More

    ಮೇಕೆದಾಟು ಯೋಜನೆ ಅನುಷ್ಠಾನ ಶತಸ್ಸಿದ್ಧ : ದೆಹಲಿಯಲ್ಲಿ ಬಿಎಸ್​ವೈ

    ನವದೆಹಲಿ : ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕರ್ನಾಟಕದ ಸಚಿವರೊಂದಿಗೆ ಚರ್ಚೆ ನಡೆಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿ ತಲುಪಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಮೇಕೆದಾಟು ಯೋಜನೆ ಅನುಷ್ಠಾನ ಮಾಡಿಯೇ ತೀರುತ್ತೇವೆಂದು ಹೇಳಿದ್ದಾರೆ.

    ಇಂದು ಸಂಜೆ 6.30 ರ ನಂತರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದು, ನಾಳೆ ಕರ್ನಾಟಕದ ಎಲ್ಲಾ ಸಚಿವರನ್ನೂ ಭೇಟಿ ಮಾಡುವ ಕಾರ್ಯಕ್ರಮವಿದೆ ಎಂದು ಬಿಎಸ್​ವೈ ತಿಳಿಸಿದರು. ಈ ಸಂದರ್ಭದಲ್ಲಿ, ರಾಜ್ಯದ ಮೇಕೆದಾಟು ಯೋಜನೆಗೆ ಅವಕಾಶ ಕೊಡಬಾರದೆಂದು ತಮಿಳುನಾಡಿನ ಸರ್ವಪಕ್ಷ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಿದ್ದು, ಕೇಂದ್ರದ ಮೇಲೆ ಒತ್ತಡ ತರುತ್ತಿದೆ. ಜೊತೆಗೆ ರಾಷ್ಟ್ರಪತಿಯವರನ್ನೂ ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಪತ್ರಕರ್ತರು ಗಮನ ಸೆಳೆದರು.

    ಇದನ್ನೂ ಓದಿ: ಚಾಮುಂಡಮ್ಮನ ದರ್ಶನ ಭಾಗ್ಯ ಸಿಗದಿದ್ದರೇನು? ಬ್ಯಾರಿಕೇಡ್​ ಬಳಿಯೇ ನಡೆಯಿತು ಪೂಜೆ,ಪುನಸ್ಕಾರ

    ಇದಕ್ಕೆ ಪ್ರತಿಕ್ರಿಯಿಸಿದ ಬಿಎಸ್​ವೈ, “ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಾನು ಮನದಟ್ಟು ಮಾಡಿದ್ದರೂ ಯಾಕೋ ಅವರು ಹಿಡಿದ ಹಟ ಬಿಡುತ್ತಿಲ್ಲ. ಆದರೆ, ಈ ಯೋಜನೆ ಮಾಡಲು ನಮಗೆ ಕಾನೂನಿನಲ್ಲೂ ಸಂಪೂರ್ಣ ಅವಕಾಶವಿದೆ. ಅದಕ್ಕಾಗಿ ನಾವು ಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ.. ಯಾವುದೇ ಅನುಮಾನ ಬೇಡ. ರಾಜ್ಯದ ಜನತೆಗೆ ಭರವಸೆ ಕೊಡುತ್ತೇನೆ – ಮೇಕೆದಾಟು ಯೋಜನೆ ನೂರಕ್ಕೆ ನೂರು ಕಾರ್ಯರೂಪಕ್ಕೆ ತರುತ್ತೇವೆ” ಎಂದರು.

    ದೆಹಲಿಯಲ್ಲಿ ತಮಿಳುನಾಡು ಚಟುವಟಿಕೆಯೂ ಬಿರುಸಿನಿಂದ ಸಾಗಿರುವಾಗ, ಯಡಿಯೂರಪ್ಪ ಅವರ ಈ ಧೋರಣೆ ಮಹತ್ವ ಪಡೆದುಕೊಂಡಿದೆ.

    ಮಕ್ಕಳಿಗೆ ಕರೊನಾ ಲಸಿಕೆ : ‘ಮುಗಿಯುವ ಹಂತದಲ್ಲಿ ಕ್ಲಿನಿಕಲ್ ಟ್ರಯಲ್ಸ್​’

    ಡಿಕೆಶಿ ಮುಂದೆಯೇ ‘ಮುಂದಿನ ಸಿಎಂ ಸಿದ್ದರಾಮಯ್ಯ’ ಎಂಬ ಕೂಗು!

    ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts