More

    ಗೋಶಾಲೆಗೆ ಸಿಕ್ತು ಸರ್ಕಾರದ ನೆರವು: 4 ಲೋಡ್ ಮೇವು, ಪಕ್ಷಿಗಳಿಗೆ 24 ಮೂಟೆ ಅಕ್ಕಿ, ಗೋಧಿ ವಿತರಣೆ, 6 ಲಕ್ಷ ರೂ. ದೇಣಿಗೆ ನೀಡಿದ ರಾಜಸ್ಥಾನ್ ಯೂತ್ ಅಸೋಸಿಯೇಷನ್

    ಬೆಂಗಳೂರು: ಕೋರಮಂಗಲದಲ್ಲಿರುವ ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘಕ್ಕೆ ಸರ್ಕಾರ ಒಂದು ತಿಂಗಳಿಗಾಗುವಷ್ಟು 4 ಲೋಡ್ ಒಣ ಮೇವು ಹಾಗೂ ಪಾರಿವಾಳಗಳಿಗೆ 24 ಮೂಟೆ ಅಕ್ಕಿ, ಗೋಧಿ ವಿತರಿಸಿದೆ.

    ಗೋವುಗಳು ಮೇವಿನ ಕೊರತೆಯಿಂದ ಬಳಲುತ್ತಿರುವ ಕುರಿತು ಏ.9ರಂದು ವಿಜಯವಾಣಿಯಲ್ಲಿ ಪ್ರಕಟವಾದ ಸುದ್ದಿ ಬೆನ್ನಲ್ಲೇ ಕಂದಾಯ ಸಚಿವ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಮೇಯರ್ ಎಂ. ಗೌತಮ್ ಕುಮಾರ್ ಭಾನುವಾರ ಭೇಟಿ ನೀಡಿ ಆಹಾರ ಪದಾರ್ಥ ವಿತರಿಸಿದರು.

    ಗೋಶಾಲೆಯಲ್ಲಿ ಹಸು, ಎಮ್ಮೆ, ಗೂಳಿ ಸೇರಿ 1,100ಕ್ಕೂ ಅಧಿಕ ಪ್ರಾಣಿಗಳು ವಾಸವಿದ್ದು, ಲಾಕ್​ಡೌನ್​ನಿಂದಾಗಿ ಮೇವಿನ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ವಿಜಯವಾಣಿ ವರದಿಗೆ ಸ್ಪಂದಿಸಿದ ರಾಜಸ್ಥಾನ್ ಯೂತ್ ಅಸೋಸಿಯೇಷನ್, 6 ಲಕ್ಷ ರೂ. ದೇಣಿಗೆ ನೀಡಿದ್ದಲ್ಲದೆ ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ದಿನಸಿ ಕಿಟ್​ಗಳನ್ನು ವಿತರಿಸಿತು. ಪ್ರಾಣಿ ದಯಾ ಸಂಘದ ಮುಖ್ಯಸ್ಥ ಸುನೀಲ್ ದುಗಾರ್, ಉಪ ಮೇಯರ್ ರಾಮ್ ಮೋಹನ್ ರಾಜು ಮತ್ತಿತರರಿದ್ದರು.

    ಸಮಸ್ಯೆ ಇದ್ದರೆ ಸಂರ್ಪಸಿ…: ಲಾಕ್​ಡೌನ್ ಸಂದರ್ಭದಲ್ಲಿ ಗೋವುಗಳು, ಪಕ್ಷಿಗಳು, ಮತ್ತು ಬೀದಿನಾಯಿಗಳಿಗೆ ಆಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ 20 ವಾರಗಳಿಗೆ ಆಗುವಷ್ಟು ಮೇವು ಸಂಗ್ರಹಿಸಲಾಗಿದೆ. ಗೋವುಗಳು ದೇವರ ಸಮಾನ, ಅವು ಹಸಿವಿನಿಂದ ಬಳಲಬಾರದು. ರಾಜ್ಯದ ಯಾವುದೇ ಗೋಶಾಲೆಯಲ್ಲಿ ಮೇವಿನ ಕೊರತೆ ಎದುರಾದಲ್ಲಿ ಕೂಡಲೇ ನಮ್ಮನ್ನು ಸಂರ್ಪಸಿದರೆ ಆಹಾರ ಒದಗಿಸುತ್ತೇವೆ ಎಂದು ಅಶೋಕ್ ಹೇಳಿದರು.

    ಲಾಕ್​ಡೌನ್ ಸಂದರ್ಭದಲ್ಲಿ ಗೋವುಗಳಿಗೆ ಮೇವಿನ ಕೊರತೆ ಎದುರಾಗಿರುವುದು ಮಾಧ್ಯಮ ಮೂಲಕ ಗಮನಕ್ಕೆ ಬಂದಿದ್ದರಿಂದ ಭೇಟಿ ನೀಡಿದ್ದೇವೆ. ಇಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದಿಂದ ಮತ್ತು ವೈಯಕ್ತಿಕವಾಗಿ ಕೈಲಾದ ಸಹಾಯ ಮಾಡಲಾಗುವುದು.
    | ಗೌತಮ್ ಕುಮಾರ್ ಮೇಯರ್

    ತಲೆನೋವಾದ ತಬ್ಲಿಘಿಗಳ ಪತ್ತೆ ಕಾರ್ಯ- ರಾಜಧಾನಿಯ 10 ಮಸೀದಿಗಳಿಗೆ ಭೇಟಿ | 2-3ನೇ ಸಂಪರ್ಕ ಹೊಂದಿರುವ ಭೀತಿ

    ಸೋಷಿಯಲ್ ಡಿಸ್ಟೆನ್ಸ್​ ನಿರ್ವಹಿಸದೆ ವ್ಯಾಪಾರ ಮಾಡದಿದ್ದಕ್ಕೆ ಕೇಸ್!: ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬೀಳುತ್ತಿರುವ ಜನರ ನಡವಳಿಕೆಗೆ ಅಂಗಡಿ ಮಾಲೀಕರೇ ಹೊಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts