More

    ಕಮಲೇಶ್ ಚಂದ್ರ ವರದಿ ಅನುಷ್ಠಾನ ಮಾಡಿ

    ಶೃಂಗೇರಿ: ಏಳನೇ ವೇತನ ಆಯೋಗದ ಕಮಲೇಶ್ ಚಂದ್ರ ವರದಿಯಲ್ಲಿ ಗ್ರಾಮೀಣ ಅಂಚೆ ನೌಕರರಿಗೆ ಮಾಡಿರುವ ಶಿಫಾರಸುಗಳನ್ನು ಯಥಾವತ್ತಾಗಿ ಅನುಮೋದನೆ ಮಾಡಬೇಕು ಎಂದು ಅಂಚೆ ನೌಕರ ಕಿಗ್ಗಾ ಚಂದ್ರಶೇಖರ್ ಒತ್ತಾಯಿಸಿದರು.

    ಪಟ್ಟಣದ ಅಂಚೆಕಚೇರಿ ಎದುರು ಬುಧವಾರ ಕೇಂದ್ರ ಸರ್ಕಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
    8 ಗಂಟೆಗಳ ಕಾಲ ಕೆಲಸ ನೀಡುವುದು ಮತ್ತು ಪಿಂಚಣಿ ಸವಲತ್ತು ಒದಗಿಸಿ ಸೇವಾ ಹಿರಿತನದ ಆಧಾರದ ಮೇಲೆ ಜಿಡಿಎಸ್ ನೌಕರರಿಗೆ ವಿಶೇಷ ಇಂಕ್ರಿಮೆಂಟ್ ನೀಡಬೇಕು. ಗುಂಪು ವಿಮಾ ಯೋಜನೆ ಐದು ಲಕ್ಷ ರೂ.ಗೆ ಏರಿಸುವುದು, 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ನೀಡುವುದು ಹಾಗೂ ಜಿಡಿಎಸ್ ಮತ್ತು ಅವರ ಕುಟುಂಬದವರಿಗೆ ವೈದ್ಯಕೀಯ ಸೌಲಭ್ಯ ನೀಡುವುದು ಪ್ರಮುಖ ಬೇಡಿಕೆ ಎಂದರು.
    ಒಂದು ದಿನ ಗ್ರಾಮೀಣ ಭಾಗದ ಶಾಖಾ ಕಚೇರಿಗಳ ನೌಕರರು ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸಿದರು. ಗ್ರಾಮೀಣ ಅಂಚೆ ನೌಕರರಾದ ಪ್ರದೀಪ್, ಪ್ರಕಾಶ್, ರಘುಪತಿ, ಭೂಮಿಕಾ, ರಾಘವೇಂದ್ರ, ಶಿಂಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts