More

    ರೈತ ಪರ ಯೋಜನೆಗಳು ಸಾಕಾರ

    ಶಿಕಾರಿಪುರ: ಕೇಂದ್ರ ಸರ್ಕಾರ ರೈತ ಪರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಿಂದ ಅನುಕೂಲವಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ರೈತ ಮೋರ್ಚಾದಿಂದ ಈಸೂರಿನಲ್ಲಿ ಆಯೋಜಿಸಿದ್ದ ರೈತ ಪರಿಕ್ರಮ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ರೈತರ ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಬಿಮಾ ಯೋಜನೆ ಸೇರಿ ಅನೇಕ ಯೋಜನೆಗಳು ರೈತರನ್ನು ತಲುಪಿವೆ. ರೈತರು ಅತ್ಯಂತ ಪ್ರಜ್ಞಾವಂತರಿದ್ದಾರೆ. ರೈತರ ಬದುಕು ಹಸನಾಗಿರಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆ ರೈತರಿಗೆ ತಿಳಿದಿದೆ ಎಂದರು. ವಿಶ್ವ ನಾಯಕರ ಪಟ್ಟಿಯಲ್ಲಿ ಮೋದಿ ಅವರು ಮುಂಚೂಣಿಯಲ್ಲಿದ್ದು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶ್ವಮಾನ್ಯತೆ ತಂದುಕೊಟ್ಟಿದ್ದಾರೆ. ಕ್ಷಣಿಕ ಉಚಿತ ಗ್ಯಾರಂಟಿಗಳು ಯಾವಾಗಲೂ ಶಾಶ್ವತವಲ್ಲ. ಭಾರತ ಬಲಿಷ್ಠ ರಾಷ್ಟ್ರ ಆಗಬೇಕು. ದೇಶದ ಅಖಂಡತೆ ಮತ್ತು ಏಕತೆಗಾಗಿ ಶ್ರಮಿಸುತ್ತಿದ್ದಾರೆ ಎಂದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ, ತಾಲೂಕು ಅಧ್ಯಕ್ಷ ಯೋಗಿಶ್, ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತಪ್ಪ, ತಾಲೂಕು ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್, ಶಿವಕುಮಾರ್ ನಾಯ್ಡು, ಗುರುರಾಜ್, ಜಗದೀಶ್, ಗಿರೀಶ್, ಉಪಾಧ್ಯಕ್ಷರಾದ ಶಿವಕುಮಾರ್ ನಾಯ್ಕ, ಇಂದೂಧರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಹಿತ್ ನಾಯ್ಕ, ಕುಮಾರ್ ಗೌಡ್ರು, ಉಮೇಶ್, ಹುಚ್ಚಪ್ಪ, ಹುಚ್ಚಪ್ಪ ದೇವಾಂಗ, ಲೋಕೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts