More

    ಭೂಮಿ ಪೂಜೆಯಲ್ಲಿ ಪ್ರಧಾನಿ ಉಪಸ್ಥಿತಿ ವಿರೋಧಿಸುತ್ತಿರುವವರಿಗೆ ಸುಭಾಷ್​ ಚಂದ್ರ ಬೋಸ್​ ಮೊಮ್ಮಗನಿಂದ ಖಡಕ್​ ತಿರುಗೇಟು

    ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ಭೂಮಿಪೂಜೆಯಲ್ಲಿ ಭಾಗವಹಿಸುತ್ತಾರೆ ಎಂಬುದು ಅಧಿಕೃತವಾಗುತ್ತಿದ್ದಂತೆ ಪ್ರತಿಪಕ್ಷಗಳ ಕೆಲವರು ವಿರೋಧ ಮಾಡುತ್ತಿದ್ದಾರೆ. ಹಾಗೇ ವಿರೋಧಿಸುತ್ತಿರುವವರಿಗೆ ನೇತಾಜಿ ಸುಭಾಷ್​ ಚಂದ್ರ ಭೋಸ್​ ಅವರ ಅಣ್ಣನ ಮೊಮ್ಮಗ ಚಂದ್ರಕುಮಾರ್​ ಬೋಸ್​​ ಅವರು ಖಡಕ್​ ತಿರುಗೇಟು ನೀಡಿದ್ದಾರೆ.

    ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಗೆ ಭೇಟಿ ಕೋಡುವುದನ್ನು ಯಾರೆಲ್ಲ ವಿರೋಧ ಮಾಡುತ್ತಿದ್ದರೋ ಅವರೆಲ್ಲರೂ ಭಾರತದ ಪರಿಕಲ್ಪನೆಯನ್ನೇ ವಿರೋಧ ಮಾಡಿದಂತೆ. ಈ ವಿಷಯ ಕೇಳಿ ವೈರಿ ಸಮೂಹದಲ್ಲಿ ಕೋಲಾಹಲವೇ ಎದ್ದಿದೆ ಎಂದು ಚಂದ್ರಕುಮಾರ್ ಬೋಸ್​ ಟೀಕಿಸಿದ್ದಾರೆ.

    ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಚಂದ್ರಕುಮಾರ್ ಬೋಸ್​​ ಅವರು ಟ್ವೀಟ್​ ಮೂಲಕ, ಮೋದಿಯವರನ್ನು ವಿರೋಧಿಸುತ್ತಿರುವವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ನಮ್ಮದು ಜಾತ್ಯಾತೀತ ರಾಷ್ಟ್ರ. ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗೆ ಪ್ರಧಾನಿ ಮೋದಿಯವರಿಗೆ ಆಮಂತ್ರಣ ನೀಡಲಾಗಿದೆ. ಹಾಗಾಗಿ ಅವರು ಅಲ್ಲಿಗೆ ತೆರಳುತ್ತಿದ್ದಾರೆ. ಹಾಗೇ ಪ್ರಧಾನಿಯವರಿಗೆ ಮಸೀದಿ, ಗುರುದ್ವಾರ, ಚರ್ಚ್​​ಗಳ ಉದ್ಘಾಟನೆಗೂ ಆಮಂತ್ರಣ ನೀಡಿದರೆ, ಅವರು ಆ ಸ್ಥಳಗಳಿಗೂ ಭೇಟಿ ನೀಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿಗೆ ಓವೈಸಿ ನೀಡಿದ್ದಾರೊಂದು ಎಚ್ಚರಿಕೆ…!

    ನರೇಂದ್ರ ಮೋದಿಯವರು ಆಗಸ್ಟ್​ 5ರಂದು ಅಯೋಧ್ಯೆಗೆ ಭೇಟಿ ಕೊಡುತ್ತಾರೋ ಇಲ್ಲವೋ ಎಂಬುದನ್ನು ಪ್ರಧಾನಿ ಕಚೇರಿ ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ರಾಮಜನ್ಮಭೂಮಿ ಟ್ರಸ್ಟ್​, ಮೋದಿಯವರು ಆಗಮಿಸುತ್ತಾರೆ ಎಂದು ಹೇಳಿದೆ.

    ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್​ ಓವೈಸಿ ಟ್ವೀಟ್​ ಮೂಲಕ ಮೋದಿಯವರ ಭೇಟಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಹುದ್ದೆಗೆ ಏರುವಾಗ ಅವರು ಸಾಂವಿಧಾನಿಕವಾಗಿ ಸ್ವೀಕರಿಸಿದ ಪ್ರಮಾಣವಚನವನ್ನು ಒಮ್ಮೆ ನೆನಪಿಸಿಕೊಳ್ಳಬೇಕು ಎಂದು ಓವೈಸಿ ಹೇಳಿದ್ದಾರೆ.

    ರಾಮಮಂದಿರ ಭೂಮಿ ಪೂಜೆಯಲ್ಲಿ ಎಲ್​.ಕೆ.ಆಡ್ವಾಣಿ, ಮುರಳಿ ಮನೋಹರ್​ ಜೋಶಿ, ಉಮಾ ಭಾರತಿ, ವಿನಯ್​ ಕಠಿಯಾರ್​ ಸೇರಿ ಹಲವು ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವತಃ ಅಲ್ಲಿನ ಪೂರ್ವಸಿದ್ಧತೆಯನ್ನು ನೋಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

    ‘ದಿಲ್​ ಬೇಚಾರ’ ಚಿತ್ರದ ಮೊದಲ ದಿನದ ಕಲೆಕ್ಷೆನ್​ ಎಷ್ಟು? ಕೇಳಿದರೆ ಬೆಚ್ಚಿ ಬೀಳ್ತೀರಾ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts