More

    ಅಫ್ಘಾನಿಸ್ತಾನ ಎದುರು ಡ್ರಾ ಸಾಧಿಸಿದ ಭಾರತ; ಏಷ್ಯಾಕಪ್ 3ನೇ ಸುತ್ತಿಗೆ ಅರ್ಹತೆಗಿಟ್ಟಿಸಿಕೊಂಡ ಛೇಟ್ರಿ ಪಡೆ

    ದೋಹಾ: ಭಾರತ ಫುಟ್ ಬಾಲ್ ತಂಡ ಏಷ್ಯಾಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಎದುರು ತಲಾ ಒಂದು ಗೋಲುನಿಂದ ಡ್ರಾ ಸಾಧಿಸಿತು. ಇದರೊಂದಿಗೆ ಭಾರತ ತಂಡ ಇ ಗುಂಪಿನಲ್ಲಿ 3ನೇ ಸ್ಥಾನ ಕಾಯ್ದುಕೊಂಡಿತು. ಜತೆಗೆ 3ನೇ ಸುತ್ತಿನ ಏಷ್ಯಾಕಪ್ ಅರ್ಹತಾ ಸುತ್ತಿಗೆ ಪ್ರವೇಶ ಪಡೆಯಿತು. ಪಂದ್ಯ 75ನೇ ನಿಮಿಷದಲ್ಲಿ ಅಫ್ಘಾನಿಸ್ತಾನ ಗೋಲ್‌ಕೀಪರ್ ಓವೇಯ್ಸ ಅಜಿಜಿ ಸ್ವಗೋಲಿನ ಮೂಲಕ ಭಾರತಕ್ಕೆ ಗೋಲುಬಿಟ್ಟುಕೊಟ್ಟರು. ಪ್ರತಿಯಾಗಿ 81ನೇ ನಿಮಿಷದಲ್ಲಿ ಹೊಸೀನ್ ಜಮಾನಿ ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. 2019ರಲ್ಲಿ ನಡೆದ ಮೊದಲ ಚರಣದ ಪಂದ್ಯದಲ್ಲೂ ಉಭಯ ತಂಡಗಳು 1-1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಭಾರತ ತಂಡ ಕನಿಷ್ಠ ಡ್ರಾ ಸಾಧಿಸಿದರೂ 3ನೇ ಸುತ್ತಿನ ಏಷ್ಯನ್ ಕಪ್ ಅರ್ಹತಾ ಸುತ್ತಿಗೇರುವ ಅವಕಾಶ ಹೊಂದಿತ್ತು.

    ಇದನ್ನೂ ಓದಿ: ಭಾರತದ ಯುವ ಕ್ರಿಕೆಟಿಗರಿಗೆ ರಾಹುಲ್ ದ್ರಾವಿಡ್ ಮತ್ತೊಮ್ಮೆ ಮಾರ್ಗದರ್ಶನ,

    ಇಗೊರ್ ಸ್ಟಿಮ್ಯಾಕ್ ಮಾರ್ಗದರ್ಶನದ ಭಾರತ ತಂಡ ವಿಶ್ವಕಪ್ ಹಾಗೂ ಏಷ್ಯಾಕಪ್ ಅರ್ಹತಾ ಸುತ್ತಿನಲ್ಲಿ ಏಕೈಕ ಜಯ, 4 ಡ್ರಾ ಹಾಗೂ 3ರಲ್ಲಿ ಡ್ರಾ ಸಾಧಿಸಿದೆ. ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಜಯ ದಾಖಲಿಸಿತ್ತು. 2019ರಲ್ಲಿ ಕತಾರ್ ಎದುರು ಡ್ರಾ ಸಾಧಿಸಿದ್ದೆ ಭಾರತದ ಮುನ್ನಡೆಗೆ ಪ್ರಮುಖ ಕಾರಣ.

    ಇದನ್ನೂ ಓದಿ: ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕಿಲ್ಲ ಕನ್ನಡಿಗರು ; 15ರ ಬಳಗದಲ್ಲೂ ಕೆಎಲ್ ರಾಹುಲ್, ಮಯಾಂಕ್‌ಗೆ ಸ್ಥಾನವಿಲ್ಲ, 

    ಭಾರತ ತಂಡ ಇದುವರೆಗೂ ಆಡಿರುವ 8 ಪಂದ್ಯಗಳಿಂದ 7 ಅಂಕ ಕಲೆಹಾಖಿದೆ. ಇ ಗುಂಪಿನಲ್ಲಿ ಭಾರತ ತಂಡ 3ನೇ ಸ್ಥಾನದಲ್ಲಿದೆ. ಕತಾರ್ ಹಾಗೂ ಓಮಾನ್ ತಂಡಗಳು ಮೊದಲ ಎರಡು ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನ ತಂಡ 4ನೇ ಸ್ಥಾನದಲ್ಲಿದೆ. 8 ಗುಂಪಿನಿಂದ ಅಗ್ರ 4 ಸ್ಥಾನ ಪಡೆದ ತಂಡಗಳಷ್ಟೇ ಮೂರನೇ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts