More

    ದಕ್ಷಿಣ ಕನ್ನಡದಲ್ಲಿ ಜೆಡಿಎಸ್‌ಗೆ ಅಧೋಗತಿ

    ಪಿ.ಬಿ.ಹರೀಶ್ ರೈ, ಮಂಗಳೂರು

    ಎಲ್ಲ ಅಭ್ಯರ್ಥಿಗಳಿಗೆ ಠೇವಣಿ ನಷ್ಟ, ಸ್ಪರ್ಧಿಸಿದ 7 ಕ್ಷೇತ್ರಗಳಲ್ಲಿ ದೊರೆತದ್ದು ಕೇವಲ 11 ಸಾವಿರ ಮತ, ಮಂಗಳೂರು ಹೊರತಾಗಿ ಉಳಿದ ಕ್ಷೇತ್ರಗಳಲ್ಲಿ ಕಳೆದ ಬಾರಿಗಿಂತ ಕಡಿಮೆ ಮತ.

    – ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಸ್ಥಿತಿ. ಅತ್ತ ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಸ್ಥಾನ ಪಡೆಯಲು ಸಾಧ್ಯವಾಗದೆ ಕಂಗೆಟ್ಟ ಜೆಡಿಎಸ್ ಇತ್ತ ಕರಾವಳಿಯಲ್ಲಿ ಸಂಪೂರ್ಣ ನೆಲಕಚ್ಚಿದೆ. ಸಂಘಟನೆ ಕೊರತೆ, ನೆಪ ಮಾತ್ರಕ್ಕೆ ಇರುವ ನಾಯಕರು, ಪ್ರಚಾರ ನಡೆಸದ ಅಭ್ಯರ್ಥಿಗಳಿಂದಾಗಿ ಜೆಡಿಎಸ್ ಈ ಬಾರಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. 2013ರ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 45,888 ಮತ ಪಡೆದಿದ್ದರೆ, 2018ರಲ್ಲಿ 5 ಕ್ಷೇತ್ರದಲ್ಲಿ 9346 ಮತ ಪಡೆದಿತ್ತು. ಈ ಬಾರಿ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 11,042 ಮತ ಪಡೆದದ್ದು ಜೆಡಿಎಸ್ ಸಾಧನೆ.

    ದಕ್ಷಿಣ ಕನ್ನಡದಲ್ಲಿ ಜೆಡಿಎಸ್‌ಗೆ ಅಧೋಗತಿ

    ಸೋಲು ನಿರೀಕ್ಷಿತ

    ಕರಾವಳಿಯಲ್ಲಿ ಜೆಡಿಎಸ್ ಸೋಲು ನಿರೀಕ್ಷಿತ. ಆದರೆ ಜಿಲ್ಲೆಯಲ್ಲಿ ಪ್ರತಿ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಕುಸಿಯುತ್ತಲೇ ಇದೆ. ಮೂಡುಬಿದಿರೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಕೊಂಚ ಶಕ್ತಿ ಇತ್ತು. 2013ರ ಚುನಾವಣೆಯಲ್ಲೂ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ 20,471 ಮತ ಪಡೆದಿದ್ದರು. ಆದರೆ ಈ ಬಾರಿ ಅವರ ಪುತ್ರಿ ಪಡೆದದ್ದು ಕೇವಲ 1,533 ಮತ.

    ಮತ ಕುಸಿತ

    ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ 5,256 ಮತ ಪಡೆದಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಂದು ಪ್ರಚಾರ ಮಾಡಿದರೂ, ಠೇವಣಿ ಉಳಿಸುವವಷ್ಟು ಮತ ಗಳಿಕೆಯಷ್ಟೇ ಸಾಧ್ಯವಾಯಿತ್ತು. 1994ರ ಚುನಾವಣೆಯಲ್ಲಿ ಜನತಾದಳ ಅವಿಭಜಿತ ದ.ಕ.ದಲ್ಲಿ 3 ಸ್ಥಾನ ಗೆಲ್ಲುವ ಮೂಲಕ ಅಸ್ತಿತ್ವ ಪ್ರದರ್ಶಿಸಿತ್ತು. ಕಳೆದ 6 ಚುನಾವಣೆಗಳಲ್ಲಿ ತೆನೆ ಹೊತ್ತ ಮಹಿಳೆಗೆ ಕರಾವಳಿಯಲ್ಲಿ ಶಕ್ತಿ ಪ್ರದರ್ಶಿಸಲು ಸಾಧ್ಯವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts