More

    ಮಕ್ಕಳಲ್ಲಿ ಅಡಗಿದೆ ಅಪಾರವಾದ ಶಕ್ತಿ

    ಕಾಗವಾಡ: ವಿದ್ಯಾರ್ಥಿಗಳಲ್ಲಿ ಅಗಾಧವಾದ ಶಕ್ತಿ ಅಡಗಿದೆ. ಕೇವಲ ಓದಿನಲ್ಲಿ ಆಸಕ್ತಿ ಇದ್ದರೆ ಸಾಲದು. ಆಟದಲ್ಲೂ ಮುಂಚೂಣಿಯಲ್ಲಿದ್ದರೆ ಸದೃಢವಾಗಿರಲು ಸಾಧ್ಯ ಎಂದು ಪ್ರೊ.ಎಸ್.ಎಂ. ಉಮದಿ ಹೇಳಿದರು.

    ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪುರುಷರು ಮತ್ತು ಮಹಿಳೆಯರ ಅಂತರ್ ಕಾಲೇಜು ಏಕವಲಯ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಕ್ರೀಡೆ ಇಲ್ಲದ ಬದುಕು ಕೀಟ ತಿಂದ ಹುಲ್ಲಿನಂತೆ. ಹೀಗಾಗಿ ಎಲ್ಲ ಭಾಗ್ಯಗಳಲ್ಲಿ ಆರೋಗ್ಯವೇ ಶ್ರೇಷ್ಠ ಭಾಗ್ಯ ಎಂದರು.

    ಪ್ರಾಚಾರ್ಯ ಡಾ.ಎಸ್.ಎ. ಕರ್ಕಿ ಅವರು ಆರೋಗ್ಯವಾಗಿರಲು ಪಠ್ಯೇತರ ಚಟುವಟಿಕೆಗಳೂ ಮುಖ್ಯ ಎಂದರು.

    ಯತೀಶ್ವರಾನಂದ ಸ್ವಾಮೀಜಿ ಮಾತನಾಡಿ, ಕ್ರೀಡಾಪಟುಗಳು ಅಪ್ರತಿಮ ಪ್ರದರ್ಶನ ನೀಡಬೇಕು ಎಂದರು.

    ಕಾರ್ಯದರ್ಶಿ ಪ್ರೊ. ಬಿ.ಎ. ಪಾಟೀಲ, ಕಾವ್ಯಾ ಅಸೋದೆ, ಪ್ರೊ. ಜೆ.ಕೆ. ಪಾಟೀಲ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಆರ್.ಎಸ್. ನಾಗರಡ್ಡಿ, ಪ್ರೊ.ಎನ್.ಎಂ. ಬಾಗೇವಾಡಿ, ಪ್ರೊ. ಸೋನಾಲಿ ಡತರೆ, ಆಡಳಿತಾಧಿಕಾರಿ ವಿ.ಎಸ್. ತುಗಶೆಟ್ಟಿ, ಉಪಪ್ರಾಚಾರ್ಯೆ ಡಾ.ಡಿ.ಡಿ. ನಗರಕರ, ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಡಿ. ಧಾಮಣ್ಣವರ, ಪ್ರಾಚಾರ್ಯ ಪ್ರೊ.ಪಿ.ಬಿ. ನಂದಾಳೆ, ಪ್ರೊ.ಸಿದ್ದು ಮಾಲಗಾಂವೆ, ಓಂಕಾರ ಪಾಟೀಲ, ಪ್ರೊ. ಅಮರ ಕೊರವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts