More

    ‘ದಿ ಕಾಶ್ಮೀರ್​ ಫೈಲ್ಸ್​’ ಅಸಭ್ಯವಾಗಿತ್ತು ಎಂದ ಲ್ಯಾಪಿಡ್​ಗೆ ಜ್ಯೂರಿ ಸದಸ್ಯರ ಬೆಂಬಲ

    ಮುಂಬೈ: ‘ಕಾಶ್ಮೀರ್ ಫೈಲ್ಸ್’ ವಿರುದ್ಧ ಟೀಕೆ ಮಾಡಿದ್ದ ಇಸ್ರೇಲ್​ ನಿರ್ಮಾಪಕ ನಡಾವ್​ ಲ್ಯಾಪಿಡ್​ ಇತ್ತೀಚೆಗಷ್ಟೇ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದರು. ಅಲ್ಲಿಗೆ ಸಮಸ್ಯೆ ಬಗೆಹರಿಯಿತು ಎಂದುಕೊಳ್ಳುವಷ್ಟರಲ್ಲೇ, ಲ್ಯಾಪಿಡ್​ ಹೇಳಿದ್ದು ಸರಿ ಎಂದು ಆಯ್ಕೆ ಸಮತಿಯ ಮೂವರು ಸದಸ್ಯರು ಹೇಳಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ನಿಜಕ್ಕೂ ಕೆಟ್ಟ ಮತ್ತು ಅಸಭ್ಯ ಚಿತ್ರವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಡಿ.9ಕ್ಕೆ ‘ವಿಜಯಾನಂದ’ ಸೇರಿದಂತೆ 11 ಕನ್ನಡ ಚಿತ್ರಗಳ ಬಿಡುಗಡೆ …

    ಇತ್ತೀಚೆಗಷ್ಟೇ ಮುಕ್ತಾಯವಾದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ (IFFI) ಸ್ಪರ್ಧಾತ್ಮಕ ಚಿತ್ರ ವಿಭಾಗದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಪ್ರದರ್ಶನಗೊಂಡಿತ್ತು. ಈ ಸ್ಪರ್ಧಾತ್ಮಕ ವಿಭಾಗದ ಮುಖ್ಯಸ್ಥರಾಗಿದ್ದ ನಾಡವ್ ಲ್ಯಾಪಿಡ್, ಚಿತ್ರದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಲ್ಯಾಪಿಡ್​ ಅವರ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ನಟ ಅನುಪಂ ಖೇರ್​, ದರ್ಶನ್​ ಕುಮಾರ್ ಮುಂತಾದವರು ಲ್ಯಾಪಿಡ್​ ಅವರ ಮಾತುಗಳನ್ನು ಖಂಡಿಸಿದ್ದರು. ಇನ್ನು, ಭಾರತದಲ್ಲಿ ಇಸ್ರೇಲ್​ ರಾಯಭಾರಿಯಾಗಿರುವ ನವೋರ್​ ಗಿಲಾನ್​, ಲ್ಯಾಪಿಡ್​ಗೆ ಮೊದಲು ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು.

    ಒತ್ತಡ ಹೆಚ್ಚಾದಂತೆ, ನಡಾವ್​ ಕ್ಷಮೆ ಕೇಳಿದ್ದರು. ‘ಕಾಶ್ಮೀರಿ ಪಂಡಿತಾಗಾಗಲಿ ಅಥವಾ ನೊಂದವರ ಜನರ ಭಾವನೆಗಳನ್ನು ಅವಮಾನಿಸುವ ಉದ್ದೇಶವೂ ನನ್ನದಾಗಿರಲಿಲ್ಲ. ಆದರೂ ನನ್ನ ಹೇಳಿಕೆಯಿಂದ ಯಾರಿಗೆಲ್ಲ ನೋವಾಗಿದೆಯೋ ನಾನು ಸಂಪೂರ್ಣವಾಗಿ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದರು. ಆದರೆ, ಇದೀಗ ಈ ಸಮಿತಿಯ ಮೂವರು ಸದಸ್ಯರು ಲ್ಯಾಪಿಡ್​ ಹೇಳಿದ್ದೇ ಸರಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ‘ವಿರಾಟಪುರ ವಿರಾಗಿ’ ಚಿತ್ರದ ಫಸ್ಟ್​ಲುಕ್​ ಬಿಡುಗಡೆ; ಹಾನಗಲ್ ಕುಮಾರ ಶಿವಯೋಗಿಗಳ ಜೀವನಾಧಾರಿತ ಚಿತ್ರ ಜ.12ಕ್ಕೆ ತೆರೆಗೆ …

    ಈ ಸಮತಿಯಲ್ಲಿದ್ದ ಜಿಂಕೋ ಗೋಟೋ, ಪಾಸ್ಕಲ್​ ಚಾವನ್ಸ್​ ಮತ್ತು ಜೇವಿಯರ್​ ಆಂಗುಲೋ ಬರುತ್ರೇನ್​, ಲ್ಯಾಪಿಡ್​ ಪರವಾಗಿ ಒಂದು ಜಂಟಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಚಿತ್ರೋತ್ಸವದ ಮುಕ್ತಾಯ ಸಮಾರಂಭದಲ್ಲಿ ಲ್ಯಾಪಿಡ್​, ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ಬಗ್ಗೆ ಮಾತನಾಡಿದ್ದರು. ನಿಜ ಹೇಳಬೇಕೆಂದರೆ, ಆ ಚಿತ್ರ ನೋಡಿ ನಾವೆಲ್ಲ ಶಾಕ್​ ಆಗಿದ್ದೆವು. ಆ ಚಿತ್ರವು ಅಸಭ್ಯವಷ್ಟೇ ಅಲ್ಲ, ಇಂಥದ್ದೊಂದು ದೊಡ್ಡ ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನವಾಗುವ ಚಿತ್ರವೇ ಅಲ್ಲ. ಸಮಿತಿ ಸದಸ್ಯರಾದ ನಾವು ಅವರ ಮಾತಿಗೆ ಬದ್ಧರಾಗಿದ್ದೇವೆ. ಈ ಚಿತ್ರದ ರಾಜಕೀಯ ನಿಲುವಿನ ಬಗ್ಗೆ ನಾವು ಮಾತನಾಡುತ್ತಿಲ್ಲ. ನಾವು ಕಲಾತ್ಮಕವಾಗಿ ಮಾತನಾಡುತ್ತಿದ್ದು, ಇಂಥದ್ದೊಂದು ದೊಡ್ಡ ವೇದಿಕೆಯನ್ನು ರಾಜಕೀಯ ಮಾಡುವುದಕ್ಕೆ ಬಳಸಿಕೊಳ್ಳುತ್ತಿರುವುದನ್ನು ನೋಡಿ ಬೇಸರವಾಗುತ್ತದೆ’ ಎಂದು ಹೇಳಿದ್ದಾರೆ.

    ಕನ್ನಡದ ಹಿರಿಯ ನಟ ಮನ್​ದೀಪ್ ರಾಯ್​ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts