More

    ಪಾಕ್​​ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಜೈಲಿನಲ್ಲಿ ತುಪ್ಪದೊಂದಿಗೆ ದೇಸಿ ಚಿಕನ್, ಮಟನ್ ಊಟ

    ಪಾಕಿಸ್ತಾನ: ಅಟಾಕ್ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ತುಪ್ಪದಲ್ಲಿ ಬೇಯಿಸಿದ ದೇಸಿ ಚಿಕನ್ ಮತ್ತು ಮಟನ್ ನೀಡುತ್ತಿದ್ದಾರೆ ಎಂದು ಜೈಲು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

    ಅಟಾಕ್ ಜೈಲಿನಲ್ಲಿರು ಇಮ್ರಾನ್ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧ್ಯಕ್ಷರಾಗಿರುವುದರಿಂದ ಅವರ ಪ್ರೊಫೈಲ್ ಮತ್ತು ಕಾನೂನು ಸ್ಥಾನಮಾನವನ್ನು ಪರಿಗಣಿಸಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

    ಪಾಕ್​​ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಜೈಲಿನಲ್ಲಿ ತುಪ್ಪದೊಂದಿಗೆ ದೇಸಿ ಚಿಕನ್, ಮಟನ್ ಊಟ

    ಸುಪ್ರೀಂ ಕೋರ್ಟ್ ಮಾಜಿ ಪ್ರಧಾನಿಯವರ ಜೀವನ ಪರಿಸ್ಥಿತಿಗಳ ಬಗ್ಗೆ ವರದಿಯನ್ನು ಕೋರಿದ ನಂತರ ಜೈಲು ಆಡಳಿತದ ಪರವಾಗಿ ಅಟಾರ್ನಿ ಜನರಲ್ ಕಚೇರಿ ಸಲ್ಲಿಸಿದ ವರದಿಯಲ್ಲಿ ಇದು ಬಹಿರಂಗವಾಗಿದೆ.

    ಪಾಕ್​​ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಜೈಲಿನಲ್ಲಿ ತುಪ್ಪದೊಂದಿಗೆ ದೇಸಿ ಚಿಕನ್, ಮಟನ್ ಊಟ

    ಇಮ್ರಾನ್ ಖಾನ್ ಅವರನ್ನು ಜೈಲಿನ ಅತ್ಯಂತ ಸುರಕ್ಷಿತವಾದ ಹೈ ಅಬ್ಸರ್ವೇಶನ್ ಬ್ಲಾಕ್ ನಂಬರ್ 2 ರಲ್ಲಿ ಇರಿಸಲಾಗಿತ್ತು. ಕಾರಾಗೃಹಕ್ಕೆ ಸಿಮೆಂಟ್ ನೆಲಹಾಸು ಮತ್ತು ಸೀಲಿಂಗ್ ಫ್ಯಾನ್ ಅಳವಡಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಜೈಲಿನಲ್ಲಿ ಮಾಜಿ ಪ್ರಧಾನಿ ವಾಶ್ ರೂಂ ಅನ್ನು ವಿಸ್ತರಿಸಲಾಗಿದ್ದು, ಫೈಬರ್ ಡೋರ್ ಕೂಡ ಅಳವಡಿಸಲಾಗಿದೆ.

    ಪಾಕ್​​ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಜೈಲಿನಲ್ಲಿ ತುಪ್ಪದೊಂದಿಗೆ ದೇಸಿ ಚಿಕನ್, ಮಟನ್ ಊಟ

    ಹೊಸ ಟಾಯ್ಲೆಟ್ ಸೀಟ್, ಶವರ್, ಟಿಶ್ಯೂ ಸ್ಟ್ಯಾಂಡ್, ಸ್ಟೇನ್‌ಲೆಸ್ ಸ್ಟೀಲ್ ಟ್ಯಾಪ್ ಅಳವಡಿಸಲಾಗಿದೆ. ಶುದ್ಧೀಕರಣ ಮತ್ತು ಮುಖ ತೊಳೆಯಲು ಗಾಜಿನೊಂದಿಗೆ ವಾಶ್ ಬೇಸಿನ್ ವ್ಯವಸ್ಥೆ ಮಾಡಲಾಗಿದೆ. ಪಂಜಾಬ್‌ನ ಕನಿಷ್ಠ 53 ಜೈಲು ಸಿಬ್ಬಂದಿಯನ್ನು ಜೈಲಿನಲ್ಲಿ ಉಚ್ಚಾಟಿತ ಪ್ರಧಾನಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಶಿಕ್ಷೆಗೊಳಗಾದ ಕೈದಿಗಳಿಗೆ ಹಾಸಿಗೆ, ನಾಲ್ಕು ದಿಂಬುಗಳು, ಟೇಬಲ್, ಕುರ್ಚಿ, ಪ್ರಾರ್ಥನಾ ಚಾಪೆ ಮತ್ತು ಏರ್ ಕೂಲರ್ ಒದಗಿಸಲಾಗಿದೆ. ಇಮ್ರಾನ್ ಖಾನ್ ಅವರಿಗೆ ದೇಸಿ ತುಪ್ಪದ ಊಟವನ್ನು ನೀಡಲಾಗುತ್ತದೆ. ಪತ್ರಿಕೆಗಳ ಜತೆಗೆ ಇಸ್ಲಾಮಿಕ್ ಇತಿಹಾಸ ಮತ್ತು ಪವಿತ್ರ ಕುರಾನ್ ಪುಸ್ತಕಗಳನ್ನು ಒದಗಿಸಲಾಗಿದೆ ಎಂದು ವರದಿ ತಿಳಿಸಿದೆ.

    ಪಾಕ್​​ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಜೈಲಿನಲ್ಲಿ ತುಪ್ಪದೊಂದಿಗೆ ದೇಸಿ ಚಿಕನ್, ಮಟನ್ ಊಟ

    ಆಗಸ್ಟ್ 5 ರಂದು ಪಾಕಿಸ್ತಾನದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತೋಶಾಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್‌ಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು, ಅಂದರೆ ಅಕ್ರಮವಾಗಿ ಸರ್ಕಾರಿ ಉಡುಗೊರೆಗಳನ್ನು ಮಾರಾಟ ಮಾಡಿದಕ್ಕಾಗಿ ಮತ್ತು ಐದು ವರ್ಷಗಳ ಅವಧಿಗೆ ರಾಜಕೀಯದಿಂದ ಅವರನ್ನು ಅನರ್ಹಗೊಳಿಸಿತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

    ತೋಷಖಾನಾ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿದ ಕೂಡಲೇ ಪಿಟಿಐ ಅಧ್ಯಕ್ಷರನ್ನು ಲಾಹೋರ್‌ನ ಜಮಾನ್ ಪಾರ್ಕ್ ನಿವಾಸದಿಂದ ಬಂಧಿಸಲಾಯಿತು. ನ್ಯಾಯಾಲಯವು ಇಮ್ರಾನ್ ಖಾನ್‌ಗೆ ಪಾಕಿಸ್ತಾನಿ ರೂಪಾಯಿ (ಪಿಕೆಆರ್) 100,000 ದಂಡವನ್ನು ವಿಧಿಸಿದೆ. ತೋಷಖಾನಾ ಪ್ರಕರಣದಲ್ಲಿ, ಪಾಕಿಸ್ತಾನದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇಮ್ರಾನ್ ಖಾನ್‌ಗೆ ಆಗಸ್ಟ್ 5 ರಂದು ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು.

    ನವಜಾತ ಶಿಶುವನ್ನು ಚೀಲದಲ್ಲಿ ತುಂಬಿಸಿದ ವೃದ್ಧ ; ಮಗುವಿನ ಅಳುವಿನ ಶಬ್ಧದಿಂದ ಹೊರ ಬಿತ್ತು ಸತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts