More

    ಮೋದಿಗೆ ಕೈರುಚಿ ಬಡಿಸೋದು ಮಿಸ್​ ಆಯ್ತಲ್ಲಾ ಎಂದು ಪರಿತಪಿಸಿದ ಪ್ರಧಾನಿ

    ನವದೆಹಲಿ: ಕಳೆದ ಜನವರಿಯಲ್ಲಿ ಆಸ್ಟ್ರೇಲಿಯಾದ ಹಲವೆಡೆ ಭಾರಿ ಕಾಡ್ಚಿಚ್ಚು ವ್ಯಾಪಿಸಿತ್ತು. ಈ ಕಾರಣದಿಂದಾಗಿಯೇ ಅಲ್ಲಿನ ಪ್ರಧಾನಮಂತ್ರಿ ಸ್ಕಾಟ್​ ಮಾರಿಸಸ್​ ಭಾರತ ಭೇಟಿ ರದ್ದಾಗಿತ್ತು.
    ಪ್ರಸ್ತುತ, ಜೂನ್ 4ರಂದು ಭಾರತ- ಆಸ್ಟ್ರೇಲಿಯಾ ಪ್ರಧಾನಿಗಳ ನಡುವೆ ಸಭೆ ನಿಗದಿಯಾಗಿದೆ. ಎರಡೂ ದೇಶಗಳ ಆರ್ಥಿಕ ಹಾಗೂ ಇತರ ವಲಯಗಳ ನಡುವಿನ ಸಂಬಂಧವನ್ನು ವೃದ್ಧಿಸಲು ಪ್ರಧಾನಿ ಮೋದಿ ಜತೆಗೆ ಸ್ಕಾಟ್​ ಮಾರಿಸನ್​ ಮಾತುಕತೆ ನಡೆಸಲಿದ್ದಾರೆ.

    ಕರೊನಾ ಕಾರಣದಿಂದಾಗಿ ಈ ಸಭೆ ವಿಡಿಯೋ ಕಾನ್ಫರೆನ್ಸ್​ ಆಗಿರಲಿದೆ. ‘….ಅಯ್ಯೋ ಭೇಟಿ ಸಾಧ್ಯವಾಗಿದ್ದರೆ, ಮೋದಿಯೊಂದಿಗೆ ಖಂಡಿತ ಹಂಚಿಕೊಳ್ಳುತ್ತಿದೆ ಎಂದು ಸ್ಕಾಟ್​ ಮಾರಿಸನ್​ ಪರಿತಪಿಸಿದ್ದಾರೆ. ಇಷ್ಟಕ್ಕೂ ಮಾರಿಸನ್​ ಮೋದಿಗೆ ಕೊಡಬೇಕು ಎಂದಿದ್ದಾದರೂ ಏನು?

    ಇದನ್ನೂ ಓದಿ; ಇನ್ಫೋಸಿಸ್​ ಸಿಇಒ, ಸಿಒಒ, ಅಧ್ಯಕ್ಷರ ಸಂಬಳಕ್ಕಿಲ್ಲ ಕರೊನಾ ಭೀತಿ…! 

    ಭಾನುವಾರ ಸ್ಕಾಟ್​ ಮಾರಿಸನ್​ ಭಾರತೀಯ ಖಾದ್ಯ ಸಮೋಸಾ ತಯಾರಿಸಿದ್ದಾರೆ. ಜತೆಗೆ, ಮಾವಿನಕಾಯಿ ಚಟ್ನಿ ಕೂಡ ಮಾಡಿದ್ದಾರೆ. ಇದರ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ತಾವೇ ತಯಾರಿಸಿದ ಖಾದ್ಯಕ್ಕೆ ಸ್ಕೊಮಾಸಾ ಎಂದು ನಾಮಕರಣ ಮಾಡಿದ್ದಾರೆ.

    ‘ಸ್ಕೊಮೊಸಾ… ಮಾವಿನ ಕಾಯಿ ಚಟ್ನಿಯೊಂದಿಗೆ… ಅದೂ ಕೂಡ ತಿರುಳಿನಿಂದ ತಯಾರಿಸಿದ್ದು, ದುರಾದೃಷ್ಟವೆಂದರೆ ಈ ವಾರ ನರೇಂದ್ರ ಮೋದಿ ಅವರೊಂದಿಗೆ ನನ್ನ ಮೀಟಿಂಗ್​ ವಿಡಿಯೋ ಲಿಂಕ್​ ಮೂಲಕ ನಡೆಯಲಿದೆ. ಅವರು ಸಸ್ಯಾಹಾರಿ. ಅವರೊಂದಿಗೆ ಇವನ್ನು ಹಂಚಿಕೊಳ್ಳಲು ಖಂಡಿತ ಇಷ್ಟಪಡುತ್ತಿದ್ದೆ.’ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಅದನ್ನು ಮೋದಿಗೆ ಖಾತೆಗೂ ಟ್ಯಾಗ್​ ಮಾಡಿದ್ದಾರೆ.

    ಇದನ್ನೂ ಓದಿ; ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಏಕೈಕ ಭಾರತೀಯ ಕೊಹ್ಲಿ 

    ಕೋವಿಡ್​ ಕಾಲದಲ್ಲಿ ಭಾರತದ ಮೊದಲ ದ್ವಿಪಕ್ಷೀಯ ಮಾತುಕತೆಗಳು ಇದೇ ಪ್ರಥಮ ಬಾರಿಗೆ  ವಿಡಿಯೋ ಸಂವಾದದ ಮೂಲಕ ನಡೆಯುತ್ತಿದೆ.

    ಕಾಲ್ನಡಿಗೆ, ಬಸ್​, ರೈಲು ಹಿಡಿದು ಊರಿಗೆ ಬಂದಾಯ್ತು…., ಮುಂದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts