More

    ಐಸಿಎಐ ಹುಬ್ಬಳ್ಳಿ ಶಾಖೆ ವಾರ್ಷಿಕ ಸಮ್ಮೇಳನ

    ಹುಬ್ಬಳ್ಳಿ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ)ಯ ಹುಬ್ಬಳ್ಳಿ ಶಾಖೆಯ 36ನೇ ವಾರ್ಷಿಕ ಸಮ್ಮೇಳನ ಡಿ. 15 ಮತ್ತು 16ರಂದು ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಲಾಗಿದೆ. ಚನ್ನೈ, ಹೈದರಾಬಾದ್, ವಿವಿಧೆಡೆಯ ಲೆಕ್ಕ ಪರಿಶೋಧಕರು ತಾಂತ್ರಿಕ ಉಪನ್ಯಾಸ ನೀಡುವರು ಎಂದು ಶಾಖೆ ಅಧ್ಯಕ್ಷ ಮಲ್ಲಿಕಾರ್ಜನ ಪಿಸೆ ಹಾಗೂ ಸಮ್ಮೇಳನ ಸಮಿತಿಯ ಚೇರ್ಮನ್ ಚನ್ನವೀರ ಮುಂಗರವಾಡಿ ತಿಳಿಸಿದರು.

    ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15ರಂದು ಬೆಳಗ್ಗೆ 9.30ಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಉದ್ಘಾಟಿಸುವರು. ಐಸಿಎಐ ಕೇಂದ್ರ ಪರಿಷತ್ ಸದಸ್ಯ ಕೋಥಾ ಶ್ರೀನಿವಾಸ, ಐಸಿಎಐ ದಕ್ಷಿಣ ಭಾರತ ಪ್ರಾಂತದ ಅಧ್ಯಕ್ಷ ಪನ್ನಾ ರಾಜ್ ಪಾಲ್ಗೊಳ್ಳುವರು ಎಂದು ವಿವರಿಸಿದರು.

    ಸಮ್ಮೇಳನದಲ್ಲಿ ಒಟ್ಟು 8 ತಾಂತ್ರಿಕ ಗೋಷ್ಠಿಗಳು ನಡೆಯಲಿವೆ. ವೃತ್ತಿಯಲ್ಲಿ ಆಗುತ್ತಿರುವ ಬದಲಾವಣೆ, ವೃತ್ತಿ ಬಾಂಧವರು ಅನುಸರಿಸಬೇಕಾದ ನೀತಿ ಸಂಹಿತೆ, ಜಿಎಸ್​ಟಿ ಕಾಯ್ದೆಯಡಿ ವ್ಯಾಜ್ಯಗಳ ನಿರ್ವಹಣೆ, ಸಾರ್ವಜನಿಕ ಧಾರ್ವಿುಕ ಮತ್ತು ದತ್ತಿ ಸಂಸ್ಥೆಗಳ ಕರಾಕರಣೆ ಮತ್ತು ವಿನಾಯಿತಿಗಳ ಬಗ್ಗೆ ಆಡಿಟ್ ರಿಪೋರ್ಟ್, ಕಂಪನಿ ಕಾಯ್ದೆಯಡಿ ಆಡಿಟ್ ನಿರ್ವಹಣೆ, ಮಾಹಿತಿ ತಂತ್ರಜ್ಞಾನ ಹಾಗೂ ಸಿಎ ವೃತ್ತಿಯಲ್ಲಿ ಡಿಜಿಟಲೀಕರಣ ಬಳಕೆಯ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

    ಖ್ಯಾತ ಲೆಕ್ಕ ಪರಿಶೋಧಕರಾದ ಮಂಗಳೂರಿನ ಅನ್ವೇಶ ಶೆಟ್ಟಿ, ಚನ್ನೈನ ಶ್ರೀನಿವಾಸ ಪತಂಜಲಿ, ಪಟ್ಟಾಭಿರಾಮ, ಮದುರೈನ ಡೊಂಗರಚಂದ ಜೈನ್, ಹೈದರಾಬಾದ್​ನ ಹರಿ ಅಗರ್ವಾಲ್, ಬೆಂಗಳೂರಿನ ಕೆ. ಗುರುರಾಜ ಆಚಾರ್ಯ, ತಿರುಪತಿಯ ಚೈತನ್ಯ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡುವರು. ಹೃದ್ರೋಗ ತಜ್ಞ ಡಾ. ಅಮಿತ ಸತ್ತೂರ ಹೃದಯ ಸ್ತಂಭನ ನಿಯಂತ್ರಣ ಕುರಿತು ಮಾತನಾಡುವರು. ಸಮ್ಮೇಳನದಲ್ಲಿ ಸುಮಾರು 400 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಮಲ್ಲಿಕಾರ್ಜುನ ಪಿಸೆ, ಲೆಕ್ಕ ಪರಿಶೋಧಕರಾದ ವೈ.ಎಂ. ಖಟಾವಕರ, ಧನಪಾಲ ಮುನ್ನೊಳ್ಳಿ, ಗುಲಾಬ ಛಾಜೇಡ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts