More

    ಕೆಲಸದಲ್ಲಿ ಶ್ರದ್ಧೆಯಿದ್ದರೆ ಯಶಸ್ಸು

    ಶೃಂಗೇರಿ: ಶ್ರದ್ಧೆಯಿಂದ ಕೆಲಸ ಮಾಡಬೇಕು. ಸತ್ಯ, ಪ್ರಾಮಾಣಿಕ, ಸಂಸ್ಕಾರ, ಮಾನವೀಯತೆಯಿಂದ ಕೆಲಸ ಮಾಡಿದಾಗ ಯಶಸ್ಸು ಲಭಿಸುತ್ತದೆ. ಸರ್ ಸಿ.ವಿ.ರಾಮನ್ ಅವರಿಗೆ ನೋಬಲ್ ಪಾರಿತೋಷಕ ಬಂದ ಸಂದರ್ಭದಲ್ಲಿ ಅವರು ಅದನ್ನು ದೇವರ ಕೃಪೆಯಿಂದ, ನನ್ನ ಪರಿಶ್ರಮದಿಂದ ಲಭಿಸಿದ್ದು ಎಂದು ಹೇಳಿದ್ದರು ಎಂಬುದಾಗಿ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರಿಶಂಕರ್ ತಿಳಿಸಿದರು.

    ಗುರುವಾರ ಜೆಸಿಬಿಎಂ ಪದವಿಪೂರ್ವ ವಿಭಾಗ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಪ್ರತಿಯೊಬ್ಬರ ಸಾಧನೆ ಹಿಂದಿನ ಶ್ರಮ, ಪ್ರೇರಣೆ ನೀಡಿದವರು, ಸಾಧನೆಗೆ ಸಹಕರಿಸಿದವರ ಬಗ್ಗೆ ಸಮಾಜಕ್ಕೆ ತಿಳಿಸಬೇಕು. ಅದು ಮತ್ತೊಬ್ಬರ ಸಾಧನೆಗೆ ಪ್ರೇರಣೆಯಾಗುತ್ತದೆ. ಸಮಾಜದ, ಪಾಲಕರ ಮತ್ತು ಗುರುಗಳ ಋಣ ತೀರಿಸದೆ ಇದ್ದರೆ ಸಾಧನೆಗೆ ಮೌಲ್ಯವಿರುವುದಿಲ್ಲ. ನೊಂದವರಿಗೆ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
    ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆ ಕಾಣುತ್ತಿದ್ದೇವೆ. 90ರ ದಶಕದ ನಂತರ ಕಂಪ್ಯೂಟರ್ ಯುಗವನ್ನು ಕಂಡ ನಾವು ಕ್ರೀಡಾಯುಗದಲ್ಲಿ ಇದ್ದೇವೆ. ಮುಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳು ವಿದ್ಯಾರ್ಥಿಗಳಿಗೆ ತೆರೆದಿದೆ. ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಎದುರಿಸಿದರೆ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
    ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಾಚಾರ್ಯ ಡಾ. ಎಂ. ಸ್ವಾಮಿ, ಉಪಪ್ರಾಚಾರ್ಯ ಪ್ರಶಾಂತ್, ಪುಷ್ಪಾ ಲಕ್ಷ್ಮೀನಾರಾಯಣ್, ಕೆ.ಎಂ.ಮಂಜುನಾಥ್, ವಿನಯದಾಂತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts