More

    VIDEO| ಜನರ ಜಾಗೃತಿಗಾಗಿ ಬಂತು ಕರೊನಾ ಕಾರು: ಇದರ ವಿಶೇಷತೆ ಕೇಳಿದ್ರೆ ಅಚ್ಚರಿಗೊಳ್ತೀರಾ!

    ಹೈದರಾಬಾದ್​: ಈಗ ಜಗವೆಲ್ಲಾ ಕರೊನಾಮಯವಾಗಿದೆ. ಎಲ್ಲಿ ಕೇಳಿದರೂ ಕರೊನಾ ಹೆಸರೇ ಕಿವಿಗೆ ಬೀಳುತ್ತಿದೆ. ಅಷ್ಟರಮಟ್ಟಿಗೆ ಈ ಮಹಾಮಾರಿ ಆತಂಕ ಸೃಷ್ಟಿಸಿದೆ. ಇದರಿಂದ ತಪ್ಪಿಸಿಕೊಳ್ಳಲು ಅನೇಕ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ನಡುವೆಯೇ ಹೈದರಬಾದ್​ ಮೂಲದ ವ್ಯಕ್ತಿಯೊಬ್ಬ ವಿನೂತನ ಪ್ರಯತ್ನದ ಮೂಲಕ ಗಮನ ಸೆಳೆದಿದ್ದಾರೆ.

    ಕರೊನಾ ಕುರಿತು ಅರಿವು ಮೂಡಿಸಲು ಕೆ. ಸುಧಾಕರ್​ ಎಂಬುವರು ಕರೊನಾ ಮಾದರಿಯಲ್ಲೇ ಕಾರೊಂದನ್ನು ತಯಾರಿಸಿದ್ದಾರೆ. ಸುಧಾಕರ್​ ಅವರು ಸುಧಾ ಕಾರ್ಸ್​ ಹೆಸರಿನ ಚಮತ್ಕಾರಿ ಮ್ಯೂಸಿಯಂ ನಡೆಸುತ್ತಿದ್ದು, ಬುಧವಾರ ಕರೊನಾ ಕಾರನ್ನು ಬಿಡುಗಡೆ ಮಾಡಿದ್ದಾರೆ.

    ವಿಭಿನ್ನ ಪ್ರಯತ್ನದ ಬಗ್ಗೆ ಅನಿಸಿಕೆ ತಿಳಿಸಿರುವ ಸುಧಾಕರ್​, ಕರೊನಾ ಕುರಿತು ಅರಿವು ಮೂಡಿಸಿ, ಮನೆಯಲ್ಲೇ ಉಳಿಯುವಂತೆ ಜನರನ್ನು ಹುರಿದುಂಬಿಸಲು ಈ ಕರೊನಾ ಕಾರನ್ನು ತಯಾರಿಸಿದ್ದೇನೆ. ಮನೆಯಿಂದಾಚೆಗೆ ಬರದೆ ಸುರಕ್ಷಿತವಾಗಿ ಉಳಿಯಿರಿ ಎಂಬ ಸಂದೇಶವನ್ನು ಈ ಮೂಲಕ ತಿಳಿಸಲು ಇಚ್ಛಿಸುತ್ತೇನೆಂದು ಹೇಳಿದ್ದಾರೆ.

    ಒಂದೇ ಆಸನ ವ್ಯವಸ್ಥೆಯುಳ್ಳ ಕಾರಿಗೆ 100 ಸಿಸಿ ಇಂಜಿನ್​ ಇದೆ. ಆರು ಚಕ್ರವಿದ್ದು, ಫೈಬರ್​ ಬಾಡಿಯನ್ನು ಹೊಂದಿದೆ. ಕಾರು ತಯಾರಿಸಲು 10 ದಿನಗಳು ತೆಗೆದುಕೊಂಡಿತು. ಈ ಕಾರು ಗಂಟೆಗೆ 40 ಕಿ.ಮೀ ವೇಗದಲ್ಲಿ ಚಲಿಸಬಲ್ಲದು ಎನ್ನುತ್ತಾರೆ ಸುಧಾಕರ್​.

    ಜನರಲ್ಲಿ ಅರಿವು ಮೂಡಿಸಲು ಕಾರನ್ನು ಹೈದರಾಬಾದ್​ ಪೊಲೀಸರಿಗೆ ಕೊಡುಗೆಯಾಗಿ ಸುಧಾಕರ್​ ನೀಡಲಿದ್ದಾರೆ. ಸಾಮಾಜಿಕ ಸಂದೇಶಕ್ಕಾಗಿ ಕಾರು ತಯಾರಿಸುವುದು ಸುಧಾಕರ್​ಗೆ ಹೊಸದೇನಲ್ಲ. ವಿಶ್ವದ ಬಹುದೊಡ್ಡ ಟ್ರೈಸೈಕಲ್​ ವಿನ್ಯಾಸಗೊಳಿಸಿದ ಗಿನ್ನೆಸ್​ ವಿಶ್ವ ದಾಖಲೆ ಈಗಾಗಲೇ ಸುಧಾಕರ್​ ಅವರ ಹೆಸರಿನಲ್ಲಿದೆ.

    ವಿವಿಧ ಸಂದರ್ಭದಲ್ಲಿ ವಿವಿಧೋದ್ದೇಶಕ್ಕಾಗಿ ಯಾವಾಗಲೂ ಈ ರೀತಿಯ ಕಾರು ತಯಾರಿಸಿ ಮರಳಿ ಅದನ್ನು ಸಮಾಜಕ್ಕೆ ನೀಡುತ್ತೇನೆ ಎಂದು ಸುಧಾಕರ್ ತಿಳಿಸುತ್ತಾರೆ. ಈ ಹಿಂದೆ ಪಕ್ಷಿಗಳನ್ನು ಪಂಜರದಲ್ಲಿ ಇಡಬೇಡಿ ಎಂಬ ಸಂದೇಶ ಸಾರಲು ಕೇಜ್​ ಕಾರು ಹಾಗೂ ಏಡ್ಸ್​ ಕುರಿತು ಜಾಗೃತಿ ಮೂಡಿಸಲು ಕಾಂಡೋಮ್​ ಬೈಕ್​ ಮತ್ತು ರಸ್ತೆ ಸುರಕ್ಷತೆ ಬಗ್ಗೆ ತಿಳಿಸಲು ಹೆಲ್ಮೆಟ್​ ಕಾರನ್ನು ಸುಧಾಕರ್​ ತಯಾರಿಸಿದ್ದರು.​

    ಅಟೊಮೋಬೈಲ್ಸ್​ನ ಬಿಡಿ ಭಾಗಗಳನ್ನು ಬಳಸಿಕೊಂಡು ಈ ರೀತಿಯ ಕಾರುಗಳನ್ನು ಸುಧಾಕರ್​ ತಯಾರಿಸುತ್ತಾರೆ. ಆದರೆ, ಇವುಗಳನ್ನು ನಿಧಾನಗತಿ ವೇಗದಲ್ಲಿ ಮಾತ್ರ ಚಾಲನೆ ಮಾಡಬೇಕು. ನೆಹರೂ ಮೃಗಾಲಯ ಬಳಿಯ ಮ್ಯೂಸಿಯಂನಲ್ಲಿ ಇವುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. (ಏಜೆನ್ಸೀಸ್​)

    ನನಗೆ ಗೌರವ ಸೂಚಿಸುವ ಬದಲು ಬಡ ಕುಟುಂಬಗಳ ಜವಾಬ್ದಾರಿ ವಹಿಸಿಕೊಳ್ಳಿ: ಪ್ರಧಾನಿ ಮೋದಿ ಸಲಹೆ

    ಕರೊನಾದಿಂದ ಬಚಾವ್​ ಆದ ಬಾಬಿ ಡಾಲ್​ ಸಿಂಗರ್​ ಕನ್ನಿಕಾ ಕಪೂರ್​ಗೆ ಮತ್ತೊಂದು ಸಂಕಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts