More

    ಅಂಬಾರಿಯಲ್ಲಿ ಗಾಂಧೀಜಿ ಭಾವಚಿತ್ರ ಮೆರವಣಿಗೆ

    ಕಾಗವಾಡ: ಶೇಡಬಾಳದ ಸ್ವಾತಂತ್ರೃ ಸೇನಾನಿ, ಗಾಂಧಿವಾದಿ ದಿ.ಜಿನ್ನಪ್ಪ ಯಾದವಾಡೆ ಅವರು 61 ವರ್ಷಗಳ ಹಿಂದೆ ಗಾಂಧೀಜಿ ಅವರ ಭಾವಚಿತ್ರ ತಲೆ ಮೇಲೆ ಹೊತ್ತು ಮೆರವಣಿಗೆ ಮಾಡುವ ಮೂಲಕ ಜಯಂತಿ ಆಚರಿಸುತ್ತಿದ್ದರು. ಶುಕ್ರವಾರ ಅವರ ಮಕ್ಕಳು, ಮೊಮ್ಮಕ್ಕಳು ಆನೆಯ ಅಂಬಾರಿ ಮೇಲೆ ಗಾಂಧೀಜಿ ಭಾವಚಿತ್ರ ಇಟ್ಟು ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ಗಾಂಧಿ ಜಯಂತಿ ವಿಶೇಷ ಆಚರಣೆಯ ಪರಂಪರೆ ಮುಂದುವರಿಸಿದರು.

    ದಿ.ಜಿನ್ನಪ್ಪ ಯಾದವಾಡೆ ಅವರು 11 ವರ್ಷದ ಹಿಂದೆ ನಿಧನರಾಗಿದ್ದಾರೆ. ಬಳಿಕ ಅವರ ಪುತ್ರ ಬಾಹುಬಲಿ ಯಾದವಾಡೆ ಮೊಮ್ಮಕ್ಕಳು ಗಾಂಧಿ ಜಯಂತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತ ಬಂದಿದ್ದಾರೆ. ಶುಕ್ರವಾರ ಗ್ರಾಮದಲ್ಲಿ ಹಿರಿಯ ಮುಖಂಡ ಮಹಾವೀರ ಸಾಬಣ್ಣವರ ಹಾಗೂ ಬಾಹುಬಲಿ ಯಾದವಾಡೆ ಅವರು ಆನೆಯ ಅಂಬಾರಿ ಮೇಲಿನ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

    ಶ್ರೇಯಾಂಶ ಯಾದವಾಡೆ, ಜಿನಮತಿ ಯಾದವಾಡೆ, ವಾಸಂತಿ ಯಾದವಾಡೆ, ಜಯಧವಲ್ ಯಾದವಾಡೆ, ಮಹಾಧವಲ್ ಯಾದವಾಡೆ, ಹೌಸೇಂದ್ರ ಯಾದವಾಡೆ, ಶ್ರೇಯಾ ಯಾದವಾಡೆ, ರಾಜಶ್ರೀ ಯಾದವಾಡೆ, ಶ್ರೀಮಂತ ಯಾದವಾಡೆ, ಅನಂತಮತಿ ಯಾದವಾಡೆ, ಮಹಾವೀರ ಯಾದವಾಡೆ, ಶ್ರೇಷ್ಠಾ ಯಾದವಾಡೆ ಇತರರಿದ್ದರು.

    ಗಾಂಧಿ ಅನುಯಾಯಿ: ಸ್ವಾತಂತ್ರೃ ಹೋರಾಟದ ಸಂದರ್ಭದಲ್ಲಿ ಶೇಡಬಾಳಕ್ಕೆ ಆಗಮಿಸಿದ್ದ ಗಾಂಧೀಜಿ ಅವರ ಪ್ರಭಾವಕ್ಕೆ ಒಳಗಾಗಿದ್ದ ದಿ.ಜಿನ್ನಪ್ಪ ಯಾದವಾಡೆ ಅವರು, ಬಳಿಕ ಸ್ವಾತಂತ್ರೃ ಹೋರಾಟದಲ್ಲಿ ಭಾಗವಹಿಸಿದ್ದರು. ಹಲವು ಬಾರಿ ಜೈಲು ವಾಸ ಅನುಭವಿಸಿದ್ದರು. ಸ್ವಾತಂತ್ರೃ ನಂತರ ಸ್ವಾತಂತ್ರೃ ಸೇನಾನಿಗಳಿಗೆ ಸರ್ಕಾರ ನೀಡುವ ಪಿಂಚಣಿಯನ್ನು ಸೌಜನ್ಯದಿಂದಲೇ ಅವರು ತಿರಸ್ಕರಿಸಿದ್ದರು. ಖಾದಿಧಾರಿಯಾಗಿದ್ದ ಜಿನ್ನಪ್ಪ ಯಾದವಾಡೆ, ಚಪ್ಪಲಿ ಕೂಡಾ ಧರಿಸುತ್ತಿರಲಿಲ್ಲ. ಗಡಿ ಭಾಗದಲ್ಲಿ ಕರ್ನಾಟಕ ಏಕೀಕರಣ ಸಮಯದಲ್ಲಿ ಅವರು ಮಹಾರಾಷ್ಟ್ರದ ನಾಯಕರಿಗೆ ವಿರೋಧ ವ್ಯಕ್ತ ಪಡಿಸಿ, ಶೇಡಬಾಳ ಪಟ್ಟಣ ಸೇರಿ ಸುತ್ತ್ತಲಿನ ಗ್ರಾಮಗಳು ಕರ್ನಾಟಕದಲ್ಲಿ ಉಳಿಯುವಂತೆ ಹೋರಾಟ ಮಾಡಿದವರಲ್ಲಿ ಒಬ್ಬರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts