮಾನ್ಯರಿಗೂ ಮಾಹಿತಿ ಹಕ್ಕು ಕಾನೂನಿನ ಮಾರ್ಗದರ್ಶನ ನೀಡುವ ‘ಮಾಹಿತಿ ಹಕ್ಕು ಅಧಿನಿಯಮ 2005’ ಮತ್ತು ‘ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮಗಳು 2005’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಸಮಿತಿಯ ಮೋಹನ ಗೌಡ, ಶಿವಮೊಗ್ಗ ಜಿಲ್ಲೆಯ ಸಮನ್ವಯಕ ವಿಜಯ ರೇವಣಕರ ಮತ್ತಿತರರು ಉಪಸ್ಥಿತರಿದ್ದರು.

    ಗೋಮಾತೆಯ ರಕ್ಷಣೆಗೆ ಆಗ್ರಹ

    ಸ್ವಾತಂತ್ರ್ಯಪೂರ್ವದಲ್ಲಿ 70 ಕೋಟಿಯಷ್ಟಿದ್ದ ಗೋವುಗಳ ಸಂಖ್ಯೆ ಇಂದು 12 ಲಕ್ಷಕ್ಕಿಳಿದಿದೆ. ಈ ಹಿಂದೆ ಭಠಾರತದಲ್ಲಿ 127 ಬಗೆಯ ವೈವಿಧ್ಯಮಯ ತಳಿಯ ಗೋವುಗಳಿದ್ದರೂ ಸದ್ಯ 30 ತಳಿಗಳು ಮಾತ್ರ ಉಳಿದಿವೆ. ಹೀಗಾಗಿ, ಸರ್ಕಾರದ ಮೇಲೆ ಆವಲಂಬಿತರಾಗದೆ ನಾವೆಲ್ಲರೂ ಗೋಮಾತೆಯ ರಕ್ಷಣೆಗಾಗಿ ಟೊಂಕ ಕಟ್ಟಿ ನಿಲ್ಲಬೇಕು ಎಂದು ಸ್ವರ್ಣಭೂಮಿ ಗೋಶಾಲೆಯ ಸಂಸ್ಥಾಪಕ ಡಿ.ಎಸ್. ರಾಘವೇಂದ್ರ ಕರೆ ನೀಡಿದರು.

    ಇತ್ತೀಚಿನ ದಿನಗಳಲ್ಲಿ ಹಿಂದು ಸಂಘಟನೆ ಗಳ ಕಾರ್ಯಕರ್ತರನ್ನು ಅನವಶ್ಯಕವಾಗಿ ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಲು ವಿರೋಧಿ ಶಕ್ತಿಗಳು ಹುನ್ನಾರ ನಡೆಸಿವೆ. ಹೀಗಾಗಿ, ದೇಶದ ಯಾವುದೇ ಮೂಲೆಯಲ್ಲಿದ್ದರೂ ಅವರಿಗೆ ಕಾನೂನು ನೆರವು ನೀಡಲು ಹಿಂದೂ ವಿಧಿಜ್ಙ ಪರಿಷತ್ ಸಿದ್ಧವಾಗಿದೆ. ಆದ್ದರಿಂದ, ಅವರು ಧೈರ್ಯದಿಂದ ಹಿಂದುತ್ವದ ಕಾರ್ಯವನ್ನು ಮುಂದುವರಿಸಬೇಕು.

    | ಕೃಷ್ಣಮೂರ್ತಿ ವಕೀಲ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts