More

    ಜೆಇಇ ಅಡ್ವಾನ್ಸ್ಡ್ 2020 : ವಿದ್ಯಾರ್ಥಿಗಳ ಸಹಾಯಕ್ಕೆ ದೆಹಲಿ ಐಐಟಿ ಪೋರ್ಟಲ್

    ದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಐಐಟಿ ದೆಹಲಿ ಮತ್ತು ಇತರ ಹಳೆಯ ವಿದ್ಯಾರ್ಥಿಗಳ ಸಂಘಗಳು ಜೆಇಇ ಅಡ್ವಾನ್ಸ್ಡ್ (2020) ಪರೀಕ್ಷೆಯ ಆಕಾಂಕ್ಷಿಗಳಿಗೆ ಸಹಾಯ ನೀಡಿ ಬೆಂಬಲಿಸಲು ಮುಂದೆ ಬಂದಿವೆ.
    ಸೆಪ್ಟೆಂಬರ್ ನಲ್ಲಿ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅಗತ್ಯವಿರುವ ಲಾಜಿಸ್ಟಿಕ್ಸ್ ಬೆಂಬಲ ಒದಗಿಸುವಲ್ಲಿ ಸಹಾಯ ಮಾಡಲು ಪೋರ್ಟಲ್ ಅನ್ನು ಸ್ಥಾಪಿಸಲು ಸಂಸ್ಥೆ ನಿರ್ಧರಿಸಿದೆ.

    ಇದನ್ನೂ ಓದಿ:  ಹಲವು ಸ್ವದೇಶಿ ಆ್ಯಪ್​ಗಳ ಬಗ್ಗೆ ಪ್ರಧಾನಿ ಮಾತು: ಚಿಂಗಾರಿ ಆ್ಯಪ್​​ಗೆ ಮೋದಿ ಮೆಚ್ಚುಗೆ!

    ಈ ಪರೀಕ್ಷೆ ಸೆಪ್ಟೆಂಬರ್ 27 ರಂದು ನಡೆಯಲಿದೆ. ಕೋವಿಡ್​​​ನ ಈ ಸೂಕ್ಷ್ಮ ಪರಿಸ್ಥಿತಿಯಲ್ಲಿ ಪರೀಕ್ಷಾ ಕೇಂದ್ರವನ್ನು ತಲುಪಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಸಂಸ್ಥೆ ತನ್ನ ಸಮುದಾಯಕ್ಕೆ ಮನವಿ ಮಾಡಿದೆ.
    ಪೋರ್ಟಲ್ ಪ್ರಾರಂಭವಾದ ಕೂಡಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ತಲುಪಲು ಪ್ರಯಾಣದ ಸಹಾಯಕ್ಕಾಗಿ ನೋಂದಾಯಿಸಬಹುದು. ನೋಂದಣಿ ಪ್ರಕ್ರಿಯೆ ಸೆಪ್ಟೆಂಬರ್ 11 ರಿಂದ ಪ್ರಾರಂಭವಾಗಲಿದೆ.
    ಜೆಇಇ ಮುಖ್ಯ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೂ ಸಹಾಯ ಮಾಡುವಂತೆ ದೆಹಲಿ ಐಐಟಿ  ನಿರ್ದೇಶಕ ವಿ ರಾಮ್‌ಗೋಪಾಲ್ ರಾವ್ ಐಐಟಿ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಈ ಪೋರ್ಟಲ್, ಅಂಥ ವಿದ್ಯಾರ್ಥಿಗಳಿಗೂ ಸಹಾಯವಾಗಲಿದೆ ಎಂಬ ಭರವಸೆ ಹೊಂದಿದ್ದಾರೆ.

    ಇದನ್ನೂ ಓದಿ:  ಗಲ್ವಾನ್‌ ಘರ್ಷಣೆಯಲ್ಲಿ ತನ್ನ ಸೈನಿಕರು ಸತ್ತೇ ಇಲ್ಲ ಎಂದಿದ್ದ ಚೀನಾಕ್ಕೆ ಹೀಗಾಗಬಾರದಿತ್ತು!

    ಏತನ್ಮಧ್ಯೆ, ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಐಐಟಿ ನಿರ್ದೇಶಕರು ರಾಜ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಐಐಟಿ ದೆಹಲಿಯ ಜೆಇಇ (ಅಡ್ವಾನ್ಸ್ಡ್) ಮುಖ್ಯಸ್ಥ ಪ್ರೊ. ಸಿದ್ಧಾರ್ಥ್ ಪಾಂಡೆ ಅವರು ಕೇಂದ್ರ ಮಾರ್ಗಸೂಚಿಗಳ ಪ್ರಕಾರ ಸಂಸ್ಥೆ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ಪರೀಕ್ಷೆ ನಡೆಸುವಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕ್ರಮಗಳ ಜಾರಿಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಗಲ್ವಾನ್‌ ಘರ್ಷಣೆಯಲ್ಲಿ ತನ್ನ ಸೈನಿಕರು ಸತ್ತೇ ಇಲ್ಲ ಎಂದಿದ್ದ ಚೀನಾಕ್ಕೆ ಹೀಗಾಗಬಾರದಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts