More

    ಹತ್ತೂವರೆ ತಾಸಿನಲ್ಲಿ ಗೋಶಾಲೆ ನಿರ್ಮಾಣ

    ಗೋಕರ್ಣ: ಗೋವುಗಳನ್ನು ಸಾಕುವುದು ಮತ್ತು ಗೋಶಾಲೆ ಕಟ್ಟುವುದು ಸುಲಭದ ಮಾತಲ್ಲ. ಎಷ್ಟೊಂದು ದುಡ್ಡು ಎಷ್ಟೊಂದು ಸಮಯ ಬೇಕು. ಅದೆಲ್ಲ ಎಲ್ಲರಿಂದ ಸಾಧ್ಯವಿಲ್ಲ ಎಂದು ಗೋ ಸಾಕಣೆಯಿಂದ ನುಣುಚಿಕೊಳ್ಳುವವರಿಗೆ ಶ್ರೀ ರಾಮಚಂದ್ರಾಪುರ ಮಠದ ಅಶೋಕೆಯಲ್ಲಿ ಸಾರ್ವಕಾಲಿಕವಾಗಿ ಉಳಿಯಬಲ್ಲ ಪ್ರತ್ಯುತ್ತರ ನೀಡಲಾಗಿದೆ.

    ಕೇವಲ ಹತ್ತೂವರೆ ತಾಸು ಸಮಯದಲ್ಲಿ ದಿಢೀರ್ ಆಗಿ ಇಲ್ಲೊಂದು ಗೋಶಾಲೆ ಕಟ್ಟಿ ನಿಲ್ಲಿಸಲಾಗಿದೆ. ಇದನ್ನು ಸ್ವಯಂ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಚಾತುರ್ವಸ್ಯ ಸೀಮೋಲ್ಲಂಘನದ ಧರ್ಮಸಭೆಯಲ್ಲಿ ಬಹಿರಂಗ ಪಡಿಸಿ ಸಭೆಯನ್ನು ಚಕಿತಗೊಳ್ಳುವಂತೆ ಮಾಡಿದ್ದಾರೆ.

    ಎರಡು ತಿಂಗಳ ಹಿಂದೆ ಅಶೋಕೆಯಲ್ಲಿ ಚಾತುರ್ವಸ್ಯ ಪ್ರಾರಂಭ ಆದಾಗಿನಿಂದ ಅಶೋಕೆಯ ಮಠಕ್ಕೊಂದು ಗೋಶಾಲೆ ಬೇಕು ಎಂಬ ಅಭೀಪ್ಸೆ ಶ್ರೀಗಳನ್ನು ಕಾಡುತ್ತಿತ್ತು. ಆದರೆ, ನೋಡ ನೋಡುತ್ತಿದ್ದಂತೆ ಚಾತುರ್ವಸ್ಯ ಮುಕ್ತಾಯಕ್ಕೆ ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿತ್ತು. ಆದರೆ, ಗೋಶಾಲೆ ನಿರ್ವಣವಾಗಿರಲಿಲ್ಲ. ಸೆ. 2ರಂದು ಬುಧವಾರ ಚಾತುರ್ವಸ್ಯ ಸಂಪನ್ನವಾಗಲಿತ್ತು. ಈ ವೇಳೆ ಸೋಮವಾರ ಪಿಡಬ್ಲ್ಯುಡಿ ನಿವೃತ್ತ ಇಂಜಿನಿಯರ್ ಆರ್.ಜಿ. ಭಟ್ಟ ಎಂಬುವವರನ್ನು ಸಂರ್ಪಸಿ ಈ ಬಗ್ಗೆ ಕೊಟೇಶನ್ ಪಡೆದು ಮಂಗಳವಾರದೊಳಗೆ ಕಟ್ಟಿಕೊಡಲು ಕೇಳಲಾಯಿತು. ಮೊದಲು ತಿಳಿಸಿದಂತೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ತಮ್ಮ ಕೆಲಸಗಾರರ ಟೀಮ್ ಜೊತೆ ಬಂದ ಅವರು ರಾತ್ರಿ 8-30 ಗಂಟೆಯೊಳಗೆ ಸುಭದ್ರವಾದ, ಪುಟ್ಟ ದೇಶೀಯ ಮಾದರಿ ಗೋಶಾಲೆ ಕಟ್ಟಿ ನಿಲ್ಲಿಸಿದ್ದರು.

    ಸಭೆಯಲ್ಲಿ ಈ ಬಗ್ಗೆ ಯಥಾವತ್ ವಿವರಣೆ ನೀಡಿದ ಶ್ರೀಗಳು, ಎಲ್ಲದಕ್ಕೂ ಮೊದಲು ಮನಸ್ಸು ಬೇಕು. ಅದು ಇದ್ದರೆ ಗೋಶಾಲೆ ಮಾಡುವುದು ದೊಡ್ಡ ಕೆಲಸವೇನಲ್ಲ. ಹಾಗೆಂದು ಕಾಮಗಾರಿಯಲ್ಲಿ ಯಾವುದೇ ಹೊಂದಾಣಿಕೆ ಮಾಡಲಾಗಿಲ್ಲ. ಉತ್ತಮವಾದ ಕೆಲಸ ಮಾಡಲಾಗಿದೆ. ಬೇಗ ಕೆಲಸ ಮಾಡಲಾಯಿತೆಂದು ಹೆಚ್ಚು ಹಣವೂ ವ್ಯಯವಾಗಲಿಲ್ಲ. ಅವರು ಮಠಕ್ಕೆ 21 ಸಾವಿರ ರೂ. ಅಂದಾಜು ವೆಚ್ಚದ ಕೊಟೇಶನ್ ಕೊಟ್ಟಿದ್ದರು. ಅಂತಿಮವಾಗಿ ಖರ್ಚಾಗಿರುವುದು ಕೇವಲ 20 ಸಾವಿರ ರೂ. ಮಾತ್ರ! ಇಷ್ಟು ಬೇಗನೆ ಮತ್ತು ಸಾಮಾನ್ಯರಿಗೆ ಕೈಗೆಟುಕಬಲ್ಲ ವೆಚ್ಚದಲ್ಲಿ ಒಂದು ಗೋಶಾಲೆ ನಿರ್ವಿುಸಬಹುದು ಎನ್ನುವುದಕ್ಕೆ ಇದೊಂದು ನಿದರ್ಶನ ಮತ್ತು ದಾಖಲೆಯಾಗಿ ಉಳಿಯಲಿದೆ ಎಂದು ತಿಳಿಸಿದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts