More

    ತಮ್ಮ ಆರೋಗ್ಯದ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುತ್ತಿಲ್ಲ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ! ಕೇಳಿದ್ರೆ ಮಾಸ್ಕ್​ ಧರಿಸೋದು, ಬಿಡೋದು ಅವರವರ ಇಷ್ಟ ಅಂತಿದ್ದಾರೆ..

    ವಾಷಿಂಗ್ಟನ್​: ಅಮೆರಿಕದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ವಿಪರೀತವಾಗಿ ಏರುತ್ತಿದೆ. ಕಳೆದ 24 ಗಂಟೆಯಲ್ಲಿ 1500 ಮಂದಿ ಕರೊನಾದಿಂದ ಸಾವನ್ನಪ್ಪಿದ್ದು, ಅಲ್ಲಿಗೆ ಮೃತರ ಸಂಖ್ಯೆ 7400ಕ್ಕೆ ಏರಿದೆ. 2, 78,000 ಜನ ಸೋಂಕಿತರಿದ್ದಾರೆ.

    ದೇಶದಲ್ಲಿ ಕರೊನಾ ಸೋಂಕು ಹೆಚ್ಚುತ್ತಿದ್ದರೂ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಾತ್ರ ತಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಮಾಸ್ಕ್​ ಧರಿಸದೆಯೇ ವೈಟ್ ಹೌಸ್​ಗೆ ಬರುತ್ತಿದ್ದಾರೆ, ಸಭೆ, ಸುದ್ದಿಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

    ದೇಶದಲ್ಲಿ ಕರೊನಾ ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿರುವ ಅಧ್ಯಕ್ಷ ಟ್ರಂಪ್​ ಪ್ರತಿದಿನ ವೈಟ್​ಹೌಸ್​ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಆದರೆ ಮಾಸ್ಕ್​ ಧರಿಸದೆ, ಯಾವುದೇ ರಕ್ಷಣಾ ಸಾಧನಗಳನ್ನು ಹೊಂದದೆ ಬರುತ್ತಿದ್ದಾರೆ. ಅಷ್ಟೇ ಅಲ್ಲದೆ, ಕರೊನಾ ವೈರಸ್​ ಟಾಸ್ಕ್​ಫೋರ್ಸ್​ ಸಿಬ್ಬಂದಿಯೊಂದಿಗೆ ತುಂಬ ಹತ್ತಿರದಲ್ಲೇ ನಿಂತು ಮಾತನಾಡುತ್ತಾರೆ. ಸಾಮಾಜಿಕ ಅಂತರವನ್ನೂ ಪಾಲಿಸುತ್ತಿಲ್ಲ.

    ಈ ಬಗ್ಗೆ ಮಾಧ್ಯಮದವರು ಟ್ರಂಪ್​​ರನ್ನು ಪ್ರಶ್ನಿಸಿದಾಗ, ಮಾಸ್ಕ್​ ನನಗೆ ಅಗತ್ಯವಿಲ್ಲ ಎಂದಿದ್ದಾರೆ. ಮಾಸ್ಕ್​ ಧರಿಸುವುದು, ಬಿಡುವುದು ಅವರವರ ಇಷ್ಟ. ಅನೇಕರು ಸ್ವಯಂ ಪ್ರೇರಿತರಾಗಿ ಮಾಸ್ಕ್​ ಹಾಕಿಕೊಳ್ಳುತ್ತಿದ್ದಾರೆ. ಆದರೆ ನನಗೆ ಮಾಸ್ಕ್​ ಹಾಕಿಕೊಳ್ಳಲು ಇಷ್ಟವಿಲ್ಲ ಎಂದಿದ್ದಾರೆ.

    ಹಾಗಂತ ದೇಶದ ಜನರಿಗೆ ಮಾಸ್ಕ್​ ಧರಿಸುವಂತೆ, ಕೈಗಳನ್ನು ಆಗಾಗ ತೊಳೆದುಕೊಳ್ಳುವಂತೆ, ಕರೊನಾ ವೈರಸ್​ ಬಾರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಹೇಳುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts