More

    ಕಿಡಿಗೇಡಿಗಳಿಗೆ ಹುಡುಗಾಟ, ಜನರಿಗೆ ಪ್ರಾಣಸಂಕಟ; ಕೋವಿಡ್​ ವೈರಾಣು ಹೊತ್ತು ತಂದಿರುವೆ ಎಂಬ ಸಂದೇಶದ ನೋಟುಗಳು ಪತ್ತೆ

    ನವದೆಹಲಿ: ಕಿಡಿಗೇಡಿಗಳ ಪಾಲಿಕೆಗೆ ಕೋವಿಡ್​ 19 ಸೋಂಕು ಹುಡುಗಾಟದ ವಸ್ತುವಾಗಿದೆ. ಆದರೆ ಅವರ ಹುಡುಗಾಟ ಜನರ ಪಾಲಿಗೆ ಪ್ರಾಣಸಂಕಟವಾಗಿದೆ.

    ನಾನು ಕರೊನಾ ವೈರಾಣು ಹೊತ್ತು ತಂದಿದ್ದೇನೆ. ಈ ನೋಟುಗಳನ್ನು ಎತ್ತಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಮನೆಗೆ ನಾನು ಬರುವೆ ಎಂಬ ಸಂದೇಶವನ್ನು ಚೀಟಿಯಲ್ಲಿ ಬರೆದು, ಅದಕ್ಕೆ 20, 50 ಮತ್ತು 100 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಲಗತ್ತಿಸಿರುವ ಕಿಡಿಗೇಡಿಗಳು ಬಿಹಾರದ ಕುಗ್ರಾಮದ ಮನೆಗಳ ಬಾಗಿಲ ಮುಂದೆ ನೋಟುಗಳನ್ನು ಬಿಸಾಡಿ ಹೋಗಿದ್ದಾರೆ. ಇವನ್ನು ಮುಟ್ಟಲು ಜನರು ಹಿಂಜರಿದು, ಹಾಗೆಯೇ ಬಿಡುತ್ತಿದ್ದಾರೆ.

    ಶುಕ್ರವಾರದಿಂದಲೂ ಕಿಡಿಗೇಡಿಗಳು ಹೀಗೆ ಮಾಡುತ್ತಿದ್ದಾರೆ. ಈ ಉಪಟಳ ಭಾನುವಾರದಂದು ಹೆಚ್ಚಾಗಿತ್ತು ಎಂದು ಹೇಳಿದ್ದಾರೆ.
    ಚೀಟಿಯಲ್ಲಿನ ಬರವಣಿಗೆ ಒಂದೇ ರೀತಿಯಲ್ಲಿದೆ. ಹಾಗಾಗಿ ಒಬ್ಬ ವ್ಯಕ್ತಿ ಈ ಕಿಡಿಗೇಡಿತನ ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗುವುದಾಗಿ ಸ್ಥಳೀಯರು ಹೇಳಿದ್ದಾರೆ.

    ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಅಖಿಲ ಭಾರತ ವರ್ತಕರ ಮಹಾಒಕ್ಕೂಟ (ಕನ್ಫೆಡರೇಷನ್​ ಆಫ್​ ಆಲ್​ ಇಂಡಿಯಾ ಟ್ರೇಡರ್ಸ್​-ಸಿಎಐಟಿ) ಕರೆನ್ಸಿ ನೋಟುಗಳ ಮೂಲಕ ಕರೊನಾ ಸೋಂಕು ಹಬ್ಬುವ ಬಗ್ಗೆ ಆತಂಕ ವ್ಯಕ್ತಪಡಿಸಿ, ಈ ಬಗ್ಗೆ ಪರಿಶೀಲನೆ ನಡೆಸುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಗೆ ಪತ್ರ ಬರೆದಿತ್ತು. ಆದರೆ, ಕರೆನ್ಸಿ ನೋಟುಗಳ ಮೂಲಕ ಕರೊನಾ ಹಬ್ಬುವ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲದ ಕಾರಣ, ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಕರೆನ್ಸಿ ನೋಟುಗಳ ಚಲಾವಣೆಯನ್ನು ನಿರ್ಬಂಧಿಸಿಲ್ಲ ಎನ್ನಲಾಗಿದೆ.

    ದೆಹಲಿಯಲ್ಲಿ ಲಘು ಭೂಕಂಪ, ಪೂರ್ವ ದೆಹಲಿಯಲ್ಲಿ ಕಂಪನ ಕೇಂದ್ರೀಕೃತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts