More

    ರೋಗನಿರೋಧಕ ಶಕ್ತಿ ವೃದ್ಧಿಸುವ ಆಹಾರ ಸೇವಿಸಿ

    ಖಾನಾಪುರ: ಪಟ್ಟಣದ ಬ್ಲ್ಯೂ ಸ್ಕೈ ಉಪಾಹಾರ ಗೃಹದ ವತಿಯಿಂದ ಸ್ಥಳೀಯ ಬಸವೇಶ್ವರ ವೃತ್ತದ ಬಳಿಯ ಅಕ್ವಾ ಪಾಲೇಸ್‌ನಲ್ಲಿ ಶನಿವಾರ ಆಯೋಜಿಸಿದ್ದ ರೆಡ್ ಮಿರ್ಚಿ ಮಾಂಸಾಹಾರಿ ಆಹಾರ ಮೇಳಕ್ಕೆ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ಉಪಾಹಾರ ಗೃಹಗಳು ಗ್ರಾಹಕರ ಎರಡನೇ ಮನೆ ಇದ್ದಂತೆ. ಹೀಗಾಗಿ ಗ್ರಾಹಕರಿಗೆ ಪೌಷ್ಟಿಕ ಆಹಾರ, ಶುದ್ಧ ನೀರು ನೀಡಲು ಅಂಗಡಿ ಮಾಲೀಕರು ಅಗತ್ಯ ಗಮನ ವಹಿಸಬೇಕು. ಪ್ರಸ್ತುತ ಕೋವಿಡ್-19 ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ರೋಗನಿರೋಧಕ ಶಕ್ತಿ ವೃದ್ಧಿಸುವ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.

    ಆಯೋಜಕ ಮಹಮ್ಮದ್ ನಂದಗಡಿ ಮಾತನಾಡಿ, ಮೇಳದ ಮೂಲಕ ಮಾಂಸಾಹಾರ ಪ್ರಿಯರಿಗೆ ಬಗೆ-ಬಗೆಯ ಮಾಂಸಾಹಾರಿ ಡಿಶ್‌ಗಳನ್ನು ತಯಾರಿಸುವ ಕುರಿತು ಮತ್ತು ಮಾಂಸಾಹಾರವನ್ನು ಸೇವಿಸಿದರೆ ದೊರೆಯುವ ಪೌಷ್ಟಿಕಾಂಶಗಳ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ ಎಂದರು. ಆಹಾರ ಮೇಳದ ಅಂಗವಾಗಿ ವಿವಿಧ ಬಗೆಯ ಕೋಳಿ ಹಾಗೂ ಕುರಿ ಮಾಂಸವನ್ನು ಬಳಸಿ ತಯಾರಿಸಿದ ಪೌಷ್ಟಿಕ ಆಹಾರವನ್ನು ಸವಿದ ಸಾರ್ವಜನಿಕರು ಮೇಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ತೋಪಿನಕಟ್ಟಿ ಗ್ರುಪ್ ಸಂಸ್ಥಾಪಕ ವಿಠ್ಠಲ ಹಲಗೇಕರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುರಳೀಧರ ಪಾಟೀಲ, ಪಪಂ ಮುಖ್ಯಾಧಿಕಾರಿ ವಿವೇಕ ಬನ್ನೆ, ಪಪಂ ಸದಸ್ಯೆ ಮೇಘಾ ಕುಂದರಗಿ, ವಕೀಲ ಸಿ.ಬಿ.ಅಂಬೋಜಿ, ತಹಸೀಲ್ದಾರ್ ರೇಷ್ಮಾಭಾನು ತಾಳಿಕೋಟಿ, ಹಜರತ್ ಕರೀಮುದ್ದೀನ ಅನ್ಸಾರಿ, ಲಿಯಾಕತಲಿ ಬಿಚ್ಚುನವರ, ಮನ್ಸೂರ್ ನಂದಗಡಿ, ಅಬ್ದುಲ್‌ರೆಹಮಾನ ನಂದಗಡಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts