More

    ಮತ್ತೊಂದು ನೀಲಿ ಕ್ರಾಂತಿಯಿಂದ ಮೀನುಗಾರರ ಬದುಕು ಸುಧಾರಣೆ: ಪ್ರಧಾನಿ ನರೇಂದ್ರ ಮೋದಿ

    ತುಮಕೂರು: ದೇಶದಲ್ಲಿ ಕೃಷಿ ಆಂದೋಲನ ಆರಂಭವಾಗಿದೆ. ಇದಕ್ಕೆ ಕರ್ನಾಟಕವೇ ವೇದಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಜೂನಿಯರ್​ ಕಾಲೇಜು ಮೈದಾನದಲ್ಲಿ ಕಿಸಾನ್​ ಸಮ್ಮಾನ್​ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
    ಯೋಜನೆಯಿಂದ ಅಂದಾಜು 8 ಕೋಟಿ ರೈತರಿಗೆ ಉಪಯೋಗವಾಗಲಿದೆ. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಬೇವು ಮಿಶ್ರಿತ ಯೂರಿಯಾ ತಯಾರಿಸಿ ವಿತರಿಸಲಾಗುತ್ತಿದೆ. ರೈತರ ಉತ್ಪನ್ನಗಳನ್ನು ರಕ್ಷಣೆ ಮಾಡಲು ದೇಶದ ಎಲ್ಲ ಕಡೆ ಶೈತ್ಯಾಗಾರಗಳನ್ನು ತೆರೆಯಲಾಗಿದೆ. ಫಸಲ್​ ಭೀಮಾ ಯೋಜನೆಯನ್ನು ರೈತರಿಗಾಗಿ ಜಾರಿಗೆ ತರಲಾಗಿದೆ. ಕೃಷಿಗೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನಮ್ಮ ಸರ್ಕಾರ ರೈತರ ಪರವಾಗಿದೆ ಎಂದು ಅವರು ನುಡಿದರು.

    ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಹೊಸ ನೀತಿ ಜಾರಿ ತರುತ್ತಿದೆ. ಇದರಿಂದ ಮೀನುಗಾರರ ಬದುಕು ಸುಧಾರಣೆಯಾಗುತ್ತದೆ. ಮೀನುಗಾರರಿಗೆ ಅಗತ್ಯವಾದ ಸೌಲಭ್ಯ ದೊರೆಯಲಿದೆ ಎಂದರು.
    ಕೊಡಗಿನ ಕಿತ್ತಳೆ, ಮೈಸೂರಿನ ದ್ರಾಕ್ಷಿ, ಚಿಕ್ಕಬಳ್ಳಾಪುರದ ಗುಲಾಬಿ ಬೆಳೆಗಳಿಗೆ ಉತ್ತೇಜನ ನೀಡಲಾಗುವುದು. ಕಳೆದ 5 ವರ್ಷದಲ್ಲಿ ದೇಶದಲ್ಲಿ ಅರಿಶಿಣದ ಬೆಳೆ ಉತ್ಪಾದನೆ ಅಧಿಕವಾಗಿದೆ. ರಾಜ್ಯದಲ್ಲೂ ಅರಿಶಿಣ ಬೆಳೆಗೆ ಉತ್ತೇಜ ನೀಡುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.

    ಸೊಸೈಟಿ ಆರಂಭ: ರಾಜ್ಯದಲ್ಲಿ ಅಧಿಕ ಮಂದಿ ರೈತರು ತೆಂಗನ್ನು ಬೆಳೆಯುತ್ತಾರೆ. ಬೆಳೆಗಾರರ ಅಭಿವೃದ್ಧಿಗೆ ಸೊಸೈಟಿಯನ್ನು ಆರಂಭಿಸಲಾಗುವುದು. ತೆಂಗಿಗೆ ಕಾಡುತ್ತಿರುವ ರೋಗಗಳ ನಿಯಂತ್ರಣಕ್ಕೆ ಸಂಶೋಧನೆ ನಡೆಯುತ್ತಿದೆ. ಕಾಫಿ ಹಾಗೂ ಗೋಡಂಬಿ ಬೆಳೆಗೆ ಉತ್ತಮ ಬೆಲೆ ಸಿಗುವಂತೆ ರಫ್ತು ಯೋಜನೆ ರೂಪಿಸಲಾಗಿದೆ. ಇದರಿಂದ ಬೆಳೆಗಾರರ ಆದಾಯ ಹೆಚ್ಚಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts