More

    ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ, ಪೂಜಾರ, ರಹಾನೆ ಟೆಸ್ಟ್ ರ‍್ಯಾಂಕಿಂಗ್ ಕುಸಿತ

    ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬುಧವಾರ ಪ್ರಕಟಿಸಿದ ಟೆಸ್ಟ್ ರ್ಯಾಂಕಿಂಗ್​ನ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಟೆಸ್ಟ್ ತಜ್ಞರಾದ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ ಪೂಜಾರ ರ್ಯಾಂಕಿಂಗ್​ನಲ್ಲಿ ಕುಸಿತ ಕಂಡಿದ್ದಾರೆ. 928 ಪಾಯಿಂಟ್ಸ್ ಸಂಗ್ರಹಿಸಿರುವ ಕೊಹ್ಲಿ, ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್

    ಮನ್ ಸ್ಟೀವನ್ ಸ್ಮಿತ್​ಗಿಂತ (911) 17 ಪಾಯಿಂಟ್ಸ್ ಮುಂದಿದ್ದಾರೆ. 791 ಪಾಯಿಂಟ್ಸ್ ಹೊಂದಿರುವ ಪೂಜಾರ 6ನೇ ಸ್ಥಾನದಲ್ಲಿದ್ದರೆ, 759 ಪಾಯಿಂಟ್ಸ್ ಹೊಂದಿರುವ ರಹಾನೆ 9ನೇ ಸ್ಥಾನ ಪಡೆದಿದ್ದಾರೆ.

    ಬೆನ್ನು ನೋವಿನಿಂದಾಗಿ ಕಳೆದ 4 ತಿಂಗಳಿನಿಂದ ಕ್ರಿಕೆಟ್​ನಿಂದ ದೂರವಿದ್ದ ಜಸ್​ಪ್ರೀತ್ ಬುಮ್ರಾ ಬೌಲಿಂಗ್ ವಿಭಾಗದಲ್ಲಿ 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಗುಜರಾತ್ ವೇಗಿ 794 ಅಂಕ ಹೊಂದಿದ್ದಾರೆ. ಸ್ಪಿನ್ನರ್ ಆರ್.ಅಶ್ವಿನ್ (772) ಹಾಗೂ ವೇಗಿ ಮೊಹಮದ್ ಶಮಿ (771) ಕ್ರಮವಾಗಿ 9ನೇ ಹಾಗೂ 10ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ 25 ವರ್ಷದ ಬ್ಯಾಟ್ಸ್​ಮನ್ ಮಾರ್ನಸ್ ಲಬುಶೇನ್ ಜೀವನಶ್ರೇಷ್ಠ 3ನೇ ಸ್ಥಾನಕ್ಕೇರಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ 5 ಟೆಸ್ಟ್ ಪಂದ್ಯಗಳಿಂದ ಲಬುಶೇನ್ 896 ರನ್ ಸಿಡಿಸಿದ್ದರು.

    ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ, ಪೂಜಾರ, ರಹಾನೆ ಟೆಸ್ಟ್ ರ‍್ಯಾಂಕಿಂಗ್ ಕುಸಿತಪ್ಯಾಟ್ ಕಮ್ಮಿನ್ಸ್ ನಂ.1: ಬೌಲಿಂಗ್ ವಿಭಾಗದಲ್ಲಿ ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್ 904 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡರೆ, ನ್ಯೂಜಿಲೆಂಡ್​ನ ನೀಲ್ ವಾಗ್ನರ್ (852) ಹಾಗೂ ವೆಸ್ಟ್ ಇಂಡೀಸ್ ತಂಡದ ಜೇಸನ್ ಹೋಲ್ಡರ್ (830) ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಜೀವನಶ್ರೇಷ್ಠ 5ನೇ ಸ್ಥಾನಕ್ಕೇರಿದ್ದಾರೆ. 2018ರ ಮಾರ್ಚ್​ನಲ್ಲಿ ಕಡೆಯ ಬಾರಿಗೆ ಸ್ಟಾರ್ಕ್ 5ನೇ ಸ್ಥಾನಕ್ಕೇರಿದ್ದರು. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 15 ವಿಕೆಟ್ ಕಬಳಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts