More

    ಜೀವ ಬೆದರಿಕೆ ಬೆನ್ನಲ್ಲೇ ಜಿಲ್ಲಾಧಿಕಾರಿ ಸಿಂಧೂ ಸೇರಿದಂತೆ 13 ಅಧಿಕಾರಿಗಳ ವರ್ಗ

    ಬೆಂಗಳೂರು: ಅಕ್ರಮ ಜಾನುವಾರು ಸಾಗಿಸುವವರ ವಿರುದ್ದ ಧ್ವನಿ ಎತ್ತಿದ್ದ ಹಿನ್ನೆಲೆಯಲ್ಲಿ ಕೊಲೆ ಬೆದರಿಕೆ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‍ ಸೇರಿದಂತೆ 13 ಮಂದಿ ಐಎಎಸ್‌ ಅಧಿಕಾರಿಗಳನ್ನು ಬೇರೆಬೇರೆ ಕಡೆಗಳಲ್ಲಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುವವರ ಮೇಲೆ ಹಾಗೂ ಜಾನುವಾರು ರಕ್ಷಣೆ ಬರುವ ಜನರ ಮೇಲೆ ಹಲ್ಲೆ ನಡೆಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಇವರು ಹೇಳಿದ ಬೆನ್ನಲ್ಲೇ ‘ರಾಮ್ ಸೇನಾ ಅಭಿಮಾನಿ ಬಳಗ’ ಎನ್ನುವ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ‘ಇವಳನ್ನು ಕೊಲ್ಲಬೇಕು’ ಎಂದು ತುಳುಭಾಷೆಯಲ್ಲಿ ಬೆದರಿಕೆ ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
    ಇದರ ಬೆನ್ನಲ್ಲೇ ಅವರಿಗೆ ಈಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇ -ಆಡಳಿತ ವಿಭಾಗದ ನಿರ್ದೆಶಕಿಯನ್ನಾಗಿ ನೇಮಕಗೊಳಿಸಲಾಗಿದೆ.

    ಇವರನ್ನು ಹೊರತುಪಡಿಸಿ ಇನ್ನೂ 12 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಅದರ ವಿವರ ಹೀಗಿದೆ. ಕೊರನಾ ವೈರಸ್‌ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಇಬ್ಬರನ್ನು ವಿಶೇಷ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

    ರಾಜಕುಮಾರ್ ಕತ್ರಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ
    ಡಾ.ಎನ್. ನಾಗಾಂಬಿಕಾ ದೇವಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
    ಮನೋಜ್ ಜೈನ್- ಬಿಬಿಎಂಪಿ ವಿಶೇಷ ಆಯುಕ್ತರು
    ರಾಜೇಂದ್ರ ಜೋಳನ್- ಬಿಬಿಎಂಪಿ ವಿಶೇಷ ಆಯುಕ್ತರು
    ಆರ್. ವಿನೋತ್ ಪ್ರಿಯಾ – ನಿರ್ದೇಶಕರು, ಎಂಎಸ್​ಎಂಇ
    ಡಾ.ಬಿ.ಆರ್.ಮಮತಾ- ಹೆಚ್ಚುವರಿ ನಿರ್ದೇಶಕರು, ಸಕಾಲ
    ಪೊಮ್ಮಲ ಸುನೀಲ್ ಕುಮಾರ್- ವಿಜಯಪುರ ಜಿಲ್ಲಾಧಿಕಾರಿ
    ಡಾ.ರಾಜೇಂದ್ರ ಕೆ.ವಿ. – ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
    ದರ್ಶನ್ ಎಚ್​.ಪಿ.- ಬೆಳಗಾವಿ ಜಿಪಂ ಸಿಇಒ
    ಡಾ.ಎಚ್.ಎನ್.ಗೋಪಾಲಕೃಷ್ಣ- ನಿರ್ದೇಶಕರು, ಮೈಸೂರು ಶುಗರ್ಸ್ ಕಂಪನಿ ಲಿ.
    ಕವಿತಾ ಎಸ್. ಮಣ್ಣೀಕೆರಿ- ಚಿತ್ರದುರ್ಗ ಜಿಲ್ಲಾಧಿಕಾರಿ
    ಪಾಟೀಲ ಯಲಗೌಡ ಶಿವನಗೌಡ – ಜಂಟಿ ನಿರ್ದೇಶಕ, ಆಡಳಿತ ತರಬೇತಿ ಸಂಸ್ಥೆ, ಮೈಸೂರು

    ಜೀವ ಬೆದರಿಕೆ ಬೆನ್ನಲ್ಲೇ ಜಿಲ್ಲಾಧಿಕಾರಿ ಸಿಂಧೂ ಸೇರಿದಂತೆ 13 ಅಧಿಕಾರಿಗಳ ವರ್ಗ ಜೀವ ಬೆದರಿಕೆ ಬೆನ್ನಲ್ಲೇ ಜಿಲ್ಲಾಧಿಕಾರಿ ಸಿಂಧೂ ಸೇರಿದಂತೆ 13 ಅಧಿಕಾರಿಗಳ ವರ್ಗ ಜೀವ ಬೆದರಿಕೆ ಬೆನ್ನಲ್ಲೇ ಜಿಲ್ಲಾಧಿಕಾರಿ ಸಿಂಧೂ ಸೇರಿದಂತೆ 13 ಅಧಿಕಾರಿಗಳ ವರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts