More

    ಕಾರು ಶೋರೂಮ್​ನ ಸಿಬ್ಬಂದಿ ಸ್ಥಾನ ಪಡೆಯಿತು ಬೀದಿನಾಯಿ…! ಎಲ್ಲಿ, ಹೇಗೆ?

    ಇದು ಕಾರು ಶೋರೂಂ- ಶ್ವಾನದ ಬಾಂಧವ್ಯಗಾಥೆ…! ಕಂಪನಿಯ ಸಿಬ್ಬಂದಿಯಾಗಿ ಸ್ಥಾನ ಪಡೆದ ರೋಚಕ ಕಹಾನಿ.

    ಕರೊನಾ ಸಮಯದಲ್ಲಿ ಉದ್ಯೋಗ ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಅಂಥದ್ದರಲ್ಲಿ, ಶ್ವಾನವೊಂದು ಉದ್ಯೋಗ ಗಿಟ್ಟಿಸಿಕೊಂಡಿದೆ ಎಂದರೆ ಅಚ್ಚರಿಯೇ ಸರಿ.
    ಹೌದು… ಇದು ಕಾರು ಶೋ ರೂಂ ಹಾಗೂ ಕಾರು ಶೋರೂಮ್​ನ ಬಾಂಧವ್ಯಗಾಥೆ. ಬ್ರೆಜಿಲ್​ನ ಎಸ್ಪಿರೆಟೋ ಸ್ಯಾಂಟೋದ ಸೆರ್ರಾ ಎಂಬಲ್ಲಿರುವ ಹುಂಡೈ ಕಾರು ಶೋರೂಮ್​ ತನ್ನ ಪ್ರಾಣಿಪ್ರೇಮಕ್ಕೆ ಭಾರಿ ಮೆಚ್ಚುಗೆ ಪಡೆದಿದೆ.

    ಇದನ್ನೂ ಓದಿ; ಸಾವಿನಲ್ಲೂ ಗುಟ್ಟು ಬಿಟ್ಟು ಕೊಡದ ಶ್ರೀಲಂಕಾ ಗ್ಯಾಂಗ್​ಸ್ಟರ್; ಎರಡು ವರ್ಷಗಳಿಂದ ಭಾರತದಲ್ಲೇ ಅಡಗಿದ್ದ…! 

    ಸದಾ ಶೋರೂಂ ಸುತ್ತಲೂ ಠಳಾಯಿಸುತ್ತಿದ್ದ ಬೀದಿನಾಯಿಯನ್ನು ದತ್ತು ಪಡೆದಿದ್ದಲ್ಲದೇ, ಅದಕ್ಕೆ ಟಸ್ಕಾನ್​ ಪ್ರೈಮ್ ಎಂಬ ಹೆಸರನ್ನು ನೀಡಿದ್ದರೆ, ಅಷ್ಟೇ ಆಗಿದ್ದರೆ, ವಿಶೇಷ ಇರುತ್ತಿರಲಿಲ್ಲವೇನೋ? ಅದಕ್ಕೆ ಶೋರೂಮ್​ನಲ್ಲಿ ಉದ್ಯೋಗ ಕಲ್ಪಿಸಿದ್ದಾರೆ. ಕಾರಿನ ಸೇಲ್ಸ್​ಮನ್​ ಹುದ್ದೆಯನ್ನೂ ನೀಡಿದ್ದಾರೆ. ಐಡಿ ಕಾರ್ಡ್​ಅನ್ನೂ ಅದರ ಕೊರಳಿಗೆ ನೇತು ಹಾಕಿದ್ದಾರೆ.

    ಶ್ವಾನ ಶೋರೂಮ್​ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಕಂಪನಿಯವರು ಹೇಳಿಕೊಂಡಿದ್ದಾರೆ. ಅದೇನೇ ಇರಲಿ, ಇವರ ಪ್ರಾಣಿಪ್ರೀತಿಗೆ ನೆಟ್ಟಿಗರಂತೂ ಭಾರಿ ಫಿದಾ ಆಗಿದ್ದಾರೆ. ಅತ್ಯಂತ ಮಾನವೀಯ ನಡೆಯಿದು ಎಂದು ಶ್ಲಾಘಿಸಿದ್ದಾರೆ.

    ಬೈರುತ್​ ಭಯಾನಕ ಸ್ಫೋಟಕ್ಕೆ ಕುಸಿದದ್ದು ಬರೀ ಕಟ್ಟಡಗಳಲ್ಲ…, ಇಡೀ ದೇಶದ ಆಹಾರ ಭದ್ರತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts