More

    ಜಿಂಬಾಬ್ವೆಗೆ ದಾಖಲೆಯ ಗೆಲುವು : ವಿಲಿಯಮ್ಸ್ ಭರ್ಜರಿ ಶತಕ

    ಹರಾರೆ: ಹಂಗಾಮಿ ನಾಯಕ ಸೀನ್ ವಿಲಿಯಮ್ಸ್ (174 ರನ್, 101 ಎಸೆತ, 21 ಬೌಂಡರಿ, 5 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಜಿಂಬಾಬ್ವೆ ತಂಡ ಅಮೆರಿಕ ಎದುರು 304 ರನ್‌ಗಳಿಂದ ಬೃಹತ್ ಗೆಲುವು ದಾಖಲಿಸಿದೆ. ಇದು ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದರ 2ನೇ ಅತಿದೊಡ್ಡ ಗೆಲುವಾಗಿದೆ. ಜಿಂಬಾಬ್ವೆ ಏಕದಿನದಲ್ಲಿ 400 ಪ್ಲಸ್ ಮೊತ್ತ ಪೇರಿಸಿದ ವಿಶ್ವದ ಏಳನೇ ತಂಡ ಎನಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆತಿಥೇಯ ಜಿಂಬಾಬ್ವೆ ತಂಡ 6 ವಿಕೆಟ್‌ಗೆ 408 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕ ಬ್ಯಾಟರ್ ಜೋಯ್ ಲಾರ್ಡ್ (78) ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಜೋಯ್ ಲಾರ್ಡ್ ಹಾಗೂ ಸೀನ್ ವಿಲಿಯಮ್ಸನ್ ಜೋಡಿ 160 ರನ್ ಕಲೆಹಾಕಿತು. ನಂತರ ಆಲ್ರೌಂಡರ್ ಸಿಕಂದರ್ ರಾಜಾ (48) ಹಾಗೂ ರ‌್ಯಾನ್ ಬರ್ಲ್ (47) ಬಿರುಸಿನ ಬ್ಯಾಟಿಂಗ್ ಮೂಲಕ 408 ರನ್ ಪೇರಿಸಲು ತಂಡಕ್ಕೆ ನೆರವಾದರು.

    ಪ್ರತಿಯಾಗಿ ಅಮೆರಿಕ ತಂಡ 25.1 ಓವರ್‌ಗಳಲ್ಲಿ 104 ರನ್‌ಗಳಿಗೆ ಸರ್ವಪತನ ಕಂಡು ಹೀನಾಯ ಸೋಲು ಅನುಭವಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts