More

    12ನೇ ತರಗತಿಯಲ್ಲಿ ಫೇಲ್ ಆಗಿದ್ದ ಅಂಜುಶರ್ಮಾ ಪ್ರಥಮ ಪ್ರಯತ್ನದಲ್ಲೇ IAS ಪರೀಕ್ಷೆಯಲ್ಲಿ ಉತ್ತೀರ್ಣ​

    ನವದೆಹಲಿ: ಪ್ರಯತ್ನ ಎನ್ನುವುದು ಮುಖ್ಯವಾಗುತ್ತದೆ. ಸೋಲು ಸಹಜ.. ಅದೃಷ್ಟವು ಕೆಲವೊಮ್ಮೆ ನಮ್ಮನ್ನು ಹುಡುಕಿ ಬರುತ್ತದೆ. ಹೀಗೆ ಐಎಎಸ್ ಅಧಿಕಾರಿ ಅಂಜು ಶರ್ಮಾ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಸಾಧನೆ ಮಾಡಿದ್ದಾರೆ.

    ಎಸ್ ಎಸ್ ಎಲ್ ಸಿ, ಪಿಯುಸಿ ಯಲ್ಲಿ ಅನುತ್ತೀರ್ಣರಾಗುವವರೆಲ್ಲಾ ದಡ್ಡರೆಂದಲ್ಲ. ಒಮ್ಮೆ ಇಂತಹ ಪರೀಕ್ಷೆಗಳಲ್ಲಿ ಫೇಲ್ ಆದವರು ಮುಂದೆ ದೊಡ್ಡ ಹುದ್ದೆಗೇರಲು ಸಾಧ್ಯವಿಲ್ಲ ಎಂದು ಅಂದುಕೊಳ್ಳುತ್ತಾರೆ. ಆದರೆ ಇದು ತಪ್ಪಾಗುತ್ತದೆ. ಯಾಕೆಂದರೆ 10 ನೇ ತರಗತಿ ಮತ್ತು 12 ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದ ಅಂಜು ಶರ್ಮಾ ಅವರು ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆ ಪಾಸ್ ಆಗಿದ್ದು, ಇದೀಗ ಉನ್ನತ ಹುದ್ದೆಯಲ್ಲಿದ್ದಾರೆ.

    ಇದನ್ನೂ ಓದಿ: ಭೀಕರ ಅಪಘಾತ; ಅಂತರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಮೃತ್ಯು

    ಅಂಜು ಶರ್ಮಾ 10 ನೇ ತರಗತಿಯ ಪ್ರಿ-ಬೋರ್ಡ್ ಪರೀಕ್ಷೆಯಲ್ಲಿ ರಸಾಯನಶಾಸ್ತ್ರ ಮತ್ತು 12 ನೇ ತರಗತಿಯಲ್ಲಿ ಅರ್ಥಶಾಸ್ತ್ರದಲ್ಲಿ ಅನುತ್ತೀರ್ಣರಾಗಿದ್ದರು. ಆದರೆ ಅವರು ಇತರ ವಿಷಯಗಳಲ್ಲಿ ಡಿಸ್ಟಿಂಕ್ಷನ್ ಅಂಕಗಳನ್ನು ಪಡೆದಿದ್ದರು. ಅಂಜು ಶರ್ಮಾ ಈ ಎರಡೂ ವೈಫಲ್ಯಗಳನ್ನು ಕಲಿಕೆಯ ಅನುಭವವಾಗಿ ಬಳಸಿಕೊಂಡು ಅಂತಿಮವಾಗಿ ಅವರು ಕೇವಲ 22 ವರ್ಷದವರಾಗಿದ್ದಾಗ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅಂಜು ಶರ್ಮಾ ಜೈಪುರದಲ್ಲಿ ಬಿಎಸ್ಸಿ ಮತ್ತು ಎಂಬಿಎ ಮುಗಿಸಿದ್ದಾರೆ.

    ಇದನ್ನೂ ಓದಿ:  ವಿಷಕಾರಿ ಹುಲ್ಲು ತಿನ್ನುತ್ತಿದ್ದಂತೆ ಒಂದಾದ ಮೇಲೆ ಒಂದರಂತೆ 34 ಕುರಿಗಳು ದುರಂತ ಸಾವು!

    ವೃತ್ತಿಜೀವನ: IAS ಅಧಿಕಾರಿಯಾದ ನಂತರ ಅವರು 1991 ರಲ್ಲಿ ರಾಜ್‌ಕೋಟ್‌ನಲ್ಲಿ ಸಹಾಯಕ ಕಲೆಕ್ಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಪ್ರಸ್ತುತ ಗಾಂಧಿನಗರದಲ್ಲಿ ಸರ್ಕಾರಿ ಶಿಕ್ಷಣ ಇಲಾಖೆ (ಉನ್ನತ ಮತ್ತು ತಾಂತ್ರಿಕ ಶಿಕ್ಷಣ) ಸಚಿವಾಲಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

    ಇದನ್ನೂ ಓದಿ: ಗುಂಡಿನ ದಾಳಿ: ಬಿಜೆಪಿ ನಾಯಕನ ಹತ್ಯೆ
    22ನೇ ವಯಸ್ಸಿನಲ್ಲಿ ಯುಪಿಎಸ್‌ಸಿಯಲ್ಲಿ ತೇರ್ಗಡೆಯಾದರು: ಸಂದರ್ಶನವೊಂದರಲ್ಲಿ ಮಾತನಾಡಿದ ಅಂಜು ಶರ್ಮಾ ,ರಾತ್ರಿ ಊಟವಾದ ಬಳಿಕ ಈಗ ಪರೀಕ್ಷೆಗೆ ತಯಾರಿಯೇ ಇಲ್ಲ ಎಂಬ ಚಿಂತೆ ಕಾಡತ್ತಿತ್ತು. ಇದೇ ರೀತಿ ಮುಂದುವರಿದರೆ ನಾನು ಸೋಲುತ್ತೇನೆ. ನಮ್ಮ ಭವಿಷ್ಯವನ್ನು ನಿರ್ಧರಿಸುವ ಕಾರಣ 10ನೇ ಅಂಕ ಬಹಳ ಮುಖ್ಯ ಎಂದು ಎಲ್ಲರೂ ಹೇಳುತ್ತಿದ್ದರು. ಪ್ರಿ-ಬೋರ್ಡ್ ಪರೀಕ್ಷೆಯ ಸಮಯದಲ್ಲಿ ಅನೇಕ ಅಧ್ಯಾಯಗಳನ್ನು ಓದಲು ಉಳಿದಿದೆ. ಸತತ ಪ್ರಯತ್ನ ನಂತರ ನನಗೆ ಗೆಲುವು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

    ವಿಧಾನಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ JDS ಶಾಸಕ ಕೆ.ಎಂ. ಶಿವಲಿಂಗೆ ಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts