More

    ಉಳ್ಳಾಗಡ್ಡಿ-ಖಾನಾಪುರ: ಹೆಬ್ಬಾಳದಲ್ಲಿ ಸಂಭ್ರಮದ ಬಸವ ಉತ್ಸವ

    ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಹೆಬ್ಬಾಳ ಗ್ರಾಮದಲ್ಲಿ ಶುಕ್ರವಾರ ಬಸವ ಉತ್ಸವ ಸಂಭ್ರಮದಿಂದ ಆರಂಭಗೊಂಡಿತು. ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದರು. ಸಂಕೇಶ್ವರ ಪಟ್ಟಣದಿಂದ ಚಾಲನೆಗೊಂಡ ಬಸವ ಉತ್ಸವದ ಮೆರವಣಿಗೆಯಲ್ಲಿ ಶರಣ ಸಂಸ್ಕೃತಿಯನ್ನು ಬಿಂಬಿಸುವ 11 ಶರಣರ ಭಾವಚಿತ್ರಗಳು ಹಾಗೂ ವಿಶ್ವಗುರು ಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಕುದುರೆ, ಕರಡಿ ಮಜಲು ಮೆರವಣಿಗೆಗೆ ಮೆರಗು ತಂದವು. ಮಹಿಳಾ ಶರಣೆಯರು ಮೆರವಣಿಗೆ ಉದ್ದಕ್ಕೂ ವಚನ ಕಟ್ಟುಗಳನ್ನು ತಲೆ ಮೇಲೆ ಹೊತ್ತು ಬಸವಣ್ಣನವರ ವಚನ ಪಠಣ ಮಾಡುತ್ತಿರುವ ದೃಶ್ಯ ಎಲ್ಲರನ್ನೂ ಆಕರ್ಪಿಸುತ್ತಿತ್ತು. ಸುಮಾರು 10ಕಿವಿ.ುೀ. ವರೆಗೆ ಭವ್ಯ ಮೆರವಣಿಗೆ ಸಾಗಿದ್ದು ವಿಶೇಷವಾಗಿತ್ತು. ಬಿಡಿಸಿಸಿ ಅಧ್ಯಕ್ಷ ರಮೇಶ ಕತ್ತಿ, ಬಸವರಾಜ ಪಂಡಿತರು, ಅಪ್ಪಾಸಾಹೇಬ ಶಿರಕೊಳಿ, ಗಜಾನನ ಕೊಳಿ, ಶ್ರೀಕಾಂತ ಹತನೂರೆ ಸೇರಿ ಗ್ರಾಮದ ಮುಖಂಡರು, ಇತರರು ಇದ್ದರು.

    ಇಂದಿನ ಕಾರ್ಯಕ್ರಮ: ಬಸವ ಉತ್ಸವದ ಎರಡನೇ ದಿನವಾದ ಶನಿವಾರ(ಫೆ.22) ಬಸವಣ್ಣನವರ 109 ಅಡಿ ಎತ್ತರದ ಪುತ್ಥಳಿ ನಿರ್ಮಿಸುವ ಅಡಿಗಲ್ಲು ಸಮಾರಂಭ ಜರುಗಲಿದೆ. ಚಿತ್ರದುರ್ಗದ ಡಾ.ಶಿವಮೂರ್ತಿ ಮುರಘಾ ಶರಣರು, ಗದಗ-ಡಂಬಳದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಲಿದ್ದಾರೆ. ಶಾಸಕ ಉಮೇಶ ಕತ್ತಿ, ಡಿಸಿಎಂ ಲಕ್ಮಣ ಸವದಿ, ಕೇಂದ್ರ ಸಚಿವ ಪ್ರಲ್ಲಾದ ಜೋಷಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಸಚಿವರಾದ ಜಗದೀಶ ಶೆಟ್ಟರ, ರಮೇಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಶಾಸಕರಾದ ಶ್ರೀಮಂತ ಪಾಟೀಲ, ಮಹೇಶ ಕುಮಟಳ್ಳಿ, ಆನಂದ ಮಾಮನಿ, ಮಹಾಂತೇಶ ದೊಡ್ಡಗೌಡರ, ಪಿ.ರಾಜೀವ್, ಡಿ.ಎಂ.ಐಹೊಳೆ, ಅನಿಲ ಬೆನಕೆ, ಬಾಲಚಂದ್ರ ಜಾರಕಿಹೊಳಿ, ಅಭಯ ಪಾಟೀಲ, ಮಹಾದೇವಪ್ಪ ಯಾದವಾಡ ಮತ್ತಿತರರು ಉಪಸ್ಥಿತರಿರಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts