More

    ಸಾಕ್ಷರತೆಯಿಂದ ಅಜ್ಞಾನ ದೂರ

    ತಾವರಗೇರಾ: ಸಾಕ್ಷರತೆ ಇದ್ದರೆ ಸಮಾಜದಲ್ಲಿ ಘನತೆಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ತಾಪಂ ಎಇಒ ಹನಮಂತಗೌಡ ಪಾಟೀಲ್ ಹೇಳಿದರು.


    ಸಮೀಪದ ಮೆಣೇಧಾಳ ಗ್ರಾಪಂ ಸಭಾಂಗಣದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಬೆಂಗಳೂರು, ಜಿಪಂ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ವಿವಿಧ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಸಾಕ್ಷರತಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.


    ಸಾಕ್ಷರತೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಆಚರಿಸಲಾಗುತ್ತದೆ. ಸಾಕ್ಷರತೆಯು ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಅಲ್ಲದೆ ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಮಾಡುತ್ತದೆ ಎಂದರು.


    ಗ್ರಾಪಂ ಅಧ್ಯಕ್ಷೆ ಅನ್ನಪುರ್ಣಮ್ಮ, ಉಪಾಧ್ಯಕ್ಷ ಯಂಕಪ್ಪ ಗರ್ಜನಾಳ, ಪಿಡಿಒ ಬಸವರಾಜ ರ‌್ಯಾವಣಕಿ, ಮುಖ್ಯ ಶಿಕ್ಷಕಿ ನಿಂಬಮ್ಮ ತುಂಬದ, ಸಹಿಪ್ರಾ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬಬ್ರುವಾಹನ್ ಗುಳೇದ, ಗ್ರಂಥಪಾಲಕ ಶ್ರೀನಿವಾಸ ದೇಸಾಯಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts