More

    ಕೊರಗ ಜನಾಂಗದ ವೇಷ ಧರಿಸಿದರೆ ಜೈಲು ಶಿಕ್ಷೆ

    ಮಂಗಳೂರು: ದ.ಕ.ಜಿಲ್ಲೆಯಲ್ಲಿ ದಸರಾ ಆಚರಣೆಯ ಸಮಯದಲ್ಲಿ ಬೇರೆ ಜಾತಿಯ ಜನಾಂಗದವರು ಕೊರಗ ಜನಾಂಗದವರ ವೇಷ ಧರಿಸಿ ಅಂಗಡಿ ಮನೆಗಳ ಮುಂದೆ ಕುಣಿದು ಜಾತಿ ನಿಂದನೆ ಮಾಡುವುದನ್ನು ನಿಷೇಧಿಸಲಾಗಿದೆ. ಜಾತ್ರೆ, ಕಂಬಳ ಮೊದಲಾದ ಸಾರ್ವಜನಿಕ ಸಮಾರಂಭಗಳಲ್ಲಿ ಕೊರಗ ಜನಾಂಗದವರನ್ನು ಡೋಲು ಬಡಿಸಿ ಕುಣಿತಕ್ಕೆ ಬಳಸಿಕೊಳ್ಳುವುದನ್ನೂ ನಿಷೇಧಿಸಲಾಗಿದೆ. ಇಂಥ ಚಟುವಟಿಕೆ ಕಂಡುಬಂದರೆ ಕೊರಗರ ಅಜಲು ಪದ್ದತಿ ನಿಷೇಧ ಕಾಯ್ದೆಯಡಿ 5ರಿಂದ 6 ವರ್ಷಗಳವರೆಗೆ ಕಾರಾಗೃಹವಾಸ ಮತ್ತು 5000 ರೂ. ದಂಡ ವಿಧಿಸಲಾಗುವುದು. ದಸರಾ ಹಬ್ಬಗಳ ಸಮಯ ಇಂಥ ಪ್ರಸಂಗಗಳು ಕಂಡುಬಂದಲ್ಲಿ ಹತ್ತಿರದ ಪೋಲೀಸ್ ಠಾಣೆಗೆ ತಿಳಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts