More

    ನೆಮ್ಮದಿ ನೆಲೆಸಿದರೆ ಜಯಂತಿಗಳಿಗೆ ಅರ್ಥ

    ಮೂಡಿಗೆರೆ: ಸಮಾಜದಲ್ಲಿ ಜನ ಶಾಂತಿ, ನೆಮ್ಮದಿಯಿಂದ ಬದುಕಿದಾಗ ಮಾತ್ರ ಮಹಾತ್ಮರ ಹೋರಾಟ ಹಾಗೂ ಜಯಂತಿ ಆಚರಣೆಗೆ ಅರ್ಥ ಲಭಿಸುತ್ತದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

    ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸಿ ಜಯಂತಿ ಕಾರ್ಯಕ್ರಮಲ್ಲಿ ಮಾತನಾಡಿದರು.
    ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕಿದೆ. ಇತ್ತೀಚೆಗೆ ನಮ್ಮ ದೇಶಕ್ಕೆ ಅಮೆರಿಕ, ಬ್ರಿಟನ್, ್ರಾನ್ಸ್ ಸೇರಿ 20 ದೇಶದ ಪ್ರಧಾನಿಗಳು ಹಾಗೂ ಅಧ್ಯಕ್ಷರು ಬಂದಿದ್ದರು. ಅವರೆಲ್ಲರೂ ರಾಜ್‌ಘಾಟ್‌ನಲ್ಲಿರುವ ಗಾಂಧೀಜಿ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದ್ದರು. ಇದರಿಂದಲೇ ತಿಳಿಯುತ್ತದೆ ಅವರ ಹೆಸರು ವಿಶ್ವದಲ್ಲೇ ಪ್ರಚಲಿತ ಎಂದು ಹೇಳಿದರು.
    ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ನಮ್ಮ ದೇಶದ ಉಜ್ವಲ ಭವಿಷ್ಯದ ಬಗ್ಗೆ ಕನಸು ಕಾಣುವ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಯಶಸ್ಸು ಕಂಡಿದ್ದಾರೆ. ಅವರ ಚಿಂತನೆಯಂತೆ ಈ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
    ವೇಣುಗೋಪಾಲ ಸ್ವಾಮಿ ದೇವಸ್ಥಾನದ ಮಹಾಬಲ ಕಾರಂತ್, ಬಿಳಗುಳದ ನೂರುಲ್ ಉದಾ ಮಸೀದಿ ಗುರು ಸಿನಾನ್ ಫೈಜಿ ಖಲಂದರ್, ಮೂಡಿಗೆರೆ ಸೈಂಟ್ ಆಂತೋಣಿ ಚರ್ಚ್ ಧರ್ಮಗುರು ಟೋನಿ ಧಾರ್ಮಿಕ ಭಾಷಣ ಮಾಡಿದರು. ಪಪಂ ಸದಸ್ಯರಾದ ಎಚ್.ಪಿ.ರಮೇಶ್, ಹಂಝಾ, ತಾಪಂ ಇಒ ರಮೇಶ್, ಬಿಇಒ ಹೇಮಂತ್‌ರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts