More

    ಕೂಡಲೆ ಪೌರ ಕಾರ್ಮಿಕರ ಕಾಯಂ ಮಾಡಿ

    ಶಿವಮೊಗ್ಗ: ನೇರ ಪಾವತಿ ಪೌರ ಕಾರ್ಮಿಕರು ಹಾಗೂ ಹೊರಗುತ್ತಿಗೆ ಆಧಾರದ ಒಳಚರಂಡಿ ವಿಭಾಗದ ನೌಕರರನ್ನು ಕೂಡಲೇ ಕಾಯಂ ಮಾಡಬೇಕು ಎಂದು ಒತ್ತಾಯಿಸಿ ನಗರ ಪಾಲಿಕೆ ನೇರಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

    ನೇರ ಪಾವತಿ ಪೌರ ಕಾರ್ಮಿಕರು ಹಾಗೂ ಹೊರಗುತ್ತಿಗೆ ಆಧಾರದ ಒಳಚರಂಡಿ ವಿಭಾಗದ ನೌಕರರನ್ನು ಕಾಯಂ ಮಾಡಲು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದೆ. ನಗರ ಪಾಲಿಕೆಯಲ್ಲಿ 89 ಜನ ನೇರ ಪಾವತಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಅನುಮೋದನೆ ದೊರೆತಿದೆ. ಆದರೆ 105 ಜನ ನೇರ ಪಾವತಿ ಪೌರ ಕಾರ್ಮಿಕರಿದ್ದಾರೆ. 35 ಜನ ಹೊರಗುತ್ತಿಗೆ ಆಧಾರದ ಒಳಚರಂಡಿ ವಿಭಾಗದ ನೌಕರರು ಇದ್ದಾರೆ. ಈ ಎಲ್ಲಾ ನೌಕರರನ್ನು ಏಕ ಕಾಲದಲ್ಲಿ ಕಾಯಂ ಮಾಡಬೇಕು ಎಂದು ಆಗ್ರಹಿಸಿದರು.
    ಭದ್ರಾವತಿ, ಸಾಗರ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ ಸೇರಿದಂತೆ ಎಲ್ಲ ತಾಲೂಕುಗಳ ನೇರ ಪಾವತಿ ಕಾರ್ಮಿಕರನ್ನು ಏಕ ಕಾಲದಲ್ಲಿ ಕಾಯಂ ಮಾಡಿ ಮಾಡಿ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
    ಸಂಘದ ನಗರ ಅಧ್ಯಕ್ಷ ರವಿಕಿರಣ್, ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜ, ಖಜಾಂಚಿ ನವೀನ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts