More

    ಚಿಕ್ಕಮಗಳೂರಲ್ಲಿ ಸರ್ಕಾರಿ ನೌಕರರ ಕಲ್ಯಾಣಮಂಟಪ ನಿರ್ಮಾಣ

    ಚಿಕ್ಕಮಗಳೂರು: ನಗರದಲ್ಲಿರುವ ಸರ್ಕಾರಿ ನೌಕರರ ಸಂಘದ ಜಾಗದಲ್ಲಿ ಸಮುದಾಯ ಭವನ ಅಥವಾ ಕಲ್ಯಾಣಮಂಟಪ ನಿರ್ವಿುಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

    ನಗರದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ದಿನಬಳಕೆ ವಸ್ತುಗಳ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿ, ಕಲ್ಯಾಣ ಮಂಟಪ ಅಥವಾ ಭವನ ನಿರ್ವಿುಸಬೇಕು ಎಂಬುದು ನೌಕರರ ಬಹುದಿನಗಳ ಬೇಡಿಕೆ. ಮುಖ್ಯಮಂತ್ರಿ ಬರುವ ಸಂದರ್ಭ ನೋಡಿಕೊಂಡು ಶಂಕುಸ್ಥಾಪನೆ ಮಾಡಿಸಲಾಗುವುದು ಎಂದರು.

    ಸರ್ಕಾರಿ ನೌಕರರಿಗೆ ದಿನಬಳಕೆ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಕ್ಯಾಂಟೀನ್ ಸ್ಥಾಪಿಸಲಾಗಿದೆ. ಶೇ.25ರಿಂದ 30ರಷ್ಟು ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳು ದೊರೆಯಲಿವೆ. ರಾಜ್ಯದಲ್ಲಿ 8ನೇ ಸರ್ಕಾರಿ ನೌಕರರ ವ್ಯಾಪಾರ ಮಳಿಗೆ ಇದಾಗಿದ್ದು, ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸ್ವಾವಲಂಬನೆಯ ಯೋಚನೆ ಬೆಳೆಸಬೇಕು ಎಂದು ತಿಳಿಸಿದರು.

    ದಿನಬಳಕೆ ವಸ್ತುಗಳ ಬೆಲೆ ದಿನೇದಿನೆ ಹೆಚ್ಚಾಗುತ್ತಿದ್ದು, ಸರ್ಕಾರಿ ನೌಕಕರಿಗೆ ಇದರ ಪರಿಣಾಮ ಉಂಟಾಗದಿರಲು ಕ್ಯಾಂಟೀನ್ ತೆರೆಯಲಾಗಿದೆ. ಬೇರೆ ಜಿಲ್ಲೆಗಳ ಸರ್ಕಾರಿ ನೌಕರರ ಸಂಘಗಳಿಗೆ ಹೋಲಿಸಿದರೆ ಈ ಸಂಘ ಹೆಚ್ಚು ಕ್ರಿಯಾಶೀಲವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು.

    ಮಿಲಿಟರಿ ಕ್ಯಾಂಟೀನ್ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರ್ಕಾರಿ ನೌಕರರ ಕ್ಯಾಂಟೀನ್ ಸ್ಥಾಪಿಸಲಾಗುತ್ತಿದೆ. ನೌಕರರಿಗೆ ಒಂದು ತಿಂಗಳ ಸಂಬಳವಾಗದಿದ್ದರೂ ಅವರು ತಮ್ಮ ಕಾರ್ಡ್​ಗಳನ್ನು ತೋರಿಸಿ ದಿನ ಬಳಕೆ ವಸ್ತುಗಳನ್ನು ಖರೀದಿಸಬಹುದು. ಗುಣಮಟ್ಟದ ವಸ್ತುಗಳನ್ನು ನೀಡಲಾಗುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.

    ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡಪ್ಪ ಪಾಟೀಲ, ಖಜಾಂಚಿ ಶ್ರೀನಿವಾಸ್, ಗೌರವಾಧ್ಯಕ್ಷ ವಿ.ವಿ.ಶಿವರುದ್ರಯ್ಯ, ಜಿಲ್ಲಾಧ್ಯಕ್ಷ ದೇವೇಂದ್ರ, ಸಂತೋಷ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts