More

    ಜನರ ಪ್ರೀತಿಯೇ ಖಾಕಿ ಪಡೆಯ ಅಸ್ತ್ರ

    ಐಮಂಗಲ: ಸಾರ್ವಜನಿಕರ ಸಹಕಾರವೇ ಖಾಕಿ ಪಡೆಯ ಅಸ್ತ್ರ. ಜನರ ವಿಶ್ವಾಸ ಗಳಿಸುವ ಮೂಲಕ ಸಶಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುವಂತೆ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಎಸ್.ಪರಶಿವಮೂರ್ತಿ ತಿಳಿಸಿದರು.

    ಗ್ರಾಮದ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 1ನೇ ತಂಡದ ಸಶಸ್ತ್ರ ಹಾಗೂ ಪೇದೆಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ದೊಡ್ಡದಿದೆ. ನಿಷ್ಠೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಕರ್ತವ್ಯ ಪಾಲಿಸುವಂತೆ ತಿಳಿಸಿದರು.

    ಸಿಪಿಐ ಸತೀಶ್ ಯಳ್ಳೂರು ಬೆಂಗಾವಲಿನಲ್ಲಿ ರಾಷ್ಟಧ್ವಜ ಹಾಗೂ ಪೊಲೀಸ್ ಧ್ವಜಕ್ಕೆ ರಾಷ್ಟ್ರಗೀತೆ ಮೂಲಕ ಧ್ವಜವಂದನೆ ಸಲ್ಲಿಸಲಾಯಿತು. ಒಳಾಂಗಣ ಹಾಗೂ ಹೊರಾಂಗಣದಲ್ಲಿ ವಿಜೇತರಾದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.

    ಒಳಾಂಗಣ: ಸಿಎಆರ್‌ನಲ್ಲಿ ಶೀತಲ್ ಗೊಳೇಶಿ (ಪ್ರ), ಅರುಣ್ ಬಾಗೇವಾಡಿ (ದ್ವಿ). ಕೆಎಸ್‌ಐಎಸ್‌ಎಫ್‌ನಲ್ಲಿ ಹಣುಮೇಶ್ ಮೇಟಿ (ಪ್ರ), ಹನುಮಂತಪ್ಪ ರಂಗಪ್ಪ ಕಲಾದಗಿ (ದ್ವಿ)

    ಹೊರಾಂಗಣ: ಸಿಎಆರ್‌ನಲ್ಲಿ ಎಸ್.ಅರುಣ್‌ಕುಮಾರ್ (ಪ್ರ), ಸಿದ್ದರಾಯ ಅವಟಿ (ದ್ವಿ), ಸಾಂಬಾಜಿ ಸಂಕಪಾಳೆ (ತೃ), ಫೈರಿಂಗ್‌ನಲ್ಲಿ ವಿನಾಯಕ ಎಲಿಗಾರ್ (ಪ್ರ), ಶಂಕರಪ್ಪ ಹೊನಗೌಡರ್ (ದ್ವಿ), ಸಾಹೇಬ್ ಪಾಟೀಲ್ ಆಸ್ಕಿ (ತೃ), ಇದರೊಂದಿಗೆ ಸರ್ವೋತ್ತಮ ಪ್ರಶಸ್ತಿಯಾದ ಡಿಜಿ ಐಜಿಪಿ ಪ್ರಶಸ್ತಿಯನ್ನು ಎಸ್.ಅರುಣ್‌ಕುಮಾರ್ ಪಡೆದುಕೊಂಡರು.

    ಎಚ್.ಐ.ಶೇಕ್, ಬೆಂಗಳೂರು ಸಿಎಆರ್ ಸೌತ್‌ನ ರಾಚಯ್ಯ, ಚಿತ್ರದುರ್ಗ ಡಿಎಆರ್‌ನ ಸಿ.ಪಾಂಡುರಂಗಪ್ಪ ನೇತೃತ್ವದ ತಂಡ ವಾದ್ಯವೃಂದ ನಡೆಸಿಕೊಟ್ಟಿತು.

    ಪೊಲೀಸ್ ಮಹಾನಿರೀಕ್ಷಕ (ತರಬೇತಿ) ಪಿ.ಹರಿಶೇಖರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೆ.ರಾಧಿಕಾ, ಎಎಸ್‌ಪಿ ಮಹಾಲಿಂಗ ನಂದಗಾವಿ, ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಬಸವನಾಗಿ ದೇವ ಸ್ವಾಮೀಜಿ, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಾಜಿ ಅಧ್ಯಕ್ಷ ಪಾತ್ಯರಾಜನ್, ಸಿಪಿಐಗಳಾದ ವರದರಾಜು, ಲಕ್ಷ್ಮಣ್, ಎಸ್.ಟಿ.ಒಡೆಯರ್, ಆರ್‌ಪಿಐ ಬಿ.ಪರಶುರಾಮ್, ಎಡಿಪಿ ಸತೀಶ್ ಉಪಸ್ಥಿತರಿದ್ದರು.

    ಪೊಲೀಸ್ ತರಬೇತಿ ಶಾಲೆಯ ಎಸ್ಪಿ ಪಿ.ಪಾಪಣ್ಣ ಹೇಳಿಕೆ: ತರಬೇತಿ ಶಾಲೆಯಲ್ಲಿ ಇಲ್ಲಿಯವರೆಗೂ 1680 ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಹೊರಾಂಗಣ ಹಾಗೂ ಒಳಾಂಗಣ ವಿಷಯದಲ್ಲಿ ನುರಿತ ಶಿಕ್ಷಕರಿಂದ 8 ತಿಂಗಳ ಕಾಲ ತರಬೇತಿ ಕೊಡಲಾಗಿದೆ.

    ಕವಾಯತು ಮೈದಾನ ಅಲಂಕಾರ: ಬಣ್ಣ ಬಣ್ಣದ ಹೂವು, ಬಟ್ಟೆಗಳಿಂದ ಪೊಲೀಸ್ ಕವಾಯತು ಮೈದಾನವನ್ನು ಸಿಂಗರಿಸಲಾಗಿತ್ತು. ದೂರದ ಊರುಗಳಿಂದ ಪಾಲಕರು, ಸಂಬಂಧಿಗಳು, ಸ್ನೇಹಿತರು ಪಾಲ್ಗೊಂಡು, ಪಥಸಂಚಲನ ಕಣ್ತುಂಬಿಕೊಂಡರು. ಮುಖ್ಯ ಅಥಿತಿಗಳನ್ನು ಬೈಕ್ ಬೆಂಗಾವಲಿನಲ್ಲಿ ವೇದಿಕೆಯವರೆಗೂ ಬರ ಮಾಡಿಕೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts