ನವದೆಹಲಿ: ನ್ಯಾಯಾಲಯದ ಕಾರ್ಯ ಕಲಾಪ ತಡವಾಗಿ ಆರಂಭಗೊಳ್ಳುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಮೂರ್ತಿ ಲಲಿತ್, ಮಕ್ಕಳು ಬೆಳಗ್ಗೆಯೇ ಶಾಲೆಗೆ ಹೋಗುವುದಾದರೆ, ವಕೀಲರು, ನ್ಯಾಯಾಧೀಶರು ಏಕೆ ಬೇಗ ಬರಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.
ವಾರದಲ್ಲಿ ಬೆಳಗ್ಗೆ 10.30ರ ಬಳಿಕ ಕೋರ್ಟ್ ಕಾರ್ಯಕಲಾಪಗಳು ಪ್ರಾರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ಇದರಲ್ಲಿ 1 ರಿಂದ 2 ಗಂಟೆಯವರೆಗೆ ಲಂಚ್ ಬ್ರೇಕ್ ಇರಲಿದೆ. ಇಲ್ಲೇ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಮಕ್ಕಳು ಬೆಳಗ್ಗೆ 7ಗಂಟೆಗೆ ಎದ್ದು ಶಾಲೆಗೆ ಹೋಗುತ್ತಾರೆ, ನಾವ್ಯಾಕೆ 9 ಗಂಟೆಗೆ ಕೋರ್ಟ್ ಕಲಾಪ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ನ್ಯಾ.ಲಲಿತ್ ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ 9.30ಕ್ಕೆ ಕಲಾಪ ಆರಂಭಿಸಿದ ನ್ಯಾಯಮೂರ್ತಿ ಲಲಿತ್ ಅವರಿದ್ದ ಪೀಠದಲ್ಲಿ ನ್ಯಾಯಧೀಶರಾದ ಎಸ್. ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರಿದ್ದರು. ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಕೋರ್ಟ್ ಕಲಾಪ ಸಮಯದ ಪಟ್ಟಿ ಬಗ್ಗೆ ಪ್ರಸ್ತಾಪಿಸಿದರು.
ಇದೇ ವೇಳೆ ಜಾಮೀನು ಪ್ರಕರಣವೊಂದರಲ್ಲಿ ಹಾಜರಾದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಬೇಗನೇ ಬಂದು ಕುಳಿತಿದ್ದಕ್ಕಾಗಿ ಶ್ಲಾಘಿಸಿದರು. ಇದೇ ವೇಳೆ ನ್ಯಾಯಾಲಯದ ಕಲಾಪ ಪ್ರಾರಂಭಿಸಲು ಬೆ.9.30 ಸರಿಯಾದ ಸಮಯ ಎಂದು ಹೇಳಿದರು.(ಏಜೆನ್ಸೀಸ್)
ಖ್ಯಾತ ನಟ ಹಾಗೂ ನಿರ್ದೇಶಕ ಪ್ರತಾಪ್ ಪೋಥೆನ್ ನಿಗೂಢ ಸಾವು: ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆ!