More

    ಲಾಲಬಾಗ್ ಮಾದರಿ ಟ್ರಿ ಪಾರ್ಕ್ ನಿರ್ಮಿಸಿ

    ವಿಜಯಪುರ: ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಿಸುವ ನಿಟ್ಟಿನಲ್ಲಿ ಕರಾಡದೊಡ್ಡಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಲಾಲ್‌ಬಾಗ್ ಮಾದರಿ ಟ್ರಿ ಪಾರ್ಕ್ ನಿರ್ಮಿಸುವುದು ಹಾಗೂ ವಿವಿಧ ತಳಿಯ ಗಿಡಗಳನ್ನು ನೆಡುವ ಮೂಲಕ ಅರಣ್ಯ ಪ್ರದೇಶ ಹೆಚ್ಚಿಸಲು ಪ್ರಯತ್ನಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾಡಳಿತ ಕಚೇರಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಕೋಟಿ ವೃಕ್ಷ ಅಭಿಯಾನ ಪ್ರತಿಷ್ಠಾನ ಕ್ರಿಯಾ ಯೋಜನೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಜಿಲ್ಲೆಯಲ್ಲಿ ಲಭ್ಯವಿರುವ ಗಿಡಗಳ ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳಲ್ಲಿನ ವಿವಿಧ ಹಾಗೂ ವಿಶೇಷ ತಳಿಯ ಗಿಡಗಳನ್ನು ತರಲಾಗುವುದು ಹಾಗೂ ಅವುಗಳ ಸಂರಕ್ಷಣೆ ಮತ್ತು ನಿರ್ವಹಣೆ ವ್ಯವಸ್ಥಿತವಾಗಿ ಮಾಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
    ಜಿಲ್ಲೆಯ ಭೌಗೋಳಿಕ ಹವಾಗುಣವನ್ನು ಗಮನದಲ್ಲಿಟ್ಟುಕೊಂಡು ವಿವಿಧ ತಳಿಯ ಗಿಡಗಳು ನಮ್ಮ ಜಿಲ್ಲೆಯ ವಾತಾವರಣಕ್ಕೆ ಹೊಂದುವಂತಹ ಗಿಡಗಳನ್ನು ಬೆಳೆಸಬೇಕು. ಅಕ್ಕಪಕ್ಕದ ಜಿಲ್ಲೆಗಳಿಂದಲೇ 60 ರಿಂದ 70 ತಳಿಯ ಗಿಡಗಳು ಲಭ್ಯವಿದ್ದು, ಅದರ ಜೊತೆಗೆ ಬೇರೆ ರಾಜ್ಯಗಳ, ದೇಶಗಳ ಗಿಡಗಳನ್ನು ತರಲು ಪ್ರಯತ್ನಿಸಲಾಗುವುದು. ವೃಕ್ಷ ಅಭಿಯಾನಕ್ಕೆ ಎಲ್ಲ ಸಂಘ-ಸಂಸ್ಥೆಗಳಿಗೆ, ಪರಿಸರ ಪ್ರೇಮಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಪ್ರೋತ್ಸಾಹಕರವಾಗಿ ಅವರು ವಿವಿಧ ತಳಿಯ ಗಿಡಗಳನ್ನು ತಂದು ನೀಡಬಹುದಾಗಿದೆ. ಜಿಲ್ಲೆಯ ಅರಣ್ಯ ಪ್ರದೇಶ ಹೆಚ್ಚಿಸುವಲ್ಲಿ ಸಹಕಾರ ನೀಡಬಹುದು ಎಂದು ಹೇಳಿದರು.
    ಕೋಟಿ ವೃಕ್ಷ ಅಭಿಯಾನದಲ್ಲಿ ವಿವಿಧ 130 ತಳಿಯ ಸಸ್ಯಗಳನ್ನು ನೆಡಲು ಕ್ರಿಯಾಯೋಜನೆ ರೂಪಿಸಲಾಗಿದ್ದು, ನಗರದ ಭೂತನಾಳ ಕೆರೆಯ ಹತ್ತಿರ ಟ್ರಿ ಪಾರ್ಕ್ ನಿರ್ಮಿಸಿ, ಸಾರ್ವಜನಿಕರ ಅನುಕೂಲಕ್ಕೆ ಶೌಚಗೃಹ, ಮಕ್ಕಳ ತುಗೂಯ್ಯಲೆ ಹಾಗೂ ವಿವಿಧ ಮನರಂಜನೆ ಸಾಮಗ್ರಿ ಅಳವಡಿಸಬೇಕು ಎಂದರು.
    ಮುಖಂಡರಾದ ಮುರಗೇಶ ಪಟ್ಟಣಶೆಟ್ಟಿ, ಸಂಗಮೇಶ ಬಾದಾಮಿ, ಅಶೋಕ ಪಾಟೀಲ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಮದಾರ, ಕೃಷಿ ಜಂಟಿ ನಿರ್ದೇಶಕ ಶಿವಕುಮಾರ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts