More

    ಶೋಭಾ ಅಧ್ಯಕ್ಷೆ ಸವಿತಾ ಉಪಾಧ್ಯಕ್ಷೆ

    ಇಳಕಲ್ಲ(ಗ್ರಾ): ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಸಿದ್ದಣ್ಣ ಆಮದಿಹಾಳ ಅಧ್ಯಕ್ಷರಾಗಿ, ಸವಿತಾ ರಾಜೇಂದ್ರ ಆರಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

    ಭಾನುವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಶೋಭಾ ಆಮದಿಹಾಳ, ಕಾಂಗ್ರೆಸ್‌ನಿಂದ ಅಮೃತ ಬಿಜ್ಜಳ ಸ್ಪರ್ಧಿಸಿದ್ದರು. ಬಿಜೆಪಿಯ ಶೋಭಾ ತಮ್ಮ ಪಕ್ಷದ 20, ಜೆಡಿಎಸ್ ಎರಡು, ಪಕ್ಷೇತರ ಒಬ್ಬ ಸದಸ್ಯ, ಶಾಸಕ ದೊಡ್ಡನಗೌಡ ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ ಸೇರಿ ಒಟ್ಟು 25 ಮತಗಳನ್ನು ಪಡೆದು ಜಯಗಳಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಭ್ಯರ್ಥಿ ಕೇವಲ ಆರು ಮತಗಳನ್ನು ಪಡೆದರು. ಕಾಂಗ್ರೆಸ್‌ನ ಸುರೇಶ ಜಂಗ್ಲಿ ಮತ್ತು ಮೌಲೇಶ ಬಂಡಿವಡ್ಡರ ಸಭೆಗೆ ಗೈರಾಗಿದ್ದರು.

    ಬಿಸಿಎ ಕ್ಷೇತ್ರಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 11 ನೇ ವಾರ್ಡ್‌ನ ಬಿಜೆಪಿಯ ಸವಿತಾ ಆರಿ ಸ್ಪರ್ಧಿಸಿ 25 ಮತಗಳನ್ನು ಗಳಿಸಿದರು. ಕಾಂಗ್ರೆಸ್‌ದ ಸೋನಾರ ಕೇವಲ 6 ಮತಗಳನ್ನು ಪಡೆದು ಸೋಲು ಅನುಭವಿಸಿದರು.
    ಚುನಾವಣೆ ನಂತರ ಮಾತನಾಡಿದ ಶಾಸಕರು ಮತ್ತು ಸಂಸದರ, ನಗರದ ಅಭಿವೃದ್ಧಿ ಕಾರ್ಯಗಳಿಗೆ ಸದಸ್ಯರ ಜತೆಗೆ ಸದಾಕಾಲ ಇರುತ್ತೇವೆ ಎಂದು ಹೇಳಿದರು.

    ನೂತನ ಅಧ್ಯಕ್ಷೆ ಶೋಭಾ ಆಮದಿಹಾಳ, ಉಪಾಧ್ಯಕ್ಷೆ ಸವಿತಾ ಆರಿ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತವನ್ನು ನೀಡುತ್ತೇವೆ ಮತ್ತು ನಗರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

    ಬಿಜೆಪಿ ನಗರ ಅಧ್ಯಕ್ಷ ಅರವಿಂದ ಮಂಗಳೂರ, ಗ್ರಾಮೀಣ ಅಧ್ಯಕ್ಷ ಮಹಾಂತಗೌಡ ಪಾಟೀಲ ತೊಂಡಿಹಾಳ, ಬಿಜೆಪಿ ನಗರಸಭೆ ಸದಸ್ಯರು ಸೇರಿ ಪ್ರಮುಖರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts