More

    ಹನ್ನೆರಡುಮಠ ಸಾಹಿತ್ಯದ ಹಿಮಗಿರಿ

    ಇಳಕಲ್ಲ: ಹಿರಿಯ ಸಾಹಿತಿ ಜಿ.ಎಚ್. ಹನ್ನೆರಡುಮಠ ಸಾಹಿತ್ಯದ ಹಿಮಗಿರಿ ಇದ್ದಂತೆ. ಅವರ ಸಮಗ್ರ ಕೃತಿಗಳ ಕುರಿತು ಗಂಭೀರ ಚರ್ಚೆಯಾಗಲಿ ಎಂದು ಸಾಹಿತಿ ಗಿರಿರಾಜ ಹೊಸಮನಿ ಹೇಳಿದರು.

    ನಗರದ ಎಸ್. ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕದ ಸಹಯೋಗದಲ್ಲಿ ಭಾನುವಾರ ನಡೆದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜಿ.ಎಚ್. ಹನ್ನೆರಡುಮಠ ಬದುಕು-ಬರಹ ಸಂವಾದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

    110 ಕೃತಿಗಳ ಮೂಲಕ ಸಾಹಿತ್ಯ ಚರಿತ್ರೆಯಲ್ಲಿ ಹನ್ನೆರಡುಮಠ ಚಿರಸ್ಥಾಯಿ ಸ್ಥಾನ ಪಡೆದಿದ್ದಾರೆ. ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಮನಗೆದ್ದವರು. ದೇಶೀಯ ಭಾಷೆ ಸೊಗಡಿನ ತಾಕತ್ತು ಅವರ ಕೃತಿಯಲ್ಲಿದೆ. ಅವರೊಬ್ಬ ದೈವಿ ವಿದ್ವಾಂಸರು ಎಂದು ಬಣ್ಣಿಸಿದರು.

    ಸಮ್ಮೇಳನಾಧ್ಯಕ್ಷ ಜಿ.ಎಚ್. ಹನ್ನೆರಡುಮಠ ಸಂವಾದದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ಬರಹಗಾರನಿಗೆ ಓದುಗರ ಗಮನದಲ್ಲಿಟ್ಟುಕೊಂಡು ಬರೆಯುವಂತ ತುಡಿತವಿರಬೇಕು. ಪ್ರತಿಯೊಬ್ಬರ ಬದುಕಿನಲ್ಲಿ ನಡೆಯುವ ಘಟನೆಗಳೇ ಸಾಹಿತ್ಯ ರಚನೆಗೆ ಪ್ರೇರಣೆಯಾಗಲಿವೆ. ಒತ್ತಾಯದಿಂದ ಸಾಹಿತ್ಯ ಸೃಷ್ಟಿಸಲಾಗದು. ಯುವಜನತೆಯಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ಜವಾಬ್ದಾರಿ ಕಸಾಪದ ಮೇಲಿದೆ ಇದೆ ಎಂದರು.

    ನಿವೃತ್ತ ಪ್ರಾಚಾರ್ಯ ಡಾ.ಬಿ.ಎಂ. ಚಲವಾದಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯರಾದ ಎಚ್.ಎಸ್. ಪೂಜಾರಿ, ಡಿ.ಎಸ್. ಕರಡ್ಯಾಳ, ಬಿ.ಎಂ. ಹೊಸಮನಿ, ಎಸ್.ಆರ್. ಜಾಲಿಹಾಳ ಮಾತನಾಡಿ, ಹನ್ನೆರಡುಮಠ ಅವರರೊಂದಿಗಿನ ಒಡನಾಟ, ಗೆಳೆತನ ಹಾಗೂ ನೆನಪಿನ ಬುತ್ತಿ ಬಿಚ್ಚಿಟ್ಟರು. ಜಿಲ್ಲೆಯ ಸಾಹಿತಿಗಳಾದ ಮಲ್ಲಿಕಾರ್ಜುನ ರಾಜನಾಳ, ಬಸವರಾಜ ಕುಂಬಾರ, ಡಾ.ನಂಜುಂಡಸ್ವಾಮಿ, ಡಾ.ವಿನಯ ಹಿರೇಮಠ, ಆನಂದ ಪೂಜಾರ, ಕಿರಣ ಬಿಜ್ಜಲ, ಜೆ.ಎಂ. ಬಾದಾಮಿ, ಜ್ಯೋತಿಭಾ ಅವತಾಡೆ ಸೇರಿ ಅನೇಕರು ಸಂವಾದದಲ್ಲಿ ಭಾಗವಹಿಸಿದ್ದರು.

    ಮಾಟ ಮಂತ್ರ ನಂಬಬೇಡಿ
    ಮೌಢ್ಯ ನಿಷೇಧ ಕಾಯ್ದೆ ಜಾರಿಗೊಳಿಸುವಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷೃ ವಹಿಸುತ್ತಿದ್ದಾರೆ ಎಂದು ವಿಜ್ಞಾನ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ಎಮ್ಮಿ ಹೇಳಿದರು.

    ಕನ್ನಡ ಸಾಹಿತ್ಯ ಸಮ್ಮೇಳನದ ಮೌಢ್ಯತೆ, ವೈಜ್ಞಾನಿಕತೆ, ಸಾಮಾಜಿಕ ಸಂಘರ್ಷ ಕುರಿತು ನಡೆದ ಗೋಷ್ಠಿಯಲ್ಲಿ ಮಾಟ ಮತ್ತು ಮಂತ್ರದ ಬಗ್ಗೆ ಮಾತನಾಡಿ, ಜ್ಯೋತಿಷ ನಂಬಿದರೂ ಅದರಲ್ಲಿ ವೈಜ್ಞಾನಿಕ ಚಿಂತನೆ ಇರಲಿ. ರಾಜ್ಯದಲ್ಲಿ ಅತಿ ಹೆಚ್ಚು ಮಾಟ ಮಂತ್ರ ಮಾಡುವುದು ಚಿತ್ರದುರ್ಗ ಜಿಲ್ಲೆಯಲ್ಲಿ. ದೇಶದ ಬೇರೆ ಬೇರೆ ಭಾಗದ ಮಾಂತ್ರಿಕರು ಬಾಗಲಕೋಟೆ, ಹಾವೇರಿ, ಬೆಳಗಾವಿ ಸೇರಿ ಇತರ ಪ್ರಮುಖ ನಗರಗಳಲ್ಲಿ ಆಗಮಿಸಿ ಜನರನ್ನು ಮೋಸ ಮಾಡುತ್ತಿದ್ದಾರೆ. ಅಂತಹವರನ್ನು ನಂಬಬೇಡಿ ಎಂದರು.

    ಡಾ.ಲಿಂಗಾನಂದ ಗವಿಮಠ ‘ದೇವರು ಹಾಗೂ ದೆವ್ವ’, ಯೋಗಿಶ ಲಮಾಣಿ ‘ಬಾನಾಮತಿ, ಮೂಢನಂಬಿಕೆ ಹಾಗೂ ವೈಜ್ಞಾನಿಕ ವಿಷಯಗಳ’ ಕುರಿತು ಉಪನ್ಯಾಸ ನೀಡಿದರು. ವಿಜ್ಞಾನ ಪರಿಷತ್ ನಿದೇಶಕ ಬಿ.ದೊಡ್ಡಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಎಂ.ಎನ್. ತೆನಹಳ್ಳಿ, ಬಿ.ಎಂ. ಗಜೇಂದ್ರಗಡ, ಎಸ್.ಜಿ. ಹುದ್ದಾರ, ಸಿ.ಜಿ. ಹವಾಲ್ದಾರ್, ನಿಂಗಯ್ಯ ಒಡೆಯರ, ಆರ್.ಆರ್. ಸಂದಿಮನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts