More

    ಪೊಲೀಸ್ ಗೌರವಗಳೊಂದಿಗೆ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅಂತ್ಯಕ್ರಿಯೆಗೆ ಸರ್ಕಾರದ ಆದೇಶ

    ಬೆಂಗಳೂರು: ಖ್ಯಾತ ಪ್ರವಚನಕಾರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ಸರ್ಕಾರ ಸಂತಾಪ ವ್ಯಕ್ತಪಡಿಸಿದ್ದು, ಪೊಲೀಸ್ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಆದೇಶಿಸಿದೆ.

    ಖ್ಯಾತ ಪ್ರವಚನಕಾರರು ಹಾಗೂ ಪದ್ಮಶ್ರೀ ಪುರಸ್ಕೃತರಾದ ಶ್ರೀ ಇಬ್ರಾಹಿಂ ಸುತಾರ ಅವರು ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಫೆ. 5ರಂದು ನಿಧನರಾಗಿದ್ದು, ಅವರ ನಿಧನಕ್ಕೆ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಪೊಲೀಸ್​ ಗೌರವಗಳೊಂದಿಗೆ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕನಿಷ್ಠ ಪೊಲೀಸ್​ ಸಿಬ್ಬಂದಿಗಳನ್ನು ನಿಯೋಜಿಸಿ ಕೋವಿಡ್​ ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸಿ ನೆರವೇರಿಸಲು ಆದೇಶಿಸಲಾಗಿದೆ ಎಂದು ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.

    ರಬಕವಿ-ಬನಹಟ್ಟಿ ತಾಲೂಕಿನ ಮಹಲಿಂಗಪುರದಲ್ಲಿನ ತಮ್ಮ ಭಾವೈಕ್ಯ ನಿವಾಸದಲ್ಲಿ ಹೃದಯಾಘಾತದಿಂದ ಸುತಾರ ಅವರು ಸಾವನ್ನಪ್ಪಿದ್ದಾರೆ. 82 ವರ್ಷದ ಇಬ್ರಾಹಿಂ ಸುತಾರ ಸಾವನ್ನಪ್ಪಿದ್ದರಿಂದ ಭಾವೈಕ್ಯತೆಯ ಕೊಂಡಿ ಕಳಚಿ ಬಿದ್ದಂತಾಗಿದೆ.

    ಪ್ರತಿವರ್ಷ ನೂರಾರು ಕಾರ್ಯಕ್ರಮಗಳನ್ನ ನೀಡುತ್ತ, ಹಿಂದು-ಮುಸ್ಲಿಂರಲ್ಲಿ ಭಾವೈಕ್ಯತೆ ಬೆಸೆಯುವ ಕಾಯಕದಲ್ಲಿ ತೊಡಗಿದ್ದ ಇಬ್ರಾಹಿಂ ಸುತಾರ ಇಹಲೋಕ‌ ತೊರೆದಿದ್ದು ನಾಡಿಗೆ ತುಂಬಲಾರದ ನಷ್ಟವಾಗಿದೆ.

    ಮೇ 5, 1940ರಲ್ಲಿ ಮಹಲಿಂಗಪುರದ ನಬೀಸಾಬ ಹಾಗೂ ಅಮೀನಾಬಿ ಪುಣ್ಯ ಗರ್ಭದಲ್ಲಿ ಜನಿಸಿದ ಇಬ್ರಾಹಿಂ ಅವರು ಬಡತನದ ಕಾರಣ ಕೇವಲ 3ನೇ ತರಗತಿಯವರೆಗೆ ಉರ್ದು ಶಿಕ್ಷಣವನ್ನ ಪಡೆದವರು. ನಂತರ ಶಾಲೆಯನ್ನ ಬಿಟ್ಟು ಬಾಲ್ಯದಲ್ಲಿಯೇ ರಮಝಾನ ಜಾಗರಣ ಸಂಘ ಕಟ್ಟಿ, ನಾಡಿನ ಭಾವೈಕ್ಯತೆಯ ಸೇವೆಗೆ ಚಿಕ್ಕಂದಿನಿಂದಲೇ ಅಣಿಯಾದವರು.

    ಪರಮಾರ್ಥ ಲಹರಿ (ತತ್ವಪದಗಳ ಸಂಗ್ರಹ), ತತ್ವಜ್ಞಾನಕ್ಕೆ ಸರ್ವರೂ ಅಧಿಕಾರಿಗಳು(ಚಿಂತನ ಗ್ರಂಥ), ನಾವೆಲ್ಲ ಭಾರತೀಯರು (ಕವನ ಸಂಕಲನ) ಎಂಬ ಪುಸ್ತಕಗಳನ್ನ ರಚಿಸಿ ಶ್ರೀಮಂತಗೊಳಿಸಿದವರು. ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ ಎಂಬ ಕವನ ಸಂಕಲನ ಬಹಳ ಪ್ರಸಿದ್ಧಿಯನ್ನ ಪಡೆದ ಭಾವೈಕ್ಯತೆಯ ಪ್ರಾರ್ಥನೆಯ ಹಾಡು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪದವಿ ಕನ್ನಡ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಈ ಹಾಡನ್ನ ಸರ್ಕಾರ ಅಳವಡಿಸಿದೆ.

    ಪ್ರಶ್ನೋತ್ತರಗಳ ಜೊತೆಗೆ ತತ್ವಪದಗಳನ್ನು ಹಾಡುವಂಥ ತಮ್ಮ ಆರು ಜನ ಸಹ ಕಲಾವಿದರೊಂದಿಗೆ “ಭಾವೈಕ್ಯ ಭಕ್ತಿ ರಸಮಂಜರಿ”,”ಆಧ್ಯಾತ್ಮ ಸಂವಾದ ತರಂಗಿಣಿ” ಮತ್ತು “ಗೀತ ಸಂವಾದ ತರಂಗಿಣಿ” ಎಂಬ ಹೆಸರಿನ ವಿನೂತನ ಕಲಾ ಪ್ರಕಾರವನ್ನ ಹುಟ್ಟು ಹಾಕಿದರು.

    ಇನ್ನು ಸಾಮಾಜಿಕ ಜಾಗೃತಿ, ಭಾವೈಕ್ಯತೆ ಮೂಡಿಸುವ 22 ಧ್ವನಿ ಸುರುಳಿಗಳನ್ನ ಹೊರತಂದಿದ್ದಾರೆ. ಸೌಡಿಲ್ಲದ ಸಾಹುಕಾರ, ಪಾಪ ಮಾಡಬೇಡ, ಉತ್ತಮರ ಸಂಗಮಾಡು, ದಯವೇ ಧರ್ಮದ ಮೂಲ ಸೇರಿದಂತೆ 22 ಧ್ವನಿ ಸುರುಳಿಗಳನ್ನ ನಾಡಿಗೆ ಅರ್ಪಿಸಿದ್ದಾರೆ.

    ನಾಡಿನ ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಚಾಲುಕ್ಯ ಉತ್ಸವ ನಾಡಿನ ಬಹುತೇಕ ಉತ್ಸವಗಳು ಹಾಗೂ ಪ್ರಮುಖ ಮಠಗಳಲ್ಲಿ ಭಾವೈಕ್ಯದ ಸಂದೇಶವನ್ನ ತಮ್ಮ”ಪ್ರವಚನ ಮತ್ತು ಗೀತ ಸಂವಾದ ತರಂಗಿಣಿ”ಮೂಲಕ ಸಾರಿದ್ದಾರೆ.

    ಭಾವೈಕ್ಯ ಸಂದೇಶ ಸಾರುತ್ತಿದ್ದ ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಇನ್ನಿಲ್ಲ

    ಭೂ ಮಾಪಿಯಾ ವಿರುದ್ಧ 26 ವರ್ಷದ ಹೋರಾಟಕ್ಕೆ ಸಿಗದ ಫಲ: ಸಿಎಂ ಯೋಗಿ ವಿರುದ್ಧವೇ ಚುನಾವಣಾ ಕಣಕ್ಕಿಳಿದ ಮಾಜಿ ಶಿಕ್ಷಕ

    ಕಳಪೆ ಹೆಲ್ಮೆಟ್​ ಧರಿಸಿದ್ದ ಬೈಕ್​ ಸವಾರನಿಂದ ದಂಡ ಪಡೆದ ಕಾನ್​ಸ್ಟೇಬಲ್​ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts