More

    ನೀರಾವರಿ ತಂದಿದ್ದು ನಾನು, ಸೋಲಿಸಿದ್ದೇಕೆ?: ಸ್ವಾಭಿಮಾನ ನಡಿಗೆ ಮೂಲಕ ಕಾರಣ ತಿಳಿದುಕೊಳ್ಳಲು ಮುಂದಾಗ ಸಿಪಿವೈ

    ಚನ್ನಪಟ್ಟಣ: ಕ್ಷೇತ್ರಕ್ಕೆ ನೀರಾವರಿ ತಂದವನು ನಾನು. ಕಳೆದ ಚುನಾವಣೆಯಲ್ಲಿ ಏಕೆ ಸೋಲಿಸಿದ್ದಿರಿ ಎಂದು ಜನರನ್ನು ಪ್ರಶ್ನೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಜನರ ಬಳಿ ಉತ್ತರ ಪಡೆಯಲು ಸ್ವಾಭಿಮಾನಿ ಯಾತ್ರೆ ಕೈಗೊಂಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು.

    ತಾಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸ್ವಾಭಿಮಾನ ಸಂಕಲ್ಪ ನಡಿಗೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನವನಾದ ನಾನು ಇಲ್ಲಿಂದಲೇ ರಾಜಕೀಯ ಜೀವನ ಆರಂಭಿಸಿ, ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಆದರೂ ಹೊರಗಿನಿಂದ ಬಂದ ಅಭ್ಯರ್ಥಿಯನ್ನು ಏಕೆ ಗೆಲ್ಲಿಸಿದಿರಿ. ಇಲ್ಲಿಂದ ಗೆದ್ದು ಶಾಸಕರಾದವರಿಗೆ ಈ ತಾಲೂಕಿನ ನಾಡಿಮಿಡಿತದ ಅರಿವಿದೆಯೇ, ಗೆದ್ದ ನಂತರ ಜನರ ಸಂಪರ್ಕದಲ್ಲಿದ್ದಾರಾ, ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರಾ ಎಂಬ ಹತ್ತಾರೂ ಪ್ರಶ್ನೆಗಳಿದ್ದು, ಅದನ್ನು ಜನರ ಮುಂದಿಟ್ಟು ಅವರಿಂದಲೇ ಉತ್ತರ ಪಡೆಯಲು ಈ ಯಾತ್ರೆ ನಡೆಸುತ್ತಿದ್ದೇನೆ ಎಂದರು.

    ವೈಯಕ್ತಿಕ ವರ್ಚಸ್ಸು ವೃದ್ಧಿಗೆ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಪಿವೈ, ನನ್ನ ವರ್ಚಸ್ಸು, ಪಕ್ಷದ ವರ್ಚಸ್ಸು ಎರಡೂ ಒಂದೆ. ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಸಂಚರಿಸುತ್ತಿದ್ದೇನೆ. ನನ್ನ ಹಾಗೂ ರಾಜ್ಯ ನಾಯಕರ ನಡುವೆ ಯಾವುದೇ ಅಂತರ ಇಲ್ಲ. ಚುನಾವಣೆ ಹಿನ್ನೆಲೆ ರಾಜ್ಯದ ಎಲ್ಲ ಭಾಗಗಳಲ್ಲಿ ನಾಯಕರು ಪ್ರವಾಸ ಮಾಡುತ್ತಿದ್ದಾರೆ. ನಿನ್ನೆ ಕೂಡಾ ಸಿಎಂ ಭೇಟಿಯಾಗಿ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದೇನೆ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಬಮುಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ.ಮಲುವೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಮು, ತಾಪಂ ಮಾಜಿ ಅಧ್ಯಕ್ಷ ಹರೂರು ರಾಜಣ್ಣ, ನಗರಾಧ್ಯಕ್ಷ ಆರ್.ಶಿವಕುಮಾರ್, ಮುಖಂಡರಾದ ವಿ.ಬಿ.ಚಂದ್ರು, ಸಿಂಗರಾಜಿಪುರ ರಾಜಣ್ಣ, ಅರಳಾಳುಸಂದ್ರ ಶಿವಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts