More

    ನಿಮ್ಮ ಮನೆಯ ಬಾತ್ ರೂಂ ಸ್ವಚ್ಛವಾಗಿಲ್ಲವೇ? ಹಾಗಾದರೆ ನೀವು ರಾಹುವಿನ ಕೆಂಗಣ್ಣಿಗೆ ಗುರಿಯಾಗುತ್ತೀರಿ!

    ಸಾಮಾನ್ಯವಾಗಿ ಜನರು ಮನೆಯನ್ನು ವಾಸ್ತು ಪ್ರಕಾರ ಕಟ್ಟಬೇಕು ಎಂದು ಹೇಳುತ್ತಾರೆ. ದೇವ ಮೂಲೆಯಲ್ಲಿ ದೇವರ ಮನೆ, ಅಗ್ನಿ ಮೂಲೆಯಲ್ಲಿ ಅಡುಗೆ ಮನೆ. ಅದರಂತೆ ಬೇರೆ ಬೇರೆ ದಿಕ್ಕಿಗೆ ತಕ್ಕಂತೆ ಮನೆ ಕಟ್ಟಬೇಕು. ಒಂದೊಂದು ಮೂಲೆಗೆ ಒಂದೊಂದು ಗ್ರಹ ಅಧಿಪತಿ. ಅದೇ ರೀತಿ ಬಾತ್ ರೂಂಗೆ ಕೂಡ ಒಂದು ಗ್ರಹ ಅಧಿಪತಿ.

    ಅಶ್ಚರ್ಯವಾದರೂ ಇದು ನಿಜ. ಬಾತ್ ರೂಂಗೆ ರಾಹು ಅಧಿಪತಿ. ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಾಗ ಸುಖ, ಶಾಂತಿ, ಐಶ್ವರ್ಯ ಸಮೃದ್ಧವಾಗುತ್ತದೆ. ಅದೇ ರೀತಿ ಬಾತ್ ರೂಂ ಅನ್ನು ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಧನ ಲಾಭವಾಗುತ್ತದೆ.

    ಬಾತ್ ರೂಂನಲ್ಲಿ ನೀರು ಸರಿಯಾಗಿ ಹಾಕದೇ ಹೋದರೆ, ಸ್ನಾನ ಮುಗಿದ ಮೇಲೆ ಅಲ್ಲಿ ಬಿದ್ದಿರುವ ನೀರನ್ನು ಕೂಡಲೇ ಸ್ವಚ್ಛಗೊಳಿಸದಿದ್ದರೆ ರಾಹುವನ್ನು ಕೆಣಕಿದಂತೆ. ಇದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಏರುಪೇರಾಗುತ್ತದೆ. ಬಾತ್ ರೂಂನ ನೆಲ ಶುದ್ಧವಾಗಿರುವಂತೆ ನೋಡಿಕೊಂಡಾಗ ರಾಹುವಿನ ಕೃಪಾಕಟಾಕ್ಷಕ್ಕೆ ಪಾತ್ರವಾಗಬಹುದು.

    ಬುಧವಾರ ಮತ್ತು ಶನಿವಾರ ಸ್ವತಃ ನೀವು ಬಾತ್ ರೂಂ ಕ್ಲೀನ್ ಮಾಡುವುದರಿಂದ ರಾಹು ಗ್ರಹದ ಆಶೀರ್ವಾದ ಸಿಗುತ್ತದೆ. ಬಾತ್ ರೂಂ ಅನ್ನು ಸ್ವಚ್ಛಗೊಳಿಸುವುದರಿಂದ ರಾಹುವಿನ ಆಶಿರ್ವಾದದ ಜತೆಗೆ ಅರೋಗ್ಯವಾಗಿ ಕೂಡ ಬಾಳಬಹುದು.

    ಬೇರೆ ದೇಶಗಳಲ್ಲೂ ಹಿಂದೂಗಳಿಗೆ ಬದುಕಲು ಬಿಡದ ಪಾಕಿಸ್ತಾನ; ಹಿಂದೆ ಕಾಶ್ಮೀರ ಆಯ್ತು, ಈಗ ಫಿಜಿಯಲ್ಲೂ ಪಾಕ್​ ಕಳ್ಳಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts